AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಶುರುವಾದ ನಕಲಿ ಚಿನ್ನದ ದಂಧೆ; 4.80 ಲಕ್ಷ ರೂಪಾಯಿ ವಂಚಿಸಿದ ಓರ್ವನ ಬಂಧನ

ನಕಲಿ ಬಂಗಾರದ ಬಿಲ್ಲೆ ನೀಡಿ 4,80,000 ರೂಪಾಯಿ ದೋಚಿದ್ದ ಆರೋಪಿಯನ್ನು ಸದ್ಯ ನ್ಯಾಮತಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಯನ್ನು ಹುಡುಕುತ್ತಿದ್ದಾರೆ.

ಮತ್ತೆ ಶುರುವಾದ ನಕಲಿ ಚಿನ್ನದ ದಂಧೆ; 4.80 ಲಕ್ಷ ರೂಪಾಯಿ ವಂಚಿಸಿದ ಓರ್ವನ ಬಂಧನ
preethi shettigar
|

Updated on: Apr 24, 2021 | 1:14 PM

Share

ದಾವಣಗೆರೆ: ನಕಲಿ ಬಂಗಾರ ನೀಡಿ ವ್ಯಕ್ತಿಯೊಬ್ಬರಿಗೆ 4.80 ಲಕ್ಷ ರೂಪಾಯಿ ವಂಚಿಸಿದ ಆರೋಪಿಯನ್ನು ನ್ಯಾಮತಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹಾಡೋನಹಳ್ಳಿ ಗ್ರಾಮದ ಉಲ್ಲಾಸ್‌ ಬಂಧಿತ ಆರೋಪಿ. ಈತನಿಂದ 2.72 ಲಕ್ಷ ರೂಪಾಯಿ ವಶಪಡಿಸಿಕೊಂಡಿದ್ದು, ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲ್ಲೂಕಿನ ಗೋರಬಾಳ ಗ್ರಾಮದ ಪರಶುರಾಮ ಹಣ ಕಳೆದುಕೊಂಡವರು. ಉಲ್ಲಾಸ್‌ ಹಾಗೂ ಇನ್ನೊಬ್ಬ ಆರೋಪಿ ಇಬ್ಬರೂ ಸೇರಿಕೊಂಡು, ನಮಗೆ ಮನೆಯ ಅಡಿಪಾಯ ತೆಗೆಯುವಾಗ ಬಂಗಾರದ ನಿಧಿ ಸಿಕ್ಕಿದೆ ಎಂದು ಪರಶುರಾಮ ಅವರನ್ನು ನಂಬಿಸಿ ನ್ಯಾಮತಿ ತಾಲ್ಲೂಕಿನ ಚೀಲೂರು ಗ್ರಾಮಕ್ಕೆ ಬರಲು ತಿಳಿಸಿದ್ದರು.

ಪರಶುರಾಮ‌ ಚೀಲೂರಿಗೆ ಬಂದಾಗ ಆರೋಪಿಗಳು ಒಂದು ಚಿನ್ನದ ಬಿಲ್ಲೆ ನೀಡಿ ಅವರ ನಂಬಿಕೆ ಸಂಪಾದಿಸಿದ್ದರು. ಬಳಿಕ ಅರ್ಧ ಕೆ.ಜಿ. ನಕಲಿ ಬಂಗಾರದ ಬಿಲ್ಲೆ ನೀಡಿ 4,80,000 ರೂಪಾಯಿ ದೋಚಿದ್ದಾರೆ. ಈ ಸಂಬಂಧ ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಶಿವಮೊಗ್ಗ ತಾಲ್ಲೂಕಿನ ಹೊಳಲೂರು ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಎಸ್ಪಿ ಹನುಮಂತರಾಯ, ಎಎಸ್‌ಪಿ ರಾಜೀವ್‌ ಎಂ, ಡಿವೈಎಸ್‌ಪಿ ಡಾ. ಸಂತೋಷ್‌ ಕೆ.ಎಂ. ಮಾರ್ಗದರ್ಶನದಲ್ಲಿ ಹೊನ್ನಾಳಿ ಸಿಪಿಐ ದೇವರಾಜ ಟಿ.ವಿ, ಪಿಎಸ್‌ಐ ಪಿ.ಎಸ್‌. ರಮೇಶ, ಸಿಬ್ಬಂದಿ ಮಂಜಪ್ಪ ಕೆ, ಎನ್‌. ರವಿನಾಯಕ, ಮಂಜುನಾಥ ಟಿ.ಎಂ, ಮೌನೇಶಾಚಾರಿ, ಚನ್ನೇಶ ಅವರ ತಂಡ ಕಾರ್ಯಾಚರಣೆ ನಡೆಸಿದ್ದು, ವಂಚನೆ ಪ್ಎಕರಣವನ್ನು ಭೇದಿಸಿದ್ದಾರೆ.

ಇದನ್ನೂ ಓದಿ:

ಅಸಲಿ ಚಿನ್ನ ತೋರಿಸಿ ನಕಲಿ ಚಿನ್ನ ನೀಡಿದ ಐನಾತಿ ಕಳ್ಳರ ಬಂಧನ, ಎಲ್ಲಿ?

ಮೈಸೂರು: ಫೇಸ್‌ಬುಕ್​ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಲಕ್ಷಾಂತರ ರೂ ವಂಚಿಸಿದ್ದ ಮೇಟಗಳ್ಳಿ ಯುವತಿ ಸೆರೆ

ಪೊಲೀಸರ ಸೋಗಿನಲ್ಲಿ ಬಂದು ಉದ್ಯಮಿಯ ಚಿನ್ನ ದರೋಡೆ; ಕಲಬುರಗಿಯಲ್ಲಿ ಹಾಡಹಗಲೇ ದುಷ್ಕೃತ್ಯ

(Duplicate gold thief arrested by Davangere police)