ಬಾಗಲಕೋಟೆ: ಪ್ರವಾಹದ ನಡುವೆಯೇ ನದಿಯಲ್ಲಿ ಈಜಿ ಹಾಲು ಮಾರಾಟಕ್ಕೆ ಬರುತ್ತಿರುವ ಜನರು!

| Updated By: shivaprasad.hs

Updated on: Jul 24, 2021 | 2:48 PM

Bagalakote: ಬಾಗಲಕೋಟೆ ಜಿಲ್ಲೆಯ ಕೆಲ ಹಳ್ಳಿಗಳ ಯುವಕರು ಪ್ರವಾಹದ ಮಧ್ಯೆಯೂ ಈಜಿಕೊಂಡು ಹೋಗಿ ಡೈರಿಗಳಿಗೆ ಹಾಲು ಹಾಕುತ್ತಿದ್ದಾರೆ. ಈ ನಡುವೆ ಜಿಲ್ಲೆಯ ಮಿರ್ಜಿ ಗ್ರಾಮ ಮುಳುಗಡೆಯ ಭೀತಿಯನ್ನು ಎದುರಿಸುತ್ತಿದೆ.

ಬಾಗಲಕೋಟೆ: ಪ್ರವಾಹದ ನಡುವೆಯೇ ನದಿಯಲ್ಲಿ ಈಜಿ ಹಾಲು ಮಾರಾಟಕ್ಕೆ ಬರುತ್ತಿರುವ ಜನರು!
ಬಾಗಲಕೋಟೆಯಲ್ಲಿ ಮಳೆಯಿಂದ ಉಂಟಾದ ನೆರೆ
Follow us on

ಬಾಗಲಕೋಟೆ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದರೂ ಜನರು ತಮ್ಮ ದಿನನಿತ್ಯದ ಕಾಯಕವನ್ನು ತಪ್ಪಿಸಿಲ್ಲ. ಮಖಂಡಿ ತಾಲೂಕಿನ ತುಬಚಿ, ಮುತ್ತೂರು ಮೊದಲಾದ ಗ್ರಾಮಗಳು ಸಂಪರ್ಕವನ್ನು ಕಳೆದುಕೊಂಡಿವೆ. ಅದಾಗ್ಯೂ ನದಿಯಲ್ಲಿ ಈಜಿಕೊಂಡು ಗ್ರಾಮದ ಯುವಕರು ಹಾಲು ಮಾರಾಟಕ್ಕೆ ಬರುತ್ತಿದ್ದಾರೆ. ನಿತ್ಯವೂ ಹಾಲು ಕರೆದು ಡೇರಿಗೆ ಹಾಕಲು ಬರುವ ಜನರು ಪ್ರವಾಹದ ಸಂದರ್ಭದಲ್ಲೂ ಅದನ್ನು ಮುಂದುವರೆಸುತ್ತಿದ್ದಾರೆ. 

ಕೃಷ್ಣಾ ನದಿಯಲ್ಲಿ ಇಂದು 2 ಲಕ್ಷ 18 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಅದರಿಂದಾಗಿ ಮುತ್ತೂರು, ತುಬಚಿ ನಡುಗಡ್ಡೆಯಂತಾಗಿದೆ. ಅಲ್ಲಿ ನೂರಾರು ಜನರು- ಜಾನುವಾರುಗಳು ಆತಂಕದಲ್ಲಿದ್ದಾರೆ. ನದಿ ಹರಿವಿನ ಅಪಾಯದ ಮಧ್ಯದಲ್ಲೂ ಜನರು ಈಜಿಕಂಡು ಗ್ರಾಮಗಳಿಗೆ ಹೋಗಿ ಬರುತ್ತಿದ್ದಾರೆ.

ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಘಟಪ್ರಭಾ: ಮಿರ್ಜಿ ಗ್ರಾಮಕ್ಕೆ ಮುಳುಗಡೆಯ ಭೀತಿ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿಯಲ್ಲಿ ಘಟಪ್ರಭಾ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಮಿರ್ಜಿ ಗ್ರಾಮದ ಸುತ್ತಲೂ ನದಿಯ ನೀರು ಆವರಿಸಿದೆ. ಆದ್ದರಿಂದ ಮಿರ್ಜಿ ಗ್ರಾಮ ಮುಳುಗಡೆಯಾಗುವ ಭೀತಿ ಎದುರಾಗಿದೆ. ಮಿರ್ಜಿ- ಘಟಪ್ರಭಾ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಸೇತುವೆ ಮೇಲೆ 6 ಅಡಿಯಷ್ಟು ನೀರು ನಿಂತಿದೆ. ಅಕ್ಕಪಕ್ಕದ ನೂರಾರು ಎಕರೆಯಲ್ಲಿದ್ದ ಕಬ್ಬಿನ ಬೆಳೆ ಜಲಾವೃತಗೊಂಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಈ ಕುರಿತ ವಿಡಿಯೊ ಸ್ಟೋರಿ ಇಲ್ಲಿದೆ.

ಇದನ್ನೂ ಓದಿ:

Maharashtra Rains: ಮಹಾರಾಷ್ಟ್ರದಲ್ಲಿ ಮಳೆಯ ರೌದ್ರಾವತಾರ; ರತ್ನಗಿರಿ ಆಸ್ಪತ್ರೆಗೆ ನೀರು ನುಗ್ಗಿ 8 ಕೋವಿಡ್ ರೋಗಿಗಳು ಸಾವು

ಭೀಕರ ಪ್ರವಾಹಕ್ಕೆ ತತ್ತರಿಸಿದ ಬೆಳಗಾವಿ; ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ ಲೈನ್​ಮನ್​ಗಳು!

Karnataka Rain: ಬೆಳಗಾವಿಯ ಅಡಿಬಟ್ಟಿ ಗ್ರಾಮದಲ್ಲಿ ರಕ್ಷಣೆಗಾಗಿ ದಂಪತಿ, ಮಗು ಮೊರೆ

(Villagers of Tubachi in Bagalkote district goes through swim to reach nearby villages to put milk in Dairy)