ಅತ್ತ ಮದ್ವೆಯಾದ ಗಂಡನೂ ಇಲ್ಲ, ಇತ್ತ ಪ್ರಿಯಕರನೂ ಇಲ್ಲ: ಯುವತಿಯನ್ನು ಒಂಟಿ ಮಾಡಿದ ಆ ವಿಡಿಯೋ
ಅವರಿಬ್ಬರೂ ಪರಸ್ಪರ ಪ್ರೀತಿಸಿ ಯಾವುದೋ ಕಾರಣಕ್ಕೆ ಬೇರೆಯಾಗಿದ್ರು. ಯುವತಿ ಎಲ್ಲವನ್ನು ಮರೆತು ಬೇರೊಬ್ಬರನ ಜೊತೆ ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದ್ದಳು. ಆದ್ರೆ ಮಾಜಿ ಪ್ರಿಯಕರ ಮಾಡಿದ ಅದೊಂದು ಕಿತಾಪತಿಗೆ ಆಕೆಯ ಸಂಚಾರವೇ ಛಿದ್ರ ಛಿದ್ರವಾಗಿದೆ. ಪತಿ ಜೊತೆಗೆ ಬದುಕಿ ಬಾಳಬೇಕಿದ್ದ ಆಕೆಯ ಸಾಂಸಾರಿಕ ಜೀವನ ತಿಂಗಳು ಕಳೆಯುವುದರ ಒಳಗೆ ಅಂತ್ಯ ಕಂಡಿದೆ. ಅತ್ತ ಗಂಡ ಮನೆಯಿಂದ ಆಚೆ ಹಾಕಿದ್ರೆ, ಇತ್ತ ಪ್ರಿಯಕರ ಸಹ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ಯುವತಿ ಕಂಗಾಲಾಗಿದ್ದಾಳೆ.

ಚಿಕ್ಕಬಳ್ಳಾಪುರ, (ಡಿಸೆಂಬರ್ 22): ಮಾಜಿ ಪ್ರಿಯಕರನ (Lover) ಕಿತಾಪತಿಯಿಂದಾಗಿ ಯುವತಿಯ ಸಂಸಾರವೇ ಹಾಳಾಗಿದ್ದು, ಯುವತಿ ಬೀದಿಗೆ ಬಿದ್ದಿದ್ದಾಳೆ. ಹೌದು..ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕೆಂಪನಹಳ್ಳಿ ಗ್ರಾಮದ 20 ವರ್ಷದ ಯುವತಿ, ಕಳೆದ 20 ದಿನಗಳ ಹಿಂದೆಯಷ್ಟೇ ಬೆಂಗಳೂರು ಮೂಲದ ಯುವಕನ ಜೊತೆ ಸಪ್ತಪದಿ ತುಳಿದು ನವ ದಾಂಪತ್ಯಕ್ಕೆ ಕಾಲಿಟ್ಟಿದ್ದಳು. ಆದ್ರೆ ಹನುಮೂನ್ ಮುಗಿಯುವುದಕ್ಕೂ ಮುನ್ನ ಪ್ರೀಯಕರ ಅಂಬರೀಶ, ಸ್ನೇಹಿತ ಸುನಿಲ್ ಹಾಗೂ ಪರಿಚಯಸ್ಥ ಭಾನುಪ್ರೀಯ ಸೇರಿಕೊಂಡು ಯುವತಿ ಹಾಗೂ ಅಂಬರೀಶ ಬೆಡ್ ರೂಮ್ ಹಂಚಿಕೊಂಡಿರುವ ವಿಡಿಯೋವನ್ನು ಆಕೆಯ ಗಂಡನಿಗೆ ಕಳುಹಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪತಿ, 20 ದಿನದ ಹಿಂದಷ್ಟೇ ಮದ್ವೆಯಾಗಿದ್ದ ಪತ್ನಿಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಇತ್ತ ವಿಡಿಯೋ ಹರಿಬಿಟ್ಟ ಪ್ರಿಯಕರ ಸಹ ಸೇರಿಸಿಕೊಳ್ಳುತ್ತಿಲ್ಲ. ಇದರಿಂದ ಯುವತಿಯ ಸಂಸಾರ ಹಾಳಾಗಿದ್ದು, ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗದಿದ್ದಕ್ಕೆ ಇದೀಗ ಯುವತಿ ಜಿಲ್ಲಾಡಳಿ ಕಚೇರಿ ಮೆಟ್ಟಿಲೇರಿದ್ದಾಳೆ.
ನ್ಯಾಯಕ್ಕಾಗಿ ಪ್ರಿಯಕರನ ಮನೆ ಹಾಗೂ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ಮಾಡಿದ್ರೂ ನ್ಯಾಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಈಗ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಚಳಿ ಗಾಳಿ ಎನ್ನದೆ ಧರಣಿ ಕುಳಿತಿದ್ದು, ತನ್ನ ಬದುಕು ಹಾಳು ಮಾಡಿದ ತನ್ನ ಪ್ರೀಯಕರನ ಜೊತೆ ಮದುವೆ ಮಾಡಿಸಿ ಎಂದು ಅವಲತ್ತುಕೊಂಡಿದ್ದಾಳೆ.
ಇದನ್ನೂ ನೋಡಿ: ಮದ್ವೆಯಾದ 20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಮಾಜಿ ಪ್ರಿಯಕರ
ಪ್ರಿಯಕರನ ಜೊತೆಗಿನ ವಿಡಿಯೋ ನೋಡುತ್ತಿದ್ದಂತೆಯೇ ಪತಿ, ಕೈಹಿಡಿದ ಪತ್ನಿಯ ಮಾಗಲ್ಯ ಕಿತ್ತು ವಾಪಸ್ ತವರು ಮನೆಗೆ ಕಳುಹಿಸಿದ್ದಾನೆ. ಇದರಿಂದ ಅತ್ತ ದರಿ ಇತ್ತ ಪುಲಿಯಂತಾದ ನವವಿವಾಹಿತೆ, ಈಗ ತನಗೆ ನ್ಯಾಯ ಕೊಡಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಹಗಲು ರಾತ್ರಿ ಧರಣಿ ನಡೆಸಿದ್ದಾಳೆ. ತನ್ನ ಸಂಸಾರಕ್ಕೆ ಕಲ್ಲು ಹಾಕಿದ ಆಕೆಯ ಪ್ರೀಯಕರ ಪಲಿಚೆರ್ಲು ಗ್ರಾಮದ ಅಂಬರೀಶ, ಅಂಬರೀಶನ ಸ್ನೇಹಿತ ಸುನಿಲ್ ಹಾಗೂ ಪರಿಚಯಸ್ಥ ಭಾನುಪ್ರೀಯಳ ಫೋಟೊಗಳನ್ನು ಹಿಡಿದು ನ್ಯಾಯಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಧರಣಿ ಮಾಡ್ತಿದ್ದಾಳೆ.ಇನ್ನೂ ನೊಂದ ಸಂತ್ರಸ್ಥೆಯ ಧರಣಿಗೆ ಆಕೆಯ ತಾಯಿ, ಅಣ್ಣ, ಬಂಧು ಬಳಗ ಸಾಥ್ ನೀಡಿದ್ದಾರೆ.
ಆದ್ರೆ ಇತ್ತ ಆರೋಪಿತ ಭಾನುಪ್ರೀಯ ಟಿವಿ9ಗೆ ಪ್ರತಿಕ್ರಿಯಿಸಿದ್ದು, ನೊಂದ ಸಂತ್ರಸ್ಥೆ ಹಾಗೂ ಆಕೆಯ ಪ್ರಿಯಕರ ಅಂಬರೀಶ ತನಗೆ ಪರಿಚಯಸ್ಥರು. ಆದ್ರೆ ಆಕೆಯ ಗಂಡನೂ ಗೊತ್ತಿಲ್ಲ, ಅವರ ನಂಬರ್ ಗೊತ್ತಿಲ್ಲ. ನಾನು ಯಾರಿಗೂ ಅವರ ವಿಡಿಯೋ ಕಳುಹಿಸಿಲ್ಲ. ಆದರೂ ನನ್ನ ಫೋಟೋ ಹಿಡಿದು ಧರಣಿ ನಡೆಸಿರುವುದು ಏಕೆ ಎಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ಆ ಒಂದು ವಿಡಿಯೋದಿಂದಾಗಿ ಯುವತಿಯ ಸಂಸಾರ ಛಿದ್ರವಾಗಿದ್ದು, ಅತ್ತ ಗಂಡ ಇಲ್ಲ ಇತ್ತ ಪ್ರಿಯಕರನೂ ಇಲ್ಲದೇ ಇದೀಗ ಬೀದಿಗೆ ಬಂದಿದ್ದಾಳೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:07 pm, Mon, 22 December 25




