ಬಾಗಲಕೋಟೆ, ಅಕ್ಟೋಬರ್ 21: ಲೋಕಸಭಾ ಚುನಾವಣೆಗೂ ಮೊದಲೇ ಸಾಕಷ್ಟು ಬದಲಾವಣೆ ಆಗುತ್ತೆ. ಆಪರೇಷನ್ ಹಸ್ತ ಆಗಲ್ಲ, ಆಪರೇಷನ್ ಕಮಲ ಆಗುತ್ತೆ ಕಾದುನೋಡಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ (Murugesh Nirani) ಹೇಳಿದ್ದಾರೆ. ಬಾಗಲಕೋಟೆ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಬಂದಮೇಲೆ ಯಾವುದೇ ಅಭಿವೃದ್ಧಿ ಕಾರ್ಯ ನಡೀತಿಲ್ಲ. ಬಿಟ್ಟಿ ಭಾಗ್ಯದಿಂದ ಈ ವರ್ಷ 25,000 ಕೋಟಿ ರೂ. ಖರ್ಚು ಮಾಡಲ್ಲ. ಇದರಿಂದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ಬಹಳ ಬೇಸತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರಿಗೆ ಬಸ್ನಲ್ಲಿ ಸೀಟ್ ಸಿಗುತ್ತಿಲ್ಲ. ಮನೆ, ಸಣ್ಣ ಕೈಗಾರಿಕೆಗಳಿಗೆ ಕನಿಷ್ಠ 60% ಹೆಚ್ಚುವರಿ ಬಿಲ್ ಬರುತ್ತಿದೆ. ಕರ್ನಾಟಕದಲ್ಲಿ ಈಗ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಒಬ್ಬರು ಐದು ವರ್ಷ ಸಿಎಂ ಇರಲಿ ಅಂತಾರೆ, ಇನ್ನಿಬ್ಬರು ಎರಡುವರೆ ವರ್ಷಕ್ಕೆ ಸಿಎಂ ಬದಲಾಗುತ್ತಾರೆ ಅಂತಾರೆ. ಇದನ್ನ ನೋಡಿದರೆ ಆದಷ್ಟು ಬೇಗ ಸರ್ಕಾರ ಬೀಳುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.
ಶಾಸಕ ಜೆ.ಟಿ ಪಾಟೀಲ್ ಈ ಹಿಂದೆ ಮಂಜೂರಾಗಿರುವ ಎಲ್ಲ ಕಾಮಗಾರಿ ಬಂದ್ ಮಾಡಿಸಿದ್ದಾರೆ. ನೀರಾವರಿ ಕಾಮಗಾರಿಗಳನ್ನು ಬಂದ್ ಮಾಡಿಸಿದ್ದಾರೆ. ನೀವು ಅನುಭವಿಗಳಿದ್ದೀರಿ, ಹಿಂದೆ ಮಂಜೂರಾದಂತ ಕೆಲಸಗಳನ್ನ ಪೂರ್ಣಗೊಳಿಸಿ. ಶಾಸಕ ಜೆ.ಟಿ.ಪಾಟೀಲ್ ಪ್ರಾಮಾಣಿಕ ಶಾಸಕ ಅಂತಾ ಹೇಳಿಕೊಳ್ಳುತ್ತಿದ್ದರು. ದೇವರ ಆಣೆ ಮಾಡಿ ಒಳಗಡೆ ಬನ್ನಿ ಅಂತಾರೆ.
ಇದನ್ನೂ ಓದಿ: ದೇವೇಗೌಡರನ್ನು ತುಮಕೂರಿಗೆ ಕರೆದೊಯ್ದು ಟೋಪಿ ಹಾಕಿದ್ರು: ಕಾಂಗ್ರೆಸ್ ವಿರುದ್ಧ ಹೆಚ್ಡಿ ರೇವಣ್ಣ ವಾಗ್ದಾಳಿ
ನಮಗೆ ಏನು ಮುಟ್ಟಿಸಬೇಕೋ, ಅದನ್ನ ಮುಟ್ಟಿಸಿ ಅಂತಿದ್ದಾರೆ. ಜೆ.ಟಿ ಪಾಟೀಲ್ ಹೆಸರು ಹೇಳಿ, ಗುತ್ತಿಗೆದಾರರು ವಿಷ ತಗೊಂಡು ಆತ್ಮಹತ್ಯೆ ಮಾಡಿಕೊಂಡರು ಅಚ್ಚರಿಯಿಲ್ಲ. ಬೀಳಗಿಯಲ್ಲಿ ಅತೀ ಭ್ರಷ್ಟಾಚಾರ ನಡೆಯುತ್ತಿದೆ. ಇದೇ ರೀತಿ ಮುಂದುವದರೆ ನಾವು ಹೋರಾಟ ಮಾಡಿ, ಅವರನ್ನು ಬೀದಿಯಲ್ಲಿ ಓಡಾದಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಮೇಲೆ ಸಿಬಿಐ ತೂಗುಗತ್ತಿ ವಿಚಾರವಾಗಿ ಮಾತನಾಡಿದ ಅವರು, ಅವರು ತಪ್ಪು ಮಾಡಿರದೇ ಇದ್ದರೆ ಅವರಿಗೇನು ಆಗಲ್ಲ. ತಪ್ಪಿತಸ್ಥರಾಗಿದ್ದರೆ ಅವರಿಗೆ ಶಿಕ್ಷೆ ಆಗುತ್ತೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಯಾರದ್ದೋ ಒತ್ತಡಕ್ಕೆ ಮಣಿದು ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ದಾರೆ: ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ
ಶಾಸಕರಿಗೆ ಡಿಕೆ ಶಿವಕುಮಾರ್ ವಾರ್ನ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಅವರ ಪಕ್ಷದ್ದು ಅದು, ಯಾರು ಹೇಳಿಕೆ ಕೊಡಬಾರದು ಅಂತ ಹೇಳಿದಾರೆ. ಅಂದರೆ ಎಲ್ಲ ಸರಿಯಾಗಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಯಡಿಯೂರಪ್ಪ ಸಿಎಂ ಇದ್ದಾಗ ನಮಗೆಂದು ಹೀಗೆ ಹೇಳಿರಲಿಲ್ಲ. ನೀವು ಯಾರು ಮಾತಾಡಬೇಡಿ ಅಂದಿರಲಿಲ್ಲ. ನಮ್ಮ ಮೇಲೆ ಅವರಿಗೆ ನಂಬಿಕೆ ಇತ್ತು. ಈಗ ಶಾಸಕರ ಮೇಲೆ ಆತ್ಮವಿಶ್ವಾಸ ಇಲ್ಲ ಅನ್ನೋದಕ್ಕೆ ಮಾತಾಡಬೇಡಿ ಅಂತಿದ್ದಾರೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಆಗಲು ತಮಗೆ ಸಾಮರ್ಥ್ಯ ಇಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಯಾವುದನ್ನೂ ಬೇಡಲ್ಲ. ಪಕ್ಷ ನಮ್ಮನ್ನು ಗುರುತಿಸಿ ಏನು ಜವಾಬ್ದಾರಿ ಕೊಡುತ್ತೆ ಅದನ್ನು ಚಾಚು ತಪ್ಪದೆ ಮಾಡುವಂತ ಕೆಲಸ ಮಾಡುತ್ತೇನೆ. ನಾನು ಕಳೆದ ಬಾರಿಯೇ ಹೇಳಿದ್ದೆ. ಮುಂದಿನ ಬಾರಿ ಎಂಎಲ್ಎ ಟಿಕೆಟ್ ಇಲ್ಲಪಾ ಪಕ್ಷದ ಕೆಲಸ ಮಾಡಬೇಕು ಅಂದರು. ಅತಿ ಸಂತೋಷದಿಂದ ಮಾಡುತ್ತೇನೆ ಅಂದಿದ್ದೆ. ನಾನು ರಾಜ್ಯಾಧ್ಯಕ್ಷ ರೇಸ್ನಲ್ಲಿ ಇದಿನಿ ಅಂತಲ್ಲ ಇಲ್ಲ ಅಂತಲ್ಲ. ನನ್ನ ಸಾಮರ್ಥ್ಯ ಗುರುತಿಸಿ ಪಕ್ಷ ಏನು ಜವಾಬ್ದಾರಿ ಕೊಡುತ್ತೆ. ಆ ಜವಾಬ್ದಾರಿ ನಿಭಾಯಿಸುವುಕ್ಕೆ ಸಿದ್ದ ಇದ್ದೇನೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:44 pm, Sat, 21 October 23