AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಮಂತ ಹುಡುಗರೇ ಈಕೆಯ ಟಾರ್ಗೆಟ್! ಪ್ರೀತಿಯ ನಾಟಕವಾಡಿ ಈಕೆ ಮಾಡಿದ್ದು ಏನು ಗೊತ್ತಾ?

ಧಾರವಾಡದಲ್ಲಿ ಪ್ರೀತಿ ನಾಟಕವಾಡಿ ಯುವಕರನ್ನು ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಮಹಿಳೆಯ ಪ್ರಕರಣ ಬಯಲಾಗಿದೆ. ಐಶ್ವರ್ಯಾ, ರೇಣುಕಾ ಸೇರಿದಂತೆ ಹಲವು ಹೆಸರುಗಳಿಂದ ಯುವಕರನ್ನು ಗುರಿಯಾಗಿಸಿ ಹಣ ಲೂಟಿ ಮಾಡುತ್ತಿದ್ದಳು. ಗುರು ಎಂಬ ಯುವಕನಿಂದ 7 ಲಕ್ಷ ರೂ. ಪಡೆದು, ಮದುವೆಗೆ ನಿರಾಕರಿಸಿದಾಗ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಶ್ರೀಮಂತ ಹುಡುಗರೇ ಈಕೆಯ ಟಾರ್ಗೆಟ್! ಪ್ರೀತಿಯ ನಾಟಕವಾಡಿ ಈಕೆ ಮಾಡಿದ್ದು ಏನು ಗೊತ್ತಾ?
ಶ್ರೀಮಂತ ಹುಡುಗರೇ ಈಕೆಯ ಟಾರ್ಗೆಟ್! ಪ್ರೀತಿಯ ನಾಟಕವಾಡಿ ಈಕೆ ಮಾಡಿದ್ದು ಏನು ಗೊತ್ತಾ?
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Edited By: |

Updated on:Feb 17, 2026 | 3:01 PM

Share

ಧಾರವಾಡ, ಫೆಬ್ರುವರಿ 17: ಪ್ರೀತಿ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ಧಾರವಾಡ (Dharwad) ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಣವಿರುವ ಯುವಕರನ್ನೇ ಟಾರ್ಗೆಟ್ ಮಾಡಿ ಹಣ ಪಡೆದು ವಂಚಿಸುತ್ತಿದ್ದವಳ ವಿರುದ್ಧ ರೊಚ್ಚಿಗೆದ್ದ ಯುವಕನೊಬ್ಬನ ಕುಟುಂಬಸ್ಥರು ನಡುರಸ್ತೆಯಲ್ಲೆ ಆಕೆಗೆ ಧರ್ಮದೇಟು ನೀಡಿದ್ದಾರೆ.

ಐಶ್ವರ್ಯ, ರೇಣುಕಾ, ಆರೋಹಿ ಎಂಬ ಮೂರು ವಿಭಿನ್ನ ಹೆಸರಿನಲ್ಲಿ ಯುವಕರನ್ನು ಪರಿಚಯಿಸಿಕೊಂಡಿದ್ದ ಯುವತಿ, ಆರ್ಥಿಕವಾಗಿ ಸಹಾಯ ಮಾಡುವ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದಳಂತೆ. ಸಂಜು ದೊಡಮನಿ ಹಾಗೂ ಗುರು ವಕ್ಕುಂದ ಸೇರಿದಂತೆ ಮೂವರು ಯುವಕರಿಗೆ ಮದುವೆಯ ಭರವಸೆ ನೀಡಿ ಹಣ ಪಡೆದುಕೊಂಡಿದ್ದಾಳೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯ ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸ ಮಾಡುತ್ತಿರುವ ಈಕೆ, ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಗುರು ವಕ್ಕುಂದ ಎನ್ನುವ ಯುವಕನೊಂದಿಗೆ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಆತನನ್ನು ಪ್ರೀತಿಸುವುದಾಗಿ ಹೇಳಿದಾಗ ಆತನ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಹೀಗೆ ಹೇಳುವಾಗ ತಾನು ಸುಮಾರು 7 ಲಕ್ಷ ರೂಪಾಯಿ ಸಾಲ ಮಾಡಿರೋದಾಗಿಯೂ ಅದನ್ನು ನೀಡಿದರೆ ನಿನ್ನನ್ನು ಮದುವೆಯಾಗೋದಾಗಿಯೂ ಐಶ್ವರ್ಯ ಹೇಳಿದ್ದಳು. ಹೀಗೆಯೇ ಮೂರು ವರ್ಷಗಳ ಬಳಿಕ ಗುರು ವಕ್ಕುಂದ ಮನೆಯವರಿಗೆ ಈ ವಿಚಾರ ಗೊತ್ತಾಗಿ, ಅವರು ಮೊದಲು ಇದನ್ನು ವಿರೋಧಿಸಿದ್ದರು. ಆದರೆ ಗುರು ಯಾವುದೇ ಕಾರಣಕ್ಕೂ ಆಕೆಯನ್ನು ಬಿಡೋದಿಲ್ಲ ಅಂದಿದ್ದಕ್ಕೆ ಮನೆಯವರು ಒಪ್ಪಿಗೆ ನೀಡಿದ್ದರು.

ಈ ಮಧ್ಯೆ ಐಶ್ವರ್ಯ ಸಂಜು ದೊಡ್ಡಮನಿ  ಎಂಬ ಮತ್ತೊಬ್ಬ ಯುವಕನೊಂದಿಗೂ ಸಂಬಂಧ ಇಟ್ಟುಕೊಂಡಿದ್ದಳು. ಇದರಿಂದ ಸಿಟ್ಟು ಮಾಡಿಕೊಂಡಿದ್ದ ಗುರು, ಒಂದು ಕಡೆ ಹಣವೂ ಹೋಯಿತು, ಮತ್ತೊಂದು ಕಡೆ ಮದುವೆಯೂ ಆಗಿಲ್ಲ ಎಂದು ಮನನೊಂದು ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿ ಗರ್ಲ್​ಫ್ರೆಂಡ್ ಎದೆಯ ಮೇಲೆ ಹತ್ತಿ ಕುಳಿತು ಚಾಕು ಮುರಿಯುವವರೆಗೂ ಇರಿದು ಕೊಂದು, ಧೂಪ ಬೆಳಗಿ ಆಕೆಯ ಆತ್ಮ ಕರೆದ ವ್ಯಕ್ತಿ

ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇದೇ ವೇಳೆ ತಾನು ವಿಷ ಸೇವಿಸಿದ್ದಾಗಿ ಗುರು ಐಶ್ವರ್ಯಗಳಿಗೆ ಫೋನ್ ಮಾಡಿ ಹೇಳಿದನೋ ಆಗ ಆಕೆ ನೇರವಾಗಿ ಗುರುನ ತಾಯಿ ರತ್ಮವ್ವಳಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಆಗ ತಮ್ಮ ಮಗನನ್ನು ನೋಡಲು ರತ್ನಮ್ಮ ಜಿಲ್ಲಾಸ್ಪತ್ರೆಗೆ ಬಂದ ಬಳಿಕ ಅಲ್ಲಿಗೆ ಐಶ್ವರ್ಯ ಕೂಡ ತನ್ನ ಇನ್ನೊಬ್ಬ ಲವ್ವರ್ ಸಂಜು ದೊಡ್ಡಮನಿ ಜೊತೆಗೆ ಓಡೋಡಿ ಬಂದಿದ್ದಾಳೆ. ಆಕೆಯನ್ನು ನೋಡುತ್ತಲೇ ಗುರುನ ಕುಟುಂಬಸ್ಥರು ಆಕೆಗೆ ಧರ್ಮದೇಟು ನೀಡಿದ್ಧಾರೆ. ಆಕೆ ಕೂಡಲೇ ತನ್ನ ಹಿಂದಿನ ಬಾಯ್ ಫ್ರೆಂಡ್ ಸಂಜು ದೊಡ್ಡಮನಿಗೆ ಫೋನ್ ಮಾಡಿ ಕರೆಯಿಸಿಕೊಂಡಿದ್ದಾಳೆ. ಆಕೆಯನ್ನೇಕೆ ನೀವು ಟಾರ್ಗೆಟ್ ಮಾಡಿದ್ದೀರಿ ಅಂತಾ ಸಂಜು ಹೇಳುತ್ತಲೇ ಸಿಟ್ಟಿಗೆದ್ದ ಗುರುನ ಕುಟುಂಬಸ್ಥರು ಮತ್ತೆ ಐಶ್ವರ್ಯಗಳನ್ನು ತರಾಟೆಗೆ ತೆಗೆದುಕೊಂಡು ಧರ್ಮದೇಟು ನೀಡಿದ್ಧಾರೆ. ಐಶ್ವರ್ಯಗಳದ್ದು ಇದೊಂದೇ ಇಂಥ ಪ್ರಕರಣವಲ್ಲ ಅನ್ನೋದು ಗುರುನ ಕುಟುಂಬಸ್ಥರ ಆರೋಪ. ಇಂಥ ಅನೇಕ ಕೃತ್ಯಗಳನ್ನು ಆಕೆ ಹಲವಾರು ವರ್ಷಗಳಿಂದ ಮಾಡುತ್ತಲೇ ಬಂದಿರೋದಾಗಿ ಅವರು ಆರೋಪಿಸುತ್ತಿದ್ದಾರೆ. ಇದೀಗ ಧಾರವಾಡ ನಗರ ಠಾಣಾ ಪೊಲೀಸರು ವಿಷ ಸೇವನೆಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:37 pm, Tue, 17 February 26