AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಲ್​ಫ್ರೆಂಡ್ ಎದೆಯ ಮೇಲೆ ಹತ್ತಿ ಕುಳಿತು ಚಾಕು ಮುರಿಯುವವರೆಗೂ ಇರಿದು ಕೊಂದು, ಧೂಪ ಬೆಳಗಿ ಆಕೆಯ ಆತ್ಮ ಕರೆದ ವ್ಯಕ್ತಿ

ಪ್ರೇಮಿ ಪಿಯೂಷ್ ಧಮ್ನೋಟಿಯಾ ತನ್ನ ಪ್ರೇಯಸಿಯನ್ನು ಕೈಕಾಲು ಕಟ್ಟಿ, ಎದೆಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟೇ ಅಲ್ಲದೆ, ಕೊಲೆಯ ನಂತರ ಆಕೆಯ ಆತ್ಮವನ್ನು ಕರೆಯಲು ಪ್ರಯತ್ನಿಸಿದ್ದಾನೆ. ಪ್ರೇಯಸಿ ಬೇರೆ ವ್ಯಕ್ತಿಯೊಂದಿಗೆ ಚಾಟ್ ಮಾಡುತ್ತಿದ್ದಳು ಎಂಬ ಕೋಪದಿಂದ ಈ ಕ್ರೂರ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದೆ.

ಗರ್ಲ್​ಫ್ರೆಂಡ್ ಎದೆಯ ಮೇಲೆ ಹತ್ತಿ ಕುಳಿತು ಚಾಕು ಮುರಿಯುವವರೆಗೂ ಇರಿದು ಕೊಂದು, ಧೂಪ ಬೆಳಗಿ ಆಕೆಯ ಆತ್ಮ ಕರೆದ ವ್ಯಕ್ತಿ
ಕ್ರೈಂImage Credit source: NDTV
ನಯನಾ ರಾಜೀವ್
|

Updated on: Feb 17, 2026 | 10:27 AM

Share

ಮುಂಬೈ, ಫೆಬ್ರವರಿ 17: ವ್ಯಕ್ತಿಯೊಬ್ಬ ಪ್ರೇಯಸಿಯ ಎದೆಯ ಮೇಲೆ ಹತ್ತಿ ಕುಳಿತು, ಚಾಕು ಮುರಿಯುವವರೆಗೂ ಇರಿದು, ಕೊಲೆ ಮಾಡಿ ಬಳಿಕ ಧೂಪ ಬೆಳಗಿ ಆಕೆಯ ಆತ್ಮವನ್ನು ಕರೆದಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆಕೆಯನ್ನು ಕೊಲೆ(Murder)ಮಾಡಿ ಬಳಿಕ ಯೂಟ್ಯೂಬ್ನಲ್ಲಿ ಆತ್ಮವನ್ನು ಕರೆಯುವುದು ಹೇಗೆ ಎಂದು ಸರ್ಚ್​ ಮಾಡಿದ್ದಾನೆ. ಕೊಲೆ ಮಾಡಿದ್ದಕ್ಕೆ ಕ್ಷಮೆಯಾಚಿಸಿ ಆಕೆಯ ಆತ್ಮದೊಂದಿಗೆ ಮಾತನಾಡಲು ಬಯಸುವುದಾಗಿ ಕೇಳಿಕೊಂಡಿದ್ದ.

ಇದು ಕಾಲ್ಪನಿಕವಲ್ಲ, ಇಂದೋರ್‌ನ ದ್ವಾರಕಾಪುರಿ ಪ್ರದೇಶದಲ್ಲಿ ಎಂಬಿಎ ವಿದ್ಯಾರ್ಥಿಯ ಕ್ರೂರ ಹತ್ಯೆಯ ಆರೋಪಿ ಪಿಯೂಷ್ ಧಮ್ನೋಟಿಯಾ ಅವರ ನಡವಳಿಕೆ ಇದು. ಈಗ ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ವಿಚಾರಣೆಯಿಂದ ಹೊರಹೊಮ್ಮುತ್ತಿರುವ ವಿವರಗಳು ನಗರದಾದ್ಯಂತ ಆತಂಕ ಸೃಷ್ಟಿ ಮಾಡಿದೆ. ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಫೆಬ್ರವರಿ 10 ರಂದು ಧಮ್ನೋಟಿಯಾ ವಿದ್ಯಾರ್ಥಿಯೊಂದಿಗೆ ಬರುತ್ತಿರುವುದು ಕಂಡುಬಂದಿತ್ತು. ಸುಮಾರು ಎರಡೂವರೆ ಗಂಟೆಗಳ ನಂತರ, ಅದೇ ಕ್ಯಾಮೆರಾದಲ್ಲಿ ಆತ ಒಂಟಿಯಾಗಿ ಬ್ಯಾಗ್ ಹೊತ್ತುಕೊಂಡು ಹೊರಗೆ ಹೋಗುವುದು ಕಂಡುಬಂದಿತ್ತು. ಆ ಕೋಣೆಯೊಳಗೆ ಏನಾಯಿತು ಎಂಬುದರ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು.

ಪೊಲೀಸ್ ಮೂಲಗಳ ಪ್ರಕಾರ, ಧಮ್ನೋಟಿಯಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಡ ಹೇರಿದ್ದ, ಆಕೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿ ನಿರಾಕರಿಸಿದ್ದಳು. ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದ ಆತ, ಆಕೆಯ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ, ಉಡುಗೊರೆ ನೀಡುವುದಾಗಿ ಹೇಳಿದ್ದ.

ಮತ್ತಷ್ಟು ಓದಿ: ಮೂರು ಮಕ್ಕಳ ಕೊಂದು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ, ಮಹಿಳೆಯ ಕೊಂದು ರೈಲಿನೆದುರು ಹಾರಿ ಆತ್ಮಹತ್ಯೆ

ಅವಳು ಮತ್ತೆ ವಿರೋಧಿಸಿದಾಗ, ಅವನು ಅವಳ ಬಾಯಿಗೆ ಬಟ್ಟೆಯನ್ನು ತುರುಕಿ ಅವಳ ಎದೆಯ ಮೇಲೆ ಕುಳಿತು, ಅವಳು ಪ್ರಜ್ಞೆ ಕಳೆದುಕೊಳ್ಳುವವರೆಗೂ ಅವಳನ್ನು ಉಸಿರುಗಟ್ಟಿಸಿದ್ದ. ಅವಳು ಉಸಿರಾಟವನ್ನು ನಿಲ್ಲಿಸಿದ್ದಾಳೆಂದು ಅರಿತುಕೊಂಡ ಅವನು, ಅವಳ ಎದೆಯ ಬಳಿ ಎಷ್ಟು ಬಲದಿಂದ ಇರಿದಿದ್ದನೆಂದರೆ ಚಾಕುವೇ ಮುರಿದು ಹೋಗಿತ್ತು. ಆದರೆ ಆ ಕ್ರೌರ್ಯ ಸಾವಿನೊಂದಿಗೆ ಕೊನೆಗೊಂಡಿಲ್ಲ. ಆಕೆಯನ್ನು ಕೊಂದ ನಂತರವೂ ಅವನು ಕೋಣೆಯೊಳಗೆ ಇದ್ದ. ಅವನು ಹೊರಗೆ ಬಂದು, ಮದ್ಯದ ಅಂಗಡಿಯಿಂದ ಬಿಯರ್ ಖರೀದಿಸಿ, ಹಿಂತಿರುಗಿ, ಆಕೆಯ ನಿರ್ಜೀವ ದೇಹದ ಪಕ್ಕದಲ್ಲಿ ಕುಳಿತು ಕುಡಿದಿದ್ದ.

ವಿಚಾರಣೆಯ ಸಮಯದಲ್ಲಿ, ಅವನು ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ, ಯುವತಿಯನ್ನು ಬೆತ್ತಲೆಯಾಗಿ ಬಿಟ್ಟು ಪರಾರಿಯಾಗಿದ್ದಾನೆ. ವಿದ್ಯಾರ್ಥಿನಿ ತನ್ನ ಆಧಾರ್ ಕಾರ್ಡ್ ಸರಿಪಡಿಸಬೇಕೆಂದು ಮನೆಯಿಂದ ಹೊರಟಿದ್ದಳು. ಆಕೆಯ ತಂದೆ ಆಕೆಯನ್ನು ಕಲೆಕ್ಟರೇಟ್ ಬಳಿ ಡ್ರಾಪ್ ಮಾಡಿದ್ದರು. ನಂತರ ಆಕೆ ತನ್ನ ತಂಗಿಗೆ ಕರೆ ಮಾಡಿ, ತನ್ನ ಸಹಪಾಠಿ ಪಿಯೂಷ್ ಧಮ್ನೋಟಿಯಾ ಜೊತೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿರುವುದಾಗಿ ಮತ್ತು ರಾತ್ರಿ 11 ಗಂಟೆಗೆ ಹಿಂತಿರುಗುವುದಾಗಿ ಹೇಳಿದಳು.

ರಾತ್ರಿ 11ಗಂಟೆಗೆ ಆಕೆಯ ಫೋನ್ ಇಂದ ಅಪ್ಪಾ ನಾನು ಮನೆಗೆ ಬರುವುದಿಲ್ಲ ಎನ್ನುವ ಸಂದೇಶ ಬಂದಿತ್ತು, ಬಳಿಕ ಮೊಬೈಲ್ ಸ್ವಿಚ್ಡ್​ ಆಫ್ ಆಗಿತ್ತು. ಪೊಲೀಸರು ಮೊಬೈಲ್ ವಶಪಡಿಸಿಕೊಂಡಾಗ ಅವರಿಬ್ಬರು 11 ವಿಡಿಯೋಗಳನ್ನು ಕಾಲೇಜಿನ ವಾಟ್ಸ್​ಆ್ಯಪ್ ಗ್ರೂಪ್​​ನಲ್ಲಿ ಹಾಕಿರುವುದು ಕಂಡುಬಂದಿತ್ತು. ವಿಚಾರಣೆಯ ಸಮಯದಲ್ಲಿ, ಧಮ್ನೋಟಿಯಾ ಘಟನೆಗಳ ಬಗ್ಗೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದ್ದ.

ಕೊಲೆಯ ನಂತರ, ಪಿಯೂಷ್ ಮುಂಬೈಗೆ ಓಡಿಹೋಗಿ, ಪನ್ವೇಲ್ ಮೂಲಕ ಪ್ರಯಾಣಿಸಿ ಹೋಟೆಲ್‌ಗಳಲ್ಲಿ ತಂಗಿದ್ದ. ನಂತರ ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಪ್ರೇಯಸಿಯ ಆತ್ಮದೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಆಕೆಯನ್ನು ನಾನು ಮದುವೆಯಾಗಲು ಬಯಸಿದ್ದೆ, ಆಕೆ 15 ದಿನಗಳಿಂದ ನನ್ನ ಬಳಿ ಮಾತನಾಡಿರಲಿಲ್ಲ, ಆದರೆ ಬೇರೊಬ್ಬನ ಜತೆ ಚಾಟ್ ಮಾಡುತ್ತಿದ್ದಳು, ಅದಕ್ಕೆ ಕೋಪದಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು