ATMನಲ್ಲಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಮಧುಕರ ರೆಡ್ಡಿ ಹಿಡಿಯಲು ಪೊಲೀಸರು ಪಟ್ಟ ಕಷ್ಟ ಎಷ್ಟು ಗೊತ್ತಾ?

ಬೆಂಗಳೂರಿನ ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಹಲ್ಲೆ ನಡೆಸಿದ್ದ ಕ್ರೂರಿಯ ಇತಿಹಾಸ ಗೊತ್ತಾ? ಮಧುಕರ್ ರೆಡ್ಡಿ ಪೊಲೀಸರ ಬಲೆಗೆ ಬಿದ್ದಿದ್ದಾದರೂ ಹೇಗೆ? ಹಲವು ವರ್ಷಗಳ ಕಾಲ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದೇಗೆ? ಎಂಬ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.

ATMನಲ್ಲಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದ ಮಧುಕರ ರೆಡ್ಡಿ ಹಿಡಿಯಲು ಪೊಲೀಸರು ಪಟ್ಟ ಕಷ್ಟ ಎಷ್ಟು ಗೊತ್ತಾ?
ಜ್ಯೋತಿ ಉದಯ್ ಮೇಲೆ ಮಧುಕರ್​ ರೆಡ್ಡಿ ಹಲ್ಲೆ ನಡೆಸಿದ್ದ ಭೀಕರ ದೃಶ್ಯ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Feb 03, 2021 | 12:08 PM

ಬೆಂಗಳೂರು: ನವೆಂಬರ್ 19, 2013 ರಂದು ನಡೆದ ಕೃತ್ಯಕ್ಕೆ ಇಡೀ ಕರ್ನಾಟಕ ಬೆಚ್ಚಿ ಬಿದ್ದಿತ್ತು. ಮಧುಕರ್ ರೆಡ್ಡಿ ಎಂಬ ಕ್ರೂರಿ ಕಾರ್ಪೊರೇಷನ್ ಬ್ಯಾಂಕ್​ ATMನಲ್ಲಿ ಜ್ಯೋತಿ ಉದಯ್​ ಎಂಬ ಬ್ಯಾಂಕ್​ ಮ್ಯಾನೇಜರ್ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದ. ಹಲವು ವರ್ಷಗಳ ಹುಡುಕಾಟದ ನಂತರ ಸದ್ಯ ಈಗ ಮಧುಕರ್​ಗೆ 10 ವರ್ಷ ಜೈಲು, ₹10 ಸಾವಿರ ದಂಡ ವಿಧಿಸಲಾಗಿದೆ. ಆದ್ರೆ ಎಟಿಎಂನಲ್ಲಿ ಹಲ್ಲೆ ನಡೆಸಿದ್ದ ಕ್ರೂರಿಯ ಇತಿಹಾಸ ಗೊತ್ತಾ? ಮಧುಕರ್ ರೆಡ್ಡಿ ಪೊಲೀಸರ ಬಲೆಗೆ ಬಿದ್ದಿದ್ದಾದರೂ ಹೇಗೆ? ಹಲವು ವರ್ಷಗಳ ಕಾಲ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದೇಗೆ? ಎಂಬ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.

ಎಟಿಎಂ ಅಟ್ಯಾಕ್ ನಂತ್ರ ಮಧುಕರ್ ಬೆಂಗಳೂರಲ್ಲೇ ಇದ್ದ. ತಿಂಡಿ ತಿನ್ನಲೆಂದು ಹೋಟೆಲ್​ ಒಂದಕ್ಕೆ ಬಂದಿದ್ದ. ಈ ವೇಳೆ ಟಿವಿಯಲ್ಲಿ ತಾನು ಹಲ್ಲೆ ಮಾಡಿದ್ದ ಸುದ್ದಿ ನೋಡುತ್ತಿದ್ದಂತೆಯೇ ಅಲರ್ಟ್ ಆಗಿದ್ದಾನೆ. ತಕ್ಷಣ ತಲೆ ಕೂದಲು ತೆಗೆದು, ಆಂಧ್ರಪ್ರದೇಶದ ಹಿಂದೂಪುರಕ್ಕೆ ಎಸ್ಕೇಪ್ ಆಗಿ ತಲೆ ಮರಿಸಿಕೊಂಡಿದ್ದ.

ಹಿಂದೂಪುರದಲ್ಲಿ ಸಂತ್ರಸ್ತೆ ಜ್ಯೋತಿ ಉದಯ್​ನ ಮೊಬೈಲ್ ಮಾರಾಟ ಮಾಡಿದ್ದಾನೆ. ಈ ವೇಳೆ ಮಧುಕರ್​ಗೆ ಹುಡುಕಾಟ ನಡೆಸುತ್ತಿದ್ದ ಬೆಂಗಳೂರು ಪೊಲೀಸರು ಹಿಂದೂಪುರಕ್ಕೆ ತೆರಳಿ ಮೊಬೈಲ್ ಸೀಜ್ ಮಾಡುತ್ತಾರೆ. ಬಳಿಕ ಹಿಂದೂಪುರ ಸುತ್ತಮುತ್ತ 3 ತಿಂಗಳ ಕಾಲ ಆರೋಪಿಗಾಗಿ ತಲಾಶ್ ಮಾಡ್ತಾರೆ. ಹಳ್ಳಿಗಳಲ್ಲಿ ಆತ ಅಲ್ಲಿದ್ದ, ಇಲ್ಲಿದ್ದ ಎಂಬ ಮಾಹಿತಿ ಕೂಡ ಸಿಗುತ್ತಿತ್ತು. ಮಾಹಿತಿ ಪಡೆದ ತಕ್ಷಣ ಪೊಲೀಸರು ಸುಮಾರು 40 ಬೈಕ್​ಗಳಲ್ಲಿ 1 ವರ್ಷ ಕಾಲ ತೀವ್ರ ಹುಡುಕಾಟ ನಡೆಸುತ್ತಾರೆ. ಆದ್ರೆ ಆರೋಪಿ ಮಧುಕರ್ ರೆಡ್ಡಿ ಖಾಕಿ ಕೈಗೆ ಸಿಗೋದಿಲ್ಲ. ಆದರೂ ಹುಡುಕಾಟ ನಿಲ್ಲಿಸದೆ ಖಾಕಿ ಪಡೆ ಕಾರ್ಯಾಚರಣೆ ಮುಂದುವರಿಸುತ್ತೆ.

ಧರ್ಮಾವರಂನಲ್ಲಿ ನಡೀತು ಮತ್ತೊಂದು ಕೊಲೆ ಧರ್ಮಾವರಂನಲ್ಲಿ ಬೆಂಗಳೂರು ರೀತಿಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿತ್ತು. ಆದರೆ ಘಟನೆಯಲ್ಲಿ ಮಧುಕರ್ ಮಹಿಳೆಯನ್ನು ಕೊಂದು ಹಾಕಿದ್ದ. ಮತ್ತೊಂದು ಮಹಿಳೆ ಮೇಲೆ ಹಲ್ಲೆ ನಡೆದ ನಂತರ ಖಾಕಿ ಅಲರ್ಟ್ ಆಗಿ ಅಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಮಧುಕರ್ ಸುಳಿವು ಸಿಕ್ಕಿತ್ತು.

ಆದರೆ ಅಲ್ಲಿಂದಲೂ ಮತ್ತೆ ಕ್ರೂರಿ ಮಧುಕರ್ ರೆಡ್ಡಿ ಎಸ್ಕೇಪ್ ಆಗಿದ್ದ. ಹೀಗೆ 3 ವರ್ಷಗಳ ಕಾಲ ಹುಡುಕಾಡುತ್ತಿದ್ರೂ ಆರೋಪಿ ಸಿಗುವುದಿಲ್ಲ. ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಪದೇಪದೆ ತಲೆ ಕೂದಲು ತೆಗೆಯುತ್ತಿದ್ದ. ಮುಖ ಮುಚ್ಚಿಕೊಂಡು ಓಡಾಡುತ್ತಿದ್ದ. ಯಾರಿಗೂ ಸುಳಿವು ಸಿಗದಂತೆ ಮಾಡಲು ರಾತ್ರಿ ಸಮಯದಲ್ಲಿ ಓಡಾಟ ನಡೆಸುತ್ತಿದ್ದ. ಈ ವೇಳೆ ಆಂಧ್ರ ಮತ್ತು ಬೆಂಗಳೂರು ಪೊಲೀಸರು ಜಂಟಿ ಕಾರ್ಯಾಚರಣೆಗೆ ನಡೆಸಿದ್ರು. ಇಲ್ಲಿ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ.

ತೀವ್ರ ಹುಡುಕಾಟದ ಬಳಿಕ ಕೋರ್ಟ್​ಗೆ ‘ಬಿ’ ರಿಪೋರ್ಟ್ ಸಲ್ಲಿಕೆ ತೀವ್ರ ಹುಡುಕಾಟದ ಬಳಿಕ ಪೊಲೀಸರು ಕೊನೆಗೆ ಕೋರ್ಟ್​ಗೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಆದ್ರೆ 2017ರಲ್ಲಿ ಆಂಧ್ರದ ಚಿತ್ತೂರು ಪೊಲೀಸರ ಬಲೆಗೆ ಈ ಕ್ರೂರಿ ಮಧುಕರ್ ಸಿಕ್ಕಿ ಬಿದ್ದಿದ್ದ. ಮದನಪಲ್ಲಿ ಬಳಿಯ ನಿಮ್ಮನಪಲ್ಲಿ ಎಂಬ ಗ್ರಾಮದ ಬಳಿ ಲಾಕ್ ಆಗಿದ್ದ. ಕೊಲೆ ಕೇಸ್​ನಲ್ಲಿ ಮಧುಕರ್​ನ ಅರೆಸ್ಟ್ ಮಾಡಲಾಗಿತ್ತು.

ಬಳಿಕ ಬೆಂಗಳೂರು ಪೊಲೀಸರು ಬಾಡಿ ವಾರಂಟ್ ಮೂಲಕ ಆರೋಪಿಯನ್ನು ವಶಕ್ಕೆ ಪಡೆದ್ರು. ಕೋರ್ಟ್ ಅನುಮತಿ ಪಡೆದು ‘ಬಿ’ ರಿಪೋರ್ಟ್ ಹಾಕಿದ್ದ ಕೇಸ್ ರೀ ಓಪನ್ ಮಾಡಲಾಯಿತು. ಮಧುಕರ್ ರೆಡ್ಡಿಯ ಸುದೀರ್ಘ ವಿಚಾರಣೆ ಬಳಿಕ ಚಾರ್ಜ್​ಶೀಟ್ ಸಲ್ಲಿಕೆಯಾಯಿತು. ಸದ್ಯ 7 ವರ್ಷಗಳ ಬಳಿಕ ಕೊನೆಗೂ ಮಧುಕರ್​ಗೆ ನಗರದ 65ನೇ ಸಿಸಿಹೆಚ್ ಕೋರ್ಟ್‌ 10 ವರ್ಷ ಜೈಲು, ₹10 ಸಾವಿರ ದಂಡ ವಿಧಿಸಿದೆ.

ಕಾರ್ಪೊರೇಷನ್ ಬ್ಯಾಂಕ್​ ATMನಲ್ಲಿ ಜ್ಯೋತಿ ಉದಯ್​ ಮೇಲೆ ಹಲ್ಲೆ ಪ್ರಕರಣ: ಆರೋಪಿ ಮಧುಕರ್ ರೆಡ್ಡಿಗೆ 12 ವರ್ಷ ಜೈಲುಶಿಕ್ಷೆ

ಕಾರ್ಪೊರೇಷನ್ ಬ್ಯಾಂಕ್ ATMನಲ್ಲಿ ಜ್ಯೋತಿ ಮೇಲೆ ಮಚ್ಚು ಬೀಸಿದ್ದವ ಅಪರಾಧಿ- ಕೋರ್ಟ್ ತೀರ್ಪು: ಶಿಕ್ಷೆ ಏನು?

Published On - 12:03 pm, Wed, 3 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್