
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ನೆಲ್ಲುಡಿ ಕೊಟಾಲ್ನಲ್ಲಿರುವ ಎಟಿಎಂ ಮಷಿನ್ನಲ್ಲಿರುವ ಸರಿ ಸುಮಾರು 9.36 ಲಕ್ಷ ರೂಪಾಯಿಗಳ ಮೊತ್ತದ ಹಣವನ್ನ ದರೋಡೆ ಮಾಡಿರುವ ಪ್ರಕರಣ ಭೇದಿಸಿರುವ ಕುರುಗೋಡು ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏಪ್ರಿಲ್ 4 ರಂದು ನೆಲ್ಲುಡಿ ಕೊಟಾಲ್ನಲ್ಲಿರುವ ಎಟಿಎಂ ಮಷಿನ್ನಲ್ಲಿ ಈ ದರೋಡೆ ನಡೆದಿದ್ದು, ಏಪ್ರಿಲ್ 20ರಂದು ಎಟಿಎಂ ಮಷಿನ್ನಲ್ಲಿ ಹಣ ದರೋಡೆ ಮಾಡಿರುವ ಪ್ರಕರಣದಲ್ಲಿ ಭಾಗಿಯಾಗಿದ್ದ ಎಟಿಎಂ ಮಷಿನ್ ನಿರ್ವಾಹಕ ಎಂಜಿನಿಯರ್ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ.
ಈ ದರೋಡೆ ನಡೆದು ಕೇವಲ ಇಪ್ಪತ್ತೇ ದಿನಗಳಲ್ಲಿ ಈ ಪ್ರಕರಣವನ್ನು ಭೇದಿಸುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಎಟಿಎಂ ಮಷಿನ್ಗಳ ನಿರ್ವಾಹಕ ಉಸ್ತುವಾರಿ ವಹಿಸಿದ್ದ ಕಸ್ಟಮ್ ಸರ್ವೀಸ್ನ ಎಂಜಿನಿಯರ್ ಲೋಕೇಶ ಹಾಗೂ ಕೆ.ವೀರೇಶ ಮತ್ತು ಎಂ.ಡಿ.ಶ್ರೀನಿವಾಸ ಎಂಬುವವರನ್ನ ಕುರುಗೋಡು ಪೊಲೀಸರು ಬಂಧಿಸಿದ್ದಾರೆ.
ಎರಡು ಸೀಕ್ರೆಟ್ ಕೋಡ್‍ಗಳನ್ನ ಬಳಸಿ ಎಟಿಎಂನಲ್ಲಿ ಹಣ ದೋಚಲಾಗಿದೆ ಎನ್ನುವುದನ್ನು ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ. ಈ ಮೂವರು ಆರೋಪಿಗಳಿಂದ 8 ಲಕ್ಷದ 26 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ವಸ್ತುಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:
ATMನಲ್ಲಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಮಧುಕರ ರೆಡ್ಡಿ ಹಿಡಿಯಲು ಪೊಲೀಸರು ಪಟ್ಟ ಕಷ್ಟ ಎಷ್ಟು ಗೊತ್ತಾ?
CCB ಪೊಲೀಸರ ಭರ್ಜರಿ ಬೇಟೆ; ಕುಖ್ಯಾತ ಮನೆಗಳ್ಳರ ಬಂಧನ, ಇವರ ಬಂಧನದ ಕಥೆ ರೋಚಕ..
(Ballari police arrested three thieves who theft in atm)