
ಬಳ್ಳಾರಿ, (ಡಿಸೆಂಬರ್ 22): ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರು (Woman) ಸೆಲ್ಫಿ ವಿಡಿಯೋ ಮಾಡುತ್ತಲ್ಲೇ ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಬಳ್ಳಾರಿಯ (Bellary) ಹುಸೇನ್ ನಗರದಲ್ಲಿ ನಡೆದಿದೆ. ತನಗಾದ ಅನ್ಯಾಯವನ್ನು ವಿಡಿಯೋನಲ್ಲಿ ಹೇಳಿಕೊಳ್ಳುತ್ತಲೇ ಮುನ್ನಿ (23) ಎನ್ನುವ ಮಹಿಳೆ ನೇಣಿಗೆ ಕೊರಳೊಡ್ಡಿದ್ದಾಳೆ. ನಾಲ್ಕು ವರ್ಷದ ಹಿಂದಷ್ಟೆ ಮದುವೆಯಾಗಿದ್ದ ಮುನ್ನಿ, ವರ್ಷದ ಹಿಂದೆ ಗಂಡನಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದಳು. ಬಳಿಕ ಮಹಮ್ಮದ್ ಶೇಕ್ಷಾವಲ್ಲಿ ಎನ್ನುವ ವಿವಾಹಿತ ಪುರುಷನ ಜೊತೆಗೆ ಸ್ನೇಹ ಬೆಳೆದಿತ್ತು. ಸ್ನೇಹ ಸಂಬಂಧಕ್ಕೆ ತಿರುಗಿತ್ತು. ಅದ್ರೆ, ಇದೀಗ ಏಕಾಏಕಿ ವಿಡಿಯೋ ಮಾಡುತ್ತಲೇ ನೇಣಿಗೆ ಶರಣಾಗಿದ್ದಾಳೆ.
23 ವರ್ಷದ ಮುನ್ನಿ ಮೂರು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಆದ್ರೆ, ಅದೇನಾಯೋ ಏನೋ ಒಂದು ವರ್ಷದ ಹಿಂದೆ ಪತಿಗೆ ವಿಚ್ಛೇದನೆ ನೀಡಿ ಎರಡು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಈ ಮಧ್ಯೆ ಮಹಮ್ಮದ್ ಶೇಕ್ ಎನ್ನುವ ವಿವಾಹಿತ ಪುರುಷನ ಜೊತೆಗೆ ಸ್ನೇಹ ಬೆಳೆದಿತ್ತು. ಸ್ನೇಹ ಸಂಬಂಧಕ್ಕೆ ತಿರುಗಿತ್ತು. ಅದ್ರೆ, ಇತ್ತೀಚಿಗೆ ಮಹಮ್ಮದ್ ಶೇಕ್ಷಾವಲ್ಲಿ ಹಾಗೂ ಮುನ್ನಿ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟಿತು. ಅಗಾಗ ಗಲಾಟೆಯೂ ಅಗುತ್ತಿದ್ದವು. ಇದೇ ಕಾರಣಕ್ಕೆ ಮುನ್ನಿ ನೇಣಿಗೆ ಶರಣಾಗಿದ್ದಾಳೆ. ಸಾಯುವ ಮುನ್ನ ತನಗಾದ ಅನ್ಯಾಯದ ವಿವರಣೆ ನೀಡುತ್ತಲೇ ಲೈವ್ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದಾಳೆ.
ಇನ್ನೂ ಗಂಡ ಇಲ್ಲದ ಮುನ್ನಿ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಮೆಹಂದಿ ಹಾಕೋದು ಸೇರಿದಂತೆ ಮೇಕಪ್ ಸಹ ಮಾಡುತ್ತಿದ್ದಳು. ಹೀಗಿರುವಾಗ ಮುನ್ನಿ ಎರಡನೇ ಮದುವೆ ಮಾಡಲು ಮನೆಯಲ್ಲಿ ಸಿದ್ಧತೆ ನಡೆದಿತ್ತು. ಆದ್ರೆ, ಶೆಕ್ಷಾವಲಿ ಜೊತೆಗೆ ಇರೋ ಸಂಬಂಧ ಮುಳುವಾಗಿ ಸಾಯುವ ಹಂತಕ್ಕೆ ಬಂದಿದೆ. ನಿನ್ನೆ (ಡಿಸೆಂಬರ್ 21) ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮುನ್ನಿ ನೇಣಿಗೆ ಶರಣಾಗಿದ್ದಾಳೆ. ವಿಷಯ ತಿಳಿಯುತ್ತಲೇ ಗಾಂಧಿ ನಗರ ಠಾಣೆಗೆ ಅಗಮಿಸಿದ ಶಾಸಕ ಭರತ್ ರೆಡ್ಡಿ ಕುಟುಂಬಸ್ಥರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ಇನ್ನು ಶೇಕ್ಷಾವಲ್ಲಿ ಸಂಬಂಧದಲ್ಲಿ ಮೃತಳ ಅಣ್ಣನಾಗುತ್ತಾನೆ ಎನ್ನುವ ಮಾಹಿತಿಯನ್ನ ಮುನ್ನಿ ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಅನೈತಿಕ ಸಂಬಂಧ ಒಳ್ಳೆದಲ್ಲ ಅಂತ ಹಲವು ಬಾರಿ ಕುಟುಂಬಸ್ಥರು ಇಬ್ಬರಿಗೂ ತಿಳಿ ಹೇಳಿದ್ದರಂತೆ. ಆದ್ರೆ ಇಬ್ಬರ ನಡುವೆ ನಿನ್ನೆ ಏನಾಗಿದೊಯೋ ಏನು ಮುನ್ನಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನ ಕಿರುಕುಳಕ್ಕೆ ಬೇಸತ್ತು ಮುನ್ನಿ ಆತ್ಮಹತ್ಯೆ ಮಾಡ್ಕೊಂಡಿದ್ದಾಳೆಂದು ಕುಟುಂಬದವರ ಆರೋಪಿವಾಗಿದೆ. ಸದ್ಯ ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ಬಳಿಕವೇ ಆತ್ಮಹತ್ಯೆಗೆ ಕಾರಣವೇನು ಎನ್ನುವುದು ತಿಳಿಯಲಿದೆ.