ಕುಮಾರಸ್ವಾಮಿ ಮಾತುಗಳಿಗೆಲ್ಲ ಸೊಪ್ಪು ಹಾಕುವ ಹಂತದಲ್ಲಿ ನಾನಿಲ್ಲ; ಡಿಕೆ ಶಿವಕುಮಾರ್​ ತಿರುಗೇಟು

ಎಲ್ಲ ಮುಖ್ಯಮಂತ್ರಿಗಳು ಕೆಲವು ಸಂಘಟನೆಗಳ ಅಧ್ಯಕ್ಷರಾಗಿದ್ದರು, ನನಗೂ ಅವಕಾಶ ಒದಗಿ ಬಂದಿತ್ತು. ರಾಜಕಾರಣ ಮಾಡುವವರು ಮಾಡಲಿ. ಅವರಿಗೆ ಒಳ್ಳೆದಾಗಲಿ. ಬರಗಾಲದಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನುವುದು ನಮಗೆ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.

ಕುಮಾರಸ್ವಾಮಿ ಮಾತುಗಳಿಗೆಲ್ಲ ಸೊಪ್ಪು ಹಾಕುವ ಹಂತದಲ್ಲಿ ನಾನಿಲ್ಲ; ಡಿಕೆ ಶಿವಕುಮಾರ್​ ತಿರುಗೇಟು
ಡಿಸಿಎಂ ಡಿಕೆ ಶಿವಕುಮಾರ್​
Follow us
Malatesh Jaggin
| Updated By: ವಿವೇಕ ಬಿರಾದಾರ

Updated on: Oct 21, 2023 | 2:43 PM

ಬೆಂಗಳೂರು ಅ.21: ರಾಜ್ಯ ರಾಜಕಾರಣದಲ್ಲಿ ಜೆಡಿಎಸ್​ (JDS) ಮತ್ತು ಕಾಂಗ್ರೆಸ್ (Congress)​ ನಾಯಕರ ಮಧ್ಯೆ ವಾಗ್ಯುದ್ಧ ನಡೆದಿದೆ. ನಮ್ಮ ಹತ್ತಿರ ಬಂದು ತಿಂದು ಉಂಡು ಮಜಾ ಮಾಡಿಕೊಂಡಿರುವವರು ಅವರು, ಸಾಲ ತೀರಿಸಿಕೊಂಡು ಕುತ್ತಿಗೆ ಕುಯ್ಯಿಸಿಕೊಂಡು ಸಾಯುತ್ತಿರುವವರು ನಾವು ಎಂಬ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)​ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ಮಾತುಗಳಿಗೆಲ್ಲ ಸೊಪ್ಪು ಹಾಕುವ ಹಂತದಲ್ಲಿ ನಾನಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ದೇಶದ ಆಸ್ತಿ, ಜನರು ಬದುಕು ಮತ್ತು ನಮ್ಮ ಸಂಸ್ಕೃತಿ. ಅವರ ಮಗ ನಟನೆ ಮಾಡುತ್ತಾನೆ, ಇವರು ದೇವಾಲಯಗಳು‌, ಚರ್ಚ್, ಮಸೀದಿ ಮತ್ತು ಕ್ರೀಡೆ ಅಂತ ಸಿನಿಮಾ ತಯಾರು ಮಾಡುತ್ತಾರೆ. ಎಲ್ಲ ಮುಖ್ಯಮಂತ್ರಿಗಳು ಕೆಲವು ಸಂಘಟನೆಗಳ ಅಧ್ಯಕ್ಷರಾಗಿದ್ದರು. ನನಗೂ ಬಂದಿತ್ತು. ರಾಜಕಾರಣ ಮಾಡುವವರು ಮಾಡಲಿ. ಅವರಿಗೆ ಒಳ್ಳೆದಾಗ್ಲಿ. ಬರಗಾಲದಲ್ಲಿ ಹೇಗೆ ಕೆಲಸ ಮಾಡಬೇಕು ಅನ್ನುವುದು ನಮಗೆ ಗೊತ್ತಿದೆ ಎಂದರು.

ದುಡ್ಡು ಮಾಡುವುದು, ಕೃತಕ ವಿದ್ಯುತ್ ಅಭಾವ ಸೃಷ್ಟಿ ಬಗ್ಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಹೆಚ್ಚಿನ ವಿದ್ಯುತ್​ ಉತ್ಪಾದನೆ ಮಾಡಿಲ್ಲ. ಪ್ರತೀ ವರ್ಷ ಶೇ 10 ರಿಂದ 15 ಹೆಚ್ಚಿಗೆ ಉತ್ಪಾದನೆ ಮಾಡಬೇಕು. ಅವರಿಗೇನಾದರು ರೈತರ ಬಗ್ಗೆ ಕಾಳಜಿ ಇದ್ದಿದ್ದರೇ ಅವರಿಗೆ ಗೊತ್ತಾಗುತ್ತಿತ್ತು. 192 ತಾಲೂಕುಗಳನ್ನು ಸುಮ್ಮನೇ ಘೋಷಣೆ ಮಾಡುತ್ತಿದ್ವಾ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸರ್ಕಾರದಿಂದ ಕೊಡುವ ಪ್ರಶಸ್ತಿಗಳಿಗೆ ಸಾಧಕರ ಆಯ್ಕೆಗೆ ಸಮಿತಿ ರಚನೆ; ಡಿಕೆ ಶಿವಕುಮಾರ್

ಯಾವ ಶಾಸಕರೂ ಪಕ್ಷದ ವಿಚಾರ ಪ್ರೆಸ್​ ಮುಂದೆ ಮಾತಾಡಬಾರದದು

ನಮ್ಮ ಪಕ್ಷದ ಯಾವ ಶಾಸಕರೂ ಕೂಡ ಪಕ್ಷದ ವಿಚಾರವನ್ನು ಪ್ರೆಸ್​ ಮುಂದೆ ಮಾತಾಡಬಾರದು. ಅಲ್ಲದೆ ಯಾವುದೇ ಬೆಂಬಲ, ಯಾರ ಬೆಂಬಲ ವಿಚಾರವನ್ನೂ ಕೂಡ ಮಾತನಾಡಬಾರದು. ನಾನಿದ್ದೀನಿ, ಮುಖ್ಯಮಂತ್ರಿಗಳಿದ್ದಾರೆ ಎಂದು ಸ್ವಪಕ್ಷದ ಶಾಸಕರಿಗೆ ಖಡಕ್​ ಸಂದೇಶ ರವಾನಿಸಿದರು.

2.5 ವರ್ಷದಲ್ಲಿ ಕ್ಯಾಬಿನೆಟ್ ಪುನರ್ ರಚನೆ ವಿಚಾರವಾಗಿ ಮಾತನಾಡಿದ ಅವರು ನಾನು ಒಂದು ದೊಡ್ಡ ಸಂಕಟದಲ್ಲಿ ತಗಲಾಗಿಕೊಂಡಿದ್ದೇನೆ. ಪಕ್ಷದ ವಿಚಾರವಾಗಿ ಏನ್ ಬೇಕು ಅದು ಚರ್ಚೆಯಾಗಿದೆ. ಕಲವೊಂದನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವುದಕ್ಕೆ ಆಗುವುದಿಲ್ಲ. ಸದ್ಯಕ್ಕೆ ಆ ರೀತಿಯ ಮಾಹಿತಿ ನನ್ನ ಬಳಿ ಇಲ್ಲ ಎಂದು ಜಾರಿಕೊಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿನಿಕ್​  

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್