ಜಿಂದಾಲ್​​ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಕಲ್ಲಿದ್ದಲ್ಲಿನಲ್ಲೇ ಕರಗಿ ಹೋದ

ಬಳ್ಳಾರಿ: ಜಿಂದಾಲ್​​ ಕಂಪನಿಯಲ್ಲಿ ಇದೇ ತಿಂಗಳ ಐದರಂದು ಸಿಬ್ಬಂದಿಯೊಬ್ರು ಕಣ್ಮರೆಯಾಗಿದ್ರು. ಅವ್ರ ಕುಟುಂಬಸ್ಥರು ಸಂಸ್ಥೆ ಎದುರು ದೊಡ್ಡ ಗಲಾಟೆ ಮಾಡಿದ್ರು. ಸಚಿವ ಶ್ರೀರಾಮುಲು ಕೂಡ ಸ್ಥಳಕ್ಕೆ ದೌಡಾಯಿಸಿ, ವ್ಯಕ್ತಿ ಹುಡುಕಾಟದ ಭರವಸೆ ಕೊಟ್ಟಿದ್ರು. ಅದ್ರೀಗ, ಕುಟುಂಬಸ್ಥರಿಗೆ ಆಘಾತವಾಗಿದೆ. ಯಾಕಂದ್ರೆ ನಾಪತ್ತೆಯಾಗಿದ್ದಾತ ಗುರುತೇ ಸಿಗದಂತೆ ಅಳಿಸಿಹೋಗಿದ್ದಾನೆ. ಜಿಂದಾಲ್​​ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಭಸ್ಮ: ಹೌದು.. ಬಳ್ಳಾರಿಯ ದೇವಿನಗರ ನಿವಾಸಿ ದುರ್ಗಣ್ಣ ಜಿಂದಾಲ್​​​​ನಲ್ಲಿ 13 ವರ್ಷದಿಂದ ಕೆಲಸ ಮಾಡ್ತಿದ್ರು. ಆದ್ರೆ, ಇದೇ ತಿಂಗಳ ಐದರಂದು, ನೈಟ್​ ಶಿಫ್ಟ್​​ಗೆ ಅಂತ ಕೆಲಸಕ್ಕೆ ಹೋದವ್ರು […]

ಜಿಂದಾಲ್​​ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಕಲ್ಲಿದ್ದಲ್ಲಿನಲ್ಲೇ ಕರಗಿ ಹೋದ
ಸಾಧು ಶ್ರೀನಾಥ್​

Updated on: Dec 11, 2019 | 6:54 AM

ಬಳ್ಳಾರಿ: ಜಿಂದಾಲ್​​ ಕಂಪನಿಯಲ್ಲಿ ಇದೇ ತಿಂಗಳ ಐದರಂದು ಸಿಬ್ಬಂದಿಯೊಬ್ರು ಕಣ್ಮರೆಯಾಗಿದ್ರು. ಅವ್ರ ಕುಟುಂಬಸ್ಥರು ಸಂಸ್ಥೆ ಎದುರು ದೊಡ್ಡ ಗಲಾಟೆ ಮಾಡಿದ್ರು. ಸಚಿವ ಶ್ರೀರಾಮುಲು ಕೂಡ ಸ್ಥಳಕ್ಕೆ ದೌಡಾಯಿಸಿ, ವ್ಯಕ್ತಿ ಹುಡುಕಾಟದ ಭರವಸೆ ಕೊಟ್ಟಿದ್ರು. ಅದ್ರೀಗ, ಕುಟುಂಬಸ್ಥರಿಗೆ ಆಘಾತವಾಗಿದೆ. ಯಾಕಂದ್ರೆ ನಾಪತ್ತೆಯಾಗಿದ್ದಾತ ಗುರುತೇ ಸಿಗದಂತೆ ಅಳಿಸಿಹೋಗಿದ್ದಾನೆ.

ಜಿಂದಾಲ್​​ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಭಸ್ಮ:
ಹೌದು.. ಬಳ್ಳಾರಿಯ ದೇವಿನಗರ ನಿವಾಸಿ ದುರ್ಗಣ್ಣ ಜಿಂದಾಲ್​​​​ನಲ್ಲಿ 13 ವರ್ಷದಿಂದ ಕೆಲಸ ಮಾಡ್ತಿದ್ರು. ಆದ್ರೆ, ಇದೇ ತಿಂಗಳ ಐದರಂದು, ನೈಟ್​ ಶಿಫ್ಟ್​​ಗೆ ಅಂತ ಕೆಲಸಕ್ಕೆ ಹೋದವ್ರು ಕಣ್ಮರೆಯಾಗಿದ್ರು. ಬಳಿಕ ಸಂಸ್ಥೆ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ರು. ಸಚಿವ ಶ್ರೀರಾಮುಲು ಕೂಡ ದುರ್ಗಣ್ಣನ ಪತ್ತೆ ಹಚ್ಚೋ ಭರವಸೆ ಕೊಟ್ಟಿದ್ರು. ಆದ್ರೀಗ, ದುರ್ಗಣ್ಣ ಮೃತಪಟ್ಟಿರುವ ಆಘಾತಕಾರಿ ವಿಷ್ಯ ಗೊತ್ತಾಗಿದೆ. ಅದು, ಕಂಪನಿಯ ಕೋಕ್​ ಯುನಿಟ್​​ನಲ್ಲಿ.

ಕಂಪನಿಯ ಕೋಕ್ ಯುನಿಟ್ ಭಾರಿ ಪ್ರಮಾಣದ ಉಷ್ಣಾಂಶ ಇರುತ್ತೆ. ಆದ್ರೆ ಮುಂಜಾಗೃತ ಕ್ರಮವಿಲ್ಲದ ಕೋಕ್​ ಯುನಿಟ್​​​​​ನಲ್ಲಿ ದುರ್ಗಣ್ಣ ಬಿದ್ದಿದ್ದು, ಬೂದಿಯಾಗಿದ್ದಾನೆ. ಪೊಲೀಸರ ಪರಿಶೀಲನೆಯಲ್ಲಿ ಈ ಸಂಬಂಧ ಕೆಲ ಕುರುಹು ಪತ್ತೆಯಾಗಿದೆ. ಇದೀಗ, ಕುಟುಂಬಸ್ಥರು ಕಣ್ಣೀರು ಹಾಕ್ತಿದ್ಧಾರೆ.

ದುರ್ಗಣ್ಣ ಸಾವಿನ ಬೆನ್ನಿಗೆ ಕಂಪನಿಯಲ್ಲಿರೋ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಉದ್ಭವವಾಗಿದೆ. ಪೊಲೀಸರು ಕೂಡ ಈ ಕುರಿತು ತನಿಖೆ ನಡೆಸುತ್ತಿದ್ದು, ಕಂಪನಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us