ಯಾರದ್ದೋ ಒತ್ತಡಕ್ಕೆ ಮಣಿದು ಪೂರ್ಣಿಮಾ ಶ್ರೀನಿವಾಸ್ ಕಾಂಗ್ರೆಸ್ ಸೇರಿದ್ದಾರೆ: ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ
ನಮ್ಮ ಪಕ್ಷದ ಮೇಲೆ ಪೂರ್ಣಿಮಾ ಯಾವುದೇ ಅಸಮಾಧಾನ ಹೇಳಿಲ್ಲ. ಹೋಗುವವರಿಗೆ, ಬರುವವರಿಗೆ ಸ್ವಾತಂತ್ರ್ಯವಿದೆ. ಪೂರ್ಣಿಮಾ ಶ್ರೀನಿವಾಸ್ ಮೇಲೆ ಏನೋ ಒತ್ತಡವಿದೆ. ಆ ಒತ್ತಡದಿಂದಾಗಿ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಶ್ರೀನಿವಾಸ್ ಮೇಲೆ ಡಿಸಿಎಂ ಡಿಕೆ ಶಿವಕುಮಾರ್ ಒತ್ತಡ ಹಾಕಿರಬಹುದು ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರು, ಅಕ್ಟೋಬರ್ 21: ನಮ್ಮ ಪಕ್ಷದ ಮೇಲೆ ಪೂರ್ಣಿಮಾ ಯಾವುದೇ ಅಸಮಾಧಾನ ಹೇಳಿಲ್ಲ. ಹೋಗುವವರಿಗೆ, ಬರುವವರಿಗೆ ಸ್ವಾತಂತ್ರ್ಯವಿದೆ. ಪೂರ್ಣಿಮಾ ಶ್ರೀನಿವಾಸ್ ಮೇಲೆ ಏನೋ ಒತ್ತಡವಿದೆ. ಆ ಒತ್ತಡದಿಂದಾಗಿ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೂರ್ಣಿಮಾಗೆ ಪತಿ ಶ್ರೀನಿವಾಸ್ರಿಂದ ಒತ್ತಡ ಹೆಚ್ಚಿತ್ತು ಅನ್ನಿಸುತ್ತೆ. ಪತಿಯ ರಾಜಕೀಯ ಬೆಳವಣಿಗೆಗೆ ಈ ರೀತಿ ನಿರ್ಧಾರ ತೆಗೆದುಕೊಂಡಿರಬಹುದು. ಶ್ರೀನಿವಾಸ್ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಒತ್ತಡ ಹಾಕಿರಬಹುದು ಎಂದು ಹೇಳಿದ್ದಾರೆ.
ಪೂರ್ಣಿಮಾಗೆ ತಂದೆ ಬಗ್ಗೆ ಗೊತ್ತಿದ್ದರೆ ಪಾಪ ಅವರು ಹೋಗುತ್ತಿರಲಿಲ್ಲ. ನನ್ನ ಎಕ್ಕಡ ಕೂಡ ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಇದೆಲ್ಲಾ ಮಾಜಿ ಶಾಸಕಿ ಪೂರ್ಣಿಮಾಗೆ ಗೊತ್ತಾಗಲಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಡಿಸಿಎಂ ಅನ್ನುವುದಕ್ಕಿಂತ ಆಪರೇಷನ್ ಮಂತ್ರಿ ಅನ್ನುವುದು ಸೂಕ್ತ
ಕಾಂಗ್ರೆಸ್ನಲ್ಲಿನ ಬೇಗುದಿ ಯಾವಾಗ ಬ್ಲಾಸ್ಟ್ ಆಗುತ್ತದೋ ಗೊತ್ತಿಲ್ಲ. ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಒಳಗೊಳಗೆ ಕೊತ ಕೊತ ಕುದಿಯುತ್ತಿದೆ. ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹೋಗುತ್ತೋ ಗೊತ್ತಿಲ್ಲ. ಅದಕ್ಕೆ ಈ ರೀತಿಯ ಅಪರೇಷನ್ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ಗೆ ಕೊಟ್ಟಿರುವ ಹುದ್ದೆ ನಿಭಾಯಿಸಲು ಆಗುತ್ತಿಲ್ಲ. ಆಪರೇಷನ್ಗಾಗಿ ಜೆಡಿಎಸ್, ಬಿಜೆಪಿಯವರ ಮನೆಗೆ ಅವರೇ ಹೋಗುತ್ತಾರೆ ಡಿಸಿಎಂ ಅನ್ನೋದಕ್ಕಿಂತ ಆಪರೇಷನ್ ಮಂತ್ರಿ ಅನ್ನೋದು ಸೂಕ್ತ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್
ಬಿಜೆಪಿಯ ಹಿರಿಯ ಮುಖಂಡರಾದ ಮಾಜಿ ಶಾಸಕ, ಹಿಂದುಳಿದ ವರ್ಗಗಳ ಕಾಂಗ್ರೆಸ್ ಮುಖಂಡ ಎ. ಕೃಷ್ಣಪ್ಪ ಅವರ ಪುತ್ರಿ ಪೂರ್ಣಿಮಾ ಕೃಷ್ಣಪ್ಪ ಮತ್ತು ಅಳಿಯ ಶ್ರೀನಿವಾಸ್, ಕೆ. ನರಸಿಂಹ ನಾಯಕ್ 750 ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಅಧಿಕೃತವಾಗಿ ನಿನ್ನೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸೇರ್ಪಡೆ ಆಗಿದ್ದಾರೆ.
ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾಗೆ ಟಿಕೆಟ್ ತಪ್ಪಲು ನಾನೂ ಸ್ವಲ್ಪ ಕಾರಣ: ಸಿಎಂ ಸಿದ್ದರಾಮಯ್ಯ
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಎ.ಕೃಷ್ಣಪ್ಪ ಪುತ್ರಿ ಪೂರ್ಣಿಮಾಗೆ ಟಿಕೆಟ್ ತಪ್ಪಲು ನಾನೂ ಸ್ವಲ್ಪ ಕಾರಣ. ಟಿಕೆಟ್ ತಪ್ಪಿಸಿದ್ದು ನಾನೇ ಅಂತಾ ಗೊತ್ತಿದ್ರೂ ಸಿಟ್ಟು ಮಾಡಿಕೊಂಡಿಲ್ಲ. ಭೈರತಿ ಬಸವರಾಜಗೆ ಟಿಕೆಟ್ ಕೊಡಿಸಲು ಹೋಗಿ ಇವರಿಗೆ ತಪ್ಪಿತು. ಬಿಜೆಪಿ ಶಾಸಕರಾದರೂ ಕಾಂಗ್ರೆಸ್ ರಕ್ತ ಪೂರ್ಣಿಮಾರಲ್ಲಿ ಹರಿಯುತ್ತಿತ್ತು ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.