ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಕೇಸ್​: ಹತ್ಯೆ ಹಿಂದಿದೆಯಾ ಜಿ-ನೆಟ್​​ ಕಂಪನಿ ಮಾಲೀಕನ ಕೈವಾಡ?

ಏರೋನಿಕ್ಸ್ ಇಂಟರ್ನೆಟ್​ ಕಂಪನಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್​ ಕೊಲೆ ಪ್ರಕರಣಕ್ಕೆ ಸದ್ಯ ಟ್ವಿಸ್ಟ್​ ಸಿಕ್ಕಿದ್ದು, ಜೋಡಿ ಕೊಲೆ ಹಿಂದೆ ಜಿ-ನೆಟ್​​ ಕಂಪನಿ ಮಾಲೀಕ ಅರುಣ್​​​ ಕೈವಾಡ ಇದೆ ಎನ್ನಲಾಗುತ್ತಿದೆ.

ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಕೊಲೆ ಕೇಸ್​: ಹತ್ಯೆ ಹಿಂದಿದೆಯಾ ಜಿ-ನೆಟ್​​ ಕಂಪನಿ ಮಾಲೀಕನ ಕೈವಾಡ?
ಫಣೀಂದ್ರ, ಅರುಣ್, ಆರೋಪಿ ಫಿಲೆಕ್ಸ್​
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jul 12, 2023 | 5:16 PM

ಬೆಂಗಳೂರು: ಏರೋನಿಕ್ಸ್ ಇಂಟರ್ನೆಟ್​ ಕಂಪನಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್​ ಕೊಲೆ ಪ್ರಕರಣ (Murder Case) ಕ್ಕೆ ಸದ್ಯ ಟ್ವಿಸ್ಟ್​ ಸಿಕ್ಕಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಫಿಲೆಕ್ಸ್ ಹೇಳಿಕೆ ನೀಡಿದ್ದಾನೆ.​​​ ಜೋಡಿ ಕೊಲೆ ಹಿಂದೆ ಜಿ-ನೆಟ್​​ ಕಂಪನಿ ಮಾಲೀಕ ಅರುಣ್​​​ ಕೈವಾಡ ಇದೆ ಎನ್ನಲಾಗುತ್ತಿದೆ. ಈ ಮುಂಚೆ ಜಿ-ನೆಟ್ ಕಂಪನಿಯಲ್ಲಿ ಕೊಲೆಯಾದ ಫಣೀಂದ್ರ ಮತ್ತು ವಿನುಕುಮಾರ್​ ಕೆಲಸ ಮಾಡುತ್ತಿದ್ದರು. 7ನೇ ತರಗತಿ ಓದಿದ್ದ ಆರೋಪಿ ಶಬರೀಶ್​ ಅಲಿಯಾಸ್​ ಫಿಲೆಕ್ಸ್​ ಕೂಡಾ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಅರುಣ್, ಫಣೀಂದ್ರ ನಡುವೆ ವೈಮನಸ್ಸು

ಬಳಿಕ ಫಣೀಂದ್ರ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದ. ಜಿ-ನೆಟ್​​ ಕಂಪನಿಯ ಹಲವು ನೌಕರರು ಫಣೀಂದ್ರ ಕಂಪನಿಗೆ ಸೇರಿದ್ದರು. ಇದರಿಂದ ಜಿ-ನೆಟ್​​ ಕಂಪನಿ ನಷ್ಟ ಸಿಲುಕಿದ್ದರಿಂದ ಅರುಣ್​ ಆಕ್ರೋಶಗೊಂಡಿದ್ದ. ಹೀಗಾಗಿ ಅರುಣ್, ಫಣೀಂದ್ರ ನಡುವೆ ವೈಮನಸ್ಸು ಉಂಟಾಗಿತ್ತು.

ಇದನ್ನೂ ಓದಿ: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೊಲೆ ಹಿಂದಿದ್ಯಾ ಹೆಣ್ಣಿನ‌ ಕರಿ ನೆರಳು?

ಅಷ್ಟೇ ಅಲ್ಲದೇ ನಮ್ಮ ಹುಡುಗರು ಫಣೀಂದ್ರನನ್ನು ಮುಗಿಸಿಬಿಡುತ್ತಾರೆಂದು ಅರುಣ್​ ಹೇಳಿದ್ದ. ಜೊತೆಗೆ ಫಿಲೆಕ್ಸ್​​ ಕೂಡ ಫಣೀಂದ್ರನನ್ನು ಮುಗಿಸುವ ಬಗ್ಗೆ ಅರುಣ್ ಜತೆ ಚರ್ಚೆ ನಡೆಸಿದ್ದ. ಅದರಂತೆ ಫಣೀಂದ್ರನನ್ನು  ಕೊಲೆ ಮಾಡಿರೋದಾಗಿ ಮಾಹಿತಿ ನೀಡಿದ್ದಾನೆ.

ಮೂವರ ಬಂಧನ

ಸದ್ಯ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೋಡಿ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಶಬರೀಶ್​ ಅಲಿಯಾಸ್​ ಫಿಲೆಕ್ಸ್, ಶಿವು ಮತ್ತು ಬೆಂಗಳೂರಿನ ರೂಪೇನ ಅಗ್ರಹಾರದ ವಿನಯ್​ ರೆಡ್ಡಿ ಬಂಧಿಸಲಾಗಿದೆ.

ಇದನ್ನೂ ಓದಿ: ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ, ಸಿಇಒ ಹತ್ಯೆ ಪ್ರಕರಣ; ಜೋಕರ್ ಫೆನಿಕ್ಸ್ ಸೇರಿ ಮೂವರ ಬಂಧನ

6 ತಿಂಗಳು ನಿಂದ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದ ಕಿರತಾಕರು

ಫಣಿಂದ್ರನನ್ನ ಮುಗಿಸಲು ಸತತ 6 ತಿಂಗಳಿನಿಂದ ಕೊಲೆ ಮಾಡಲು ಕಿರತಾಕರು ಪ್ಲ್ಯಾನ್ ಮಾಡಿದ್ದರು. ಕೊಲೆಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದರು ಧೈರ್ಯ ಇರಲಿಲ್ಲ. ಹೀಗಾಗಿ ನಿನ್ನೆ ಕೊಲೆಗೆ ಮುನ್ನ ಧೈರ್ಯ ಬರಲಿ ಎಂದು ಎಣ್ಣೆ ಪಾರ್ಟಿ ಮಾಡಿದ್ದರು. ಸಿಲ್ಕ್‌ ಬೋರ್ಡ್‌ನಲ್ಲಿ ಎಣ್ಣೆ ಹೊಡದು ಹೋಗಿದ್ದು, ಬ್ಯಾಗ್‌ನಲ್ಲಿ ಮಚ್ಚು ಹಿಡಿದು ಹೋಗಿದ್ದರು. ಆಫೀಸ್‌ನಲ್ಲಿ ಸ್ವತ ಫಣೀಂದ್ರ ರಿಸೀವ್ ಮಾಡಿಕೊಂಡಿದ್ದ. ಕೆಲಸ ಕೊಡಿ ಎಂದು ಫೆಲಿಕ್ಸ್ ಕೇಳಿಕೊಂಡಿದ್ದ. ಇದೇ ನೆಪದಲ್ಲಿಯೇ ಕೊಲೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:02 pm, Wed, 12 July 23

ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೈಕ್‌ನಲ್ಲಿದ್ದಾಗ ರಸ್ತೆ ಗುಂಡಿಗೆ ಬಿದ್ದು ಪರದಾಡಿದ ಡೆಲಿವರಿ ಬಾಯ್
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಬೆಂಗಳೂರು: ಇನ್​ಸ್ಟಾಗ್ರಾಮ್ ಸ್ಟಾರ್ ‘ಯೂನೀಸ್ ಝರೂರಾ’ ಪೊಲೀಸ್ ವಶಕ್ಕೆ
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ