ಬಾಗಲಕೋಟೆ: ಕಳೆದ ಕೆಲ ದಿನಗಳಿಂದ ಮಕ್ಕಳ ಕಳ್ಳರ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿವೆ. ಊರಿನ ಜನರು ಮಕ್ಕಳು ಕಳ್ಳರೆಂದು ಭಾವಿಸಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದೇ ರೀತಿಯ ಘಟನೆ ಮರು ಕಳಿಸಿದೆ. ಮಕ್ಕಳ ಕಳ್ಳರೆಂದು ಅನುಮಾನಗೊಂಡು ಜನರು ಕಾರು ಬೆನ್ನತ್ತಿದ್ದು ತಪ್ಪಿಸಿಕೊಳ್ಳುವಾಗ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾದ ಘಟನೆ ನಡೆದಿದೆ.
ಮಕ್ಕಳ ಕಳ್ಳರೆಂದು ಭಾವಿಸಿ ಬೀಳಗಿಯಿಂದ ಗ್ರಾಮದ ಜನರು ಬೈಕ್ನಲ್ಲಿ ಕಾರು ಬೆನ್ನತ್ತಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವಾಗ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ದೇವರಾಜ ಭಾರತಿ, ಜಯದೀಪ ಜಗದಾಳೆ, ಮೊಹಮ್ಮದ್ ಇಲಿಯಾಸ್ಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಬೆಳಗಾವಿ, ಕೊಪ್ಪಳದಲ್ಲಿ ಹೆಚ್ಚಾದ ಮಕ್ಕಳ ಕಳ್ಳರ ವದಂತಿ: ಇದು ಸುಳ್ಳು ಸುದ್ದಿ, ಇದಕ್ಕೆ ಕಿವಿ ಕೊಡ ಬೇಡಿ ಎಂದ ಎಸ್ಪಿ
ಮಕ್ಕಳ ಕಳ್ಳರು ಎಂದು ಶಂಕಿಸಿ 4 ಸಾಧುಗಳ ಮೇಲೆ ಹಲ್ಲೆ
ಮುಂಬೈ(ಸೆ.14): ಮಂಗಳವಾರ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಎಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಜಿಲ್ಲೆಯ ಲವಣ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೋಲುಗಳಿಂದ ಜನ ಇರುವ ಪ್ರದೇಶದಲ್ಲಿ ಸಾಧುಗಳನ್ನು ಥಳಿಸುತ್ತಿರುವುದು ಕಂಡುಬಂದಿದೆ. ಆದರೆ ಈ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಯಾವುದೇ ದೂರು ಸ್ವೀಕರಿಸಿಲ್ಲ, ಆದರೆ ವೈರಲ್ ವೀಡಿಯೊಗಳನ್ನು ಪರಿಶೀಲಿಸುತ್ತಿದ್ದೇವೆ ಈ ಘಟನೆಯ ಬಗ್ಗೆ ನಿಜಾಂಶ ಏನು ಎಂದು ಪರಿಶೀಲಿಸುತ್ತಿದ್ದೇವೆ. ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸಾಂಗ್ಲಿ ಎಸ್ಪಿ ದೀಕ್ಷಿತ್ ಗೆಡಮ್ ಸಂಸ್ಥೆ ANI ತಿಳಿಸಿದ್ದಾರೆ
ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಮ್ ಘಟನೆಯನ್ನು ಖಂಡಿಸಿದ್ದಾರೆ ಮತ್ತು ರಾಜ್ಯ ಸರ್ಕಾರವು ಸಾಧುಗಳೊಂದಿಗೆ ಇಂತಹ ದುಷ್ಕೃತ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:11 pm, Sun, 18 September 22