Video: ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತಾರಂತೆ : ಯತ್ನಾಳ್

Video: ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗ್ತಾರಂತೆ : ಯತ್ನಾಳ್

ಅಕ್ಷತಾ ವರ್ಕಾಡಿ
|

Updated on:May 04, 2024 | 4:29 PM

"ಪವಿತ್ರವಾದ ಹಾಲುಮತ ಸಮಾಜದಲ್ಲಿ ಹುಟ್ಟಿ ಅಭಿಮಾನ ಪಡಬೇಕು. ಅದನ್ನ ಬಿಟ್ಟು ನಾನು ಮುಸಲ್ಮಾನ ಆಗ್ತೇನೆ, ಗಡ್ಡ ಬಿಡ್ತೇನೆ, ಕಟ್ ಮಾಡ್ಕೊಳ್ತೇನೆ ಅಂದ್ರೆ ಹೆಂಗ್ ಸಿದ್ದರಾಮಯ್ಯನವರೆ...?" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಸಿಎಂ ಸಿದ್ದರಾಮಯ್ಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ ಪರ ಕಮತಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಮೂಲಕ ಸಿಎಂ ಸಿದ್ದರಾಮಯ್ಯವರ ಕಾಲೆಳೆದಿದ್ದಾರೆ. “ಪವಿತ್ರವಾದ ಹಾಲುಮತ ಸಮಾಜದಲ್ಲಿ ಹುಟ್ಟಿ ಅಭಿಮಾನ ಪಡಬೇಕು. ಅದನ್ನ ಬಿಟ್ಟು ನಾನು ಮುಸಲ್ಮಾನ ಆಗ್ತೇನೆ, ಗಡ್ಡ ಬಿಡ್ತೇನೆ, ಕಟ್ ಮಾಡ್ಕೊಳ್ತೇನೆ ಅಂದ್ರೆ ಹೆಂಗ್ ಸಿದ್ದರಾಮಯ್ಯನವರೆ…?” ಎಂದು ಯತ್ನಾಳ್​ ಸಿಎಂ ಸಿದ್ದರಾಮಯ್ಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಲ್ಲದೇ “ಎಲ್ಲರೂ ಧರ್ಮ ಉಳಿಸುವ ನಿಟ್ಟಿನಲ್ಲಿ ಮತದಾನ ಮಾಡಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ಹಿಂದು ಧರ್ಮವನ್ನು ಉಳಿಸಿ, ಬೆಳೆಸಿಬೇಕಿದೆ” ಎಂದು ಯತ್ನಾಳ್​​ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಯಾವುದೇ ಹಗರಣ ಮಾಡಿಲ್ಲವೆಂದು ಸುಧಾಕರ್ ಆಣೆ ಪ್ರಮಾಣ ಮಾಡ್ತಾರಾ? ಪ್ರದೀಪ್ ಈಶ್ವರ್ ಸವಾಲ್

Published on: May 04, 2024 04:27 PM