AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಫ್​ಡಿಎ ನೌಕರಿ ಕೊಡಿಸುವುದಾಗಿ ತನ್ನದೇ ಸಂಬಂಧಿ ಯುವಕನಿಂದ ಹಣ ಪಡೆದು ವಂಚಿಸಿದ ಮಹಿಳಾ ಪಿಎಸ್​ಐ

2020 ರಲ್ಲೆ ಎಫ್​ಡಿಎ ಪ್ರಶ್ನೆ ಪತ್ರಿಕೆ ಲೀಕ್ ಆಗಿ ರಾಜ್ಯಾದ್ಯಂತ ಸದ್ದು ಮಾಡಿತ್ತು .ಅದೇ ವರ್ಷದಲ್ಲೇ ಅಶ್ವಿನಿ ಅನಂತಪುರ ಇಂತಹದ್ದೊಂದು ಡೀಲ್ ಮಾಡಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಎಫ್​ಡಿಎ ನೌಕರಿ ಕೊಡಿಸುವುದಾಗಿ ತನ್ನದೇ ಸಂಬಂಧಿ ಯುವಕನಿಂದ ಹಣ ಪಡೆದು ವಂಚಿಸಿದ ಮಹಿಳಾ ಪಿಎಸ್​ಐ
ಬಸವರಾಜ ಜಳಕಿ, ಅಶ್ವಿನಿ ಅನಂತಪುರ
TV9 Web
| Updated By: ಆಯೇಷಾ ಬಾನು|

Updated on:Sep 17, 2022 | 2:54 PM

Share

ಬಾಗಲಕೋಟೆ: ಹೇಗಾದರೂ ಮಾಡಿ ಒಂದು ಸರಕಾರಿ ಕೆಲಸ ಪಡೆಯಬೇಕು. ಸರಕಾರಿ ಕೆಲಸ ಸಿಕ್ರೆ ಜೀವನ ಸೆಟಲ್ ಆಯ್ತು ಅಂತ ಅನೇಕರು ವಿವಿಧ ಕಸರತ್ತು ನಡೆಸುತ್ತಿರ್ತಾರೆ‌. ಇಂತಹ‌ ಮನಸ್ಥಿತಿ ಇರುವವರನ್ನು ಇಟ್ಟುಕೊಂಡು ಕೆಲವರು ನೌಕರಿ ಆಮಿಷ ತೋರಿಸಿ ಹಣ ಹೊಡೆಯುವವರು ಇದ್ದಾರೆ. ಇಂತಹ ಅದೆಷ್ಟೋ ಉದಾಹರಣೆ ನಮ್ಮ ಕಣ್ಮುಂದೆ ಇವೆ. ಈಗ ಇಂತಹ ವಂಚನೆ ಮಾಡಿದೋರು ಓರ್ವ ಮಹಿಳಾ ಪಿಎಸ್ಐ. ನೌಕರಿ ಕೊಡಿಸೋದಾಗಿ ಹೇಳಿ ಸಂಬಂಧಿ ಯುವಕನಿಂದ ಲಕ್ಷ ಲಕ್ಷ ಹಣ ಪಡೆದು ಕೈಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಅಶ್ವಿನಿ ಅನಂತಪುರ ಎಂಬ ಮಹಿಳಾ ಸಬ್ ಇನ್ಸ್ಪೆಕ್ಟರ್ ಎಪ್​ಡಿಎ ನೌಕರಿ ಕೊಡಿಸೋದಾಗಿ ಹೇಳಿ ಬಸವರಾಜ ಜಳಕಿ ಎಂಬ ಯುವಕನಿಂದ ಎರಡು ಲಕ್ಷ ಹಣ ಪಡೆದು ವಂಚಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಬಸವರಾಜ ಜಳಕಿ ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದ ನಿವಾಸಿಯಾಗಿದ್ದಾನೆ. ಈತನಿಗೆ 2020ರ ಅವಧಿಯಲ್ಲಿ ಎಫ್ ಡಿ ಎ ನೌಕರಿ ಕೊಡಿಸೋದಾಗಿ ಹೇಳಿ ಎರಡು ಲಕ್ಷ ಹಣ ಪಡೆದಿದ್ದಾರಂತೆ. ಆದರೆ ಹಣವನ್ನು ನೇರವಾಗಿ ಪಡೆಯದೆ ತಮ್ಮ ತಂದೆಯ ಖಾತೆ ಮೂಲಕ ಬಸವರಾಜ ಸಹೋದರ ಸಂಗೇಶ್ ಅವರಿಂದ ಹಣ ಹಾಕಿಸಿಕೊಂಡಿದ್ದಾರೆ. ಇನ್ನು ಇದಕ್ಕೆ ಸಾಕ್ಷಿ ಎಂಬಂತೆ ಸಬ್ ಇನ್ಸ್ಪೆಕ್ಟರ್ ಅಶ್ವಿನಿ ಹಾಗೂ ಬಸವರಾಜ ಸಹೋದರ ಸಂಗಮೇಶ್ ಮಾತಾಡಿದ ಅಡಿಯೊ ಲಭ್ಯವಾಗಿದೆ. ಇದರಲ್ಲಿ ಹಣಕಾಸಿನ ಬಗ್ಗೆ ಮಾತಾಡಿದ ಅಡಿಯೊದಲ್ಲಿ ಒಟ್ಟು ಹದಿನೈದು ಲಕ್ಷ ಆಗುತ್ತದೆ. ಸದ್ಯ ಅಡ್ವಾನ್ಸ್ ಆಗಿ ಎರಡು ಲಕ್ಷ ಕೇಳ್ತಿದಾರೆ ಅಂತ ಮಾತಾಡಿದ್ದಾರೆ. ಜೊತೆಗೆ ಹಣ ವರ್ಗಾವಣೆ ಬಗ್ಗೆ ಬ್ಯಾಂಕ್ ದಾಖಲಾತಿ ಸಿಕ್ಕಿವೆ. ಇದನ್ನೂ ಓದಿ: ‘ದಯವಿಟ್ಟು ನಿಲ್ಲಿಸಿ’; ಕೇರಳದಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆಗೆ ಮರುಗಿದ ರಾಹುಲ್- ಧವನ್

ಇಲ್ಲಿ ಗಮನಿಸಬೇಕಾದ ಅಂಶವೆಂದರೆ 2020 ರಲ್ಲೆ ಎಫ್​ಡಿಎ ಪ್ರಶ್ನೆ ಪತ್ರಿಕೆ ಲೀಕ್ ಆಗಿ ರಾಜ್ಯಾದ್ಯಂತ ಸದ್ದು ಮಾಡಿತ್ತು .ಅದೇ ವರ್ಷದಲ್ಲೇ ಅಶ್ವಿನಿ ಅನಂತಪುರ ಇಂತಹದ್ದೊಂದು ಡೀಲ್ ಮಾಡಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇಲ್ಲಿ ಅಶ್ವಿನಿ ಅನಂತಪುರ ಕೂಡ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದ ನಿವಾಸಿ. ಮೇಲಾಗಿ ಎಫ್ ಡಿ ಎ ಅಭ್ಯರ್ಥಿಯಾಗಿದ್ದ ಬಸವರಾಜ ಸಂಬಂಧಿ ಬೇರೆ. ಇದೇ ಸಹವಾಸದಿಂದ ಬಸವರಾಜ ಸಹೋದರ ಸಂಗಮೇಶ್ ಅಶ್ವಿನಿ ನಂಬಿ ಹಣ ಕೊಟ್ಟಿದ್ದಾರೆ. ಆದರೆ ಮನಮುಟ್ಟುವಂತೆ ಮಾತಾಡಿದ ಮರಳು ಮಾಡಿದ ಅಶ್ವಿನಿ ನೌಕರಿಯೂ ಇಲ್ಲ ಹಣವೂ ಇಲ್ಲ. ಕೇಳಿದರೆ ಯಾರು ನೀನು? ನೀವೆ ನಮಗೆ ಒಂಬತ್ತು ಲಕ್ಷ ಹಣ ಕೊಡಬೇಕು. ಹಿಂದೆ ನೀವು ಮನೆ ಕಟ್ಟುವಾಗ ನಮ್ಮಿಂದ ಹಣ ಪಡೆದಿದ್ದೀರಿ ವಾಪಸ್ ಕೊಟ್ಟಿಲ್ಲ ಅಂತ ಆವಾಜ್ ಹಾಕುತ್ತಿದ್ದಾರಂತೆ. ಇನ್ನು ಇತ್ತೀಚೆಗಂತೂ ಹಣದ ಬಗ್ಗೆ ಮಾತಾಡಿದ್ದ ಬಸವರಾಜ ಸಹೋದರ ಸಂಗಮೇಶ್ ಅವರ ಕರೆ ಕೂಡ ಸ್ವೀಕರಿಸದೆ ಕಟ್ ಮಾಡುತ್ತಿದ್ದಾರೆ.

ಇಷ್ಟೆಲ್ಲ ಆದರೂ ದೂರು ಕೊಡಲು ಬಸವರಾಜ ಕುಟುಂಬಸ್ಥರು ಭಯದಲ್ಲಿದ್ದಾರೆ‌. ಅಶ್ವಿನಿ ಅನಂತಪುರ ಒಬ್ಬ ಪ್ರಭಾವಿ ಪೊಲೀಸ್ ಇಲಾಖೆ ಸಬ್ ಇನ್ಸ್ಪೆಕ್ಟರ್ ಬೇರೆ ಎಂದು ಸುಮ್ಮನಿದ್ದಾರೆ. ಅಶ್ವಿನಿ ಸದ್ಯ ಮೈಸೂರಿನಲ್ಲಿ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಇದ್ದಾರೆ ಎಂಬ ಮಾಹಿತಿ ಇದ್ದು, ಮನೆಯಲ್ಲಿ ಈ‌ ಬಗ್ಗೆ ಚರ್ಚಿಸಿ ದೂರು ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳೋದಾಗಿ ಬಸವರಾಜ ಸಹೋದರ ಸಂಗಮೇಶ್ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಅಶ್ವಿನಿ ಅವರಿಗೆ ಕರೆ ಮಾಡಿದರ ಕರೆ ಸ್ವೀಕರಿಸಿಲ್ಲ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:54 pm, Sat, 17 September 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ