ಬೆಂಗಳೂರು, ಜೂನ್ 16: ಮುಸ್ಲಿಂ ಸಮುದಾಯ ಬಕ್ರೀದ್ ಹಬ್ಬದ (Bakrid) ಪ್ರಯುಕ್ತ ಸೋಮವಾರದಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರಿಂದ ಬನ್ನೇರುಘಟ್ಟ ರಸ್ತೆಯ ಗುರಪ್ಪನಪಾಳ್ಯ ಮತ್ತು ಸುತ್ತಮುತ್ತ ಸಾರ್ವಜನಿಕರ ವಾಹನ ಸಂಚಾರವನ್ನು (traffic advisory) ಸಂಚಾರ ಪೊಲೀಸರು ನಿಷೇಧಿಸಿದ್ದಾರೆ. ಜೊತೆಗೆ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಸಾರ್ವಜನಿಕರ ವಾಹನ ಸಂಚಾರಕ್ಕೆ ಬ್ರೇಕ್ ಬೀಳಲಿದೆ.
ಸಾಗರ್ ಆಸ್ಪತ್ರೆ ಜಂಕ್ಷನ್‌ನಿಂದ ಗುರಪ್ಪನಪಾಳ್ಯ, ರೆಡ್ಡಿ ಆಸ್ಪತ್ರೆ ಜಂಕ್ಷನ್ 39ನೇ ಕ್ರಾಸ್‌ನಿಂದ ಗುರಪ್ಪನಪಾಳ್ಯ ಜಂಕ್ಷನ್, ಜಿಡಿ ಮಾರ ಜಂಕ್ಷನ್‌ನಿಂದ ಗುರಪ್ಪನಪಾಳ್ಯ ಜಂಕ್ಷನ್ವರೆಗೆ ವಾಹನಗಳನ್ನು ನಿಷೇಧಿಸಲಾಗಿದೆ.
ಡೈರಿ ವೃತ್ತದಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಬರುವ ವಾಹನಗಳು ಸ್ವಾಗತ್ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಬೇಕು. ಈಸ್ಟ್ ಎಂಡ್ ಜಂಕ್ಷನ್‌ನಲ್ಲಿ ಚಲಿಸಬಹುದು. ಈಸ್ಟ್ ಎಂಡ್ ಜಂಕ್ಷನ್‌ನಲ್ಲಿ ಬಲತಿರುವು ಪಡೆದು 28ನೇ ಮೇನ್ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು 8ನೇ ಮುಖ್ಯ ರಸ್ತೆಯಲ್ಲಿ ಚಲಿಸಿ ಡೆಲ್ಮಿಯಾ ಜಂಕ್ಷನ್ ಕಡೆಗೆ ಎಡಕ್ಕೆ ತಿರುವು ಪಡೆದುಕೊಂಡು ಜಿಡಿ. ಮರ ಜಂಕ್ಷನ್ ಕಡೆಗೆ ಚಲಿಸಿ ನಂತರ ಬಲಕ್ಕೆ ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಪಡೆದು ಮುಂದೆ ಸಾಗಬಹುದಾಗಿದೆ.
ಇದನ್ನೂ ಓದಿ: Eid-ul-Adha 2024: ತ್ಯಾಗ ಬಲಿದಾನದ ಪ್ರತೀಕವೇ ಈ ‘ಬಕ್ರೀದ್ ‘ ಏನಿದರ ವಿಶೇಷತೆ?
ಮೈಸೂರು ರಸ್ತೆಯಿಂದ ಟೌನ್ ಹಾಲ್ ಕಡೆಗೆ ಹೋಗುವ ವಾಹನಗಳು ಕಿಮ್ಕೋ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ವಿಜಯನಗರ ಜಂಕ್ಷನ್ ಕಡೆಗೆ ಸಾಗಬಹುದಾಗಿದೆ.
ಇದನ್ನೂ ಓದಿ: ಬಕ್ರೀದ್ ಹಬ್ಬವಿರುವ ಜೂನ್ 17, ಸೋಮವಾರದಂದು ಷೇರು ಮಾರುಕಟ್ಟೆಗೆ ರಜೆಯಾ? ಇಲ್ಲಿದೆ ಮಾರುಕಟ್ಟೆ ರಜಾದಿನಗಳ ಪಟ್ಟಿ
ಟೌನ್ ಹಾಲ್ನಿಂದ ಮೈಸೂರು ರಸ್ತೆಗೆ ಬರುವ ವಾಹನಗಳು ಬಿಜಿಎಸ್ ಮೇಲ್ಸೇತುವೆಯ ಕೆಳಗೆ ಸರ್ವಿಸ್ ರಸ್ತೆಯನ್ನು ತೆಗೆದುಕೊಂಡು ಪಶುವೈದ್ಯಕೀಯ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಗೂಡ್ಸ್ ಶೆಡ್ ರಸ್ತೆಯನ್ನು ತಲುಪಬಹುದು ಅಥವಾ ಸಿರಸಿ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಜೆಜೆ ನಗರ-ಟ್ಯಾಂಕ್ಬಂಡ ರಸ್ತೆ-ಹುಣಸೇಮರ ಮಾರ್ಗವನ್ನು ತೆಗೆದುಕೊಳ್ಳಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.