ಕಾಂಗ್ರೆಸ್​​ ಗ್ಯಾರಂಟಿ ಸಮಾವೇಶಕ್ಕೆ ಕೆಎಸ್​ಆರ್​​ಟಿಸಿ ಬಸ್​ ಬಳಕೆ: ಇತ್ತ ಕಾದು ಕಾದು ಸುಸ್ತಾದ ಪ್ರಯಾಣಿಕರು

ಗ್ಯಾರಂಟಿ ಸಮಾವೇಶಕ್ಕೆ ಕೆಎಸ್​​ಆರ್​​ಟಿಸಿ ಬಸ್ ನಿರಂತರ ಬಳಕೆ ಹಿನ್ನೆಲೆ ಬಸ್​​ಗಳ ಕೊರತೆಯಿಂದ ಪ್ರಯಾಣಿಕರು ಪರದಾಡಿರುವಂತಹ ಘಟನೆ ನವನಗರಲ್ಲಿ ನಡೆದಿದೆ. ಇಂದು ಬಾಗಲಕೋಟೆ ತಾಲ್ಲೂಕಿನ ಕಲಾದಗಿಯಲ್ಲಿ ಕಾಂಗ್ರೆಸ್​​ ಗ್ಯಾರಂಟಿ ಸಮಾವೇಶ ಮಾಡಲಾಗಿದೆ. ಸಮಾವೇಶಕ್ಕೆ ಜನರನ್ನು ಕರೆತರಲು 180 ಕೆಎಸ್​​ಆರ್​ಟಿಸಿ ಬಸ್ ರವಾನೆ ಮಾಡಲಾಗಿದೆ. ಹೀಗಾಗಿ ಪ್ರಯಾಣಿಕರು ಪರದಾಡಿದ್ದಾರೆ.

ಕಾಂಗ್ರೆಸ್​​ ಗ್ಯಾರಂಟಿ ಸಮಾವೇಶಕ್ಕೆ ಕೆಎಸ್​ಆರ್​​ಟಿಸಿ ಬಸ್​ ಬಳಕೆ: ಇತ್ತ ಕಾದು ಕಾದು ಸುಸ್ತಾದ ಪ್ರಯಾಣಿಕರು
ಗ್ಯಾರಂಟಿ ಸಮಾವೇಶಕ್ಕೆ ಬಸ್ ಬಳಕೆ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 11, 2024 | 3:25 PM

ಬಾಗಲಕೋಟೆ, ಮಾರ್ಚ್​​ 11: ಗ್ಯಾರಂಟಿ ಸಮಾವೇಶಕ್ಕೆ ಕೆಎಸ್​​ಆರ್​​ಟಿಸಿ ಬಸ್ (KSRTC bus) ನಿರಂತರ ಬಳಕೆ ಹಿನ್ನೆಲೆ ಬಸ್​​ಗಳ ಕೊರತೆಯಿಂದ ಪ್ರಯಾಣಿಕರು ಪರದಾಡಿರುವಂತಹ ಘಟನೆ ನವನಗರಲ್ಲಿ ನಡೆದಿದೆ. ಇಂದು ಬಾಗಲಕೋಟೆ ತಾಲ್ಲೂಕಿನ ಕಲಾದಗಿಯಲ್ಲಿ ಕಾಂಗ್ರೆಸ್​​ ಗ್ಯಾರಂಟಿ ಸಮಾವೇಶ ಮಾಡಲಾಗಿದೆ. ಸಮಾವೇಶಕ್ಕೆ ಜನರನ್ನು ಕರೆತರಲು 180 ಕೆಎಸ್​​ಆರ್​ಟಿಸಿ ಬಸ್ ರವಾನೆ ಮಾಡಲಾಗಿದೆ. ಜಿಲ್ಲೆಯಲ್ಲಿ ದಿನಾಲು 645 ಬಸ್ ಸಂಚಾರ ಮಾಡುತ್ತವೆ. ಮಾರ್ಚ್ 7 ರಂದು ಬಾಗಲಕೋಟೆಯಲ್ಲಿ ನಡೆದ ಗ್ಯಾರಂಟಿ ಸಮಾವೇಶಕ್ಕೆ 302 ಬಸ್ ಬಿಡಲಾಗಿತ್ತು. ಆದರೆ ಇಂದು 180 ಬಸ್​ಗಳನ್ನು ಬಿಡಲಾಗಿದೆ. ಹೀಗಾಗಿ ಪ್ರಯಾಣಿಕರು ಪರದಾಡಿದ್ದಾರೆ. ಇನ್ನು ನಾಳೆ ಬಾದಾಮಿಯಲ್ಲಿ ಗ್ಯಾರಂಟಿ ಸಮಾವೇಶ ನಡೆಯಲಿದೆ.

ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ ಇಲ್ಲದೆ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬೆಳಿಗ್ಗೆ 10 ರಿಂದ‌ ಪ್ರಯಾಣಿಕರು 2-3 ಗಂಟೆ ಕಾದು ಕೂತರು ಬಸ್​​ ಬಂದಿಲ್ಲ. ಬಸ್​​ಗಳನ್ನು ಗ್ಯಾರಂಟಿ ಕಾರ್ಯಕ್ರಮಕ್ಕೆ ಬಿಟ್ಟಿದಾರಂತೆ. ಕಂಟ್ರೋಲರ್ ಬರುತ್ತೆ ವೇಟ್ ಮಾಡಿ ಅಂತಿದ್ದಾರೆ ಎಂದು ಪ್ರಯಾಣಿಕರು ಗೋಳಾಡಿದ್ದಾರೆ. ಗ್ಯಾರಂಟಿ ಸಮಾವೇಶದಿಂದ ಬಸ್ ಬಹಳ ಕಡಿಮೆ ಇವೆ ಎಂದು ಮಂಗಳಮುಖಿ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಸಮಾವೇಶಕ್ಕೆ ಸರ್ಕಾರಿ ಬಸ್​​ಗಳ ಬಳಕೆ: ಪರೀಕ್ಷೆಗೆ ನಡೆದುಕೊಂಡೆ ಹೊರಟ ವಿದ್ಯಾರ್ಥಿಗಳು

ಅದೇ ರೀತಿಯಾಗಿ ಇಂದು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಗ್ಯಾರಂಟಿ ಸಮಾವೇಶ ಇದೆ. ಹೀಗಾಗಿ ಸರಿಯಾದ ಸಮಯಕ್ಕೆ ಬಸ್ ಬಾರದ ಹಿನ್ನಲೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಸರ್ಕಾರಿ ಬಸ್ ಗಳನ್ನು ಗ್ಯಾರಂಟಿ ಸಮಾವೇಶಕ್ಕೆ ಜನ ತರಲು ಬಳಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಬರದಿಂದ ನದಿ ಖಾಲಿ ಖಾಲಿ, ಕೃಷಿ ಜಾನುವಾರುಗಳಿಗೆ ನೀರಿಲ್ಲ, ಆದರೆ ಮರಳು ದಂದೆಕೋರರಿಗೆ ಪುಷ್ಕಳ -ಎಲ್ಲಿ?

ಬಸ್​​ಗಳು ಇಲ್ಲದ ಕಾರಣ ಪರೀಕ್ಷೆಗೆ ವಿದ್ಯಾರ್ಥಿಗಳು ನಡೆದುಕೊಂಡೆ ಹೋಗಿದ್ದಾರೆ. ಗುಡೇನಕಟ್ಟಿಯಿಂದ ಕುಂದಗೋಳಕ್ಕೆ ವಿದ್ಯಾರ್ಥಿಗಳು ನಡೆದುಕೊಂಡೆ ಹೋಗಿದ್ದಾರೆ. ಇಂದು ಪರೀಕ್ಷೆ ಇದೆ. ನಮ್ಮ ಭವಿಷ್ಯ ಹಾಳು ಮಾಡಬೇಡಿ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಚಾಲಕನಿಂದ ನಿಯಮ ಉಲ್ಲಂಘನೆ

ವಿಜಯಪುರ: ಮೊಬೈಲ್ ನಲ್ಲಿ ಮಾತನಾಡುತ್ತಾ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆಯ ಚಾಲಕನಿಂದ ನಿಯಮ ಉಲ್ಲಂಘನೆ ಮಾಡಲಾಗಿದೆ. ವಿಜಯಪುರದಿಂದ ಇಂಡಿ ಪಟ್ಟಣಕ್ಕೆ ತೆರಳುತ್ತಿದ್ದ ಬಸ್​​ನಲ್ಲಿ ಘಟನೆ ನಡೆದಿದೆ. ಮೊಬೈಲ್​ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ ದೃಶ್ಯ ಪ್ರಯಾಣಿಕರ ಮೊಬೈಲ್​​ನಲ್ಲಿ ಸೆರೆ ಆಗಿದ್ದು, ಚಾಲಕನ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬರಿದಾಗುತ್ತಿದೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಜೀವನಾಡಿ ಹಿಡಕಲ್ ಜಲಾಶಯ

ಮೊಬೈಲ್​ನಲ್ಲಿ ಮಾತನಾಡುತ್ತಾ ಬಸ್ ಚಾಲನೆ ಮಾಡಿದ್ದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ. ನಿರ್ಲಕ್ಷ್ಯ ತೋರಿ ಚಾಲನೆ ಮಾಡಿದ ಚಾಲಕನ ವಿರುದ್ದ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು