ಮದ್ವೆಯಾದ 20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಮಾಜಿ ಪ್ರಿಯಕರ
ಪ್ರೇಯಸಿ ತನ್ನ ಬಿಟ್ಟು ಬೇರೊಬ್ಬನ ಜೊತೆ ಮದುವೆಯಾಗಿರುವುದಕ್ಕೆ ಕೋಪಗೊಂಡ ಪ್ರಿಯಕರ ಆಕೆ ಜೊತೆಗಿನ ಫೋಟೋ, ವಿಡಿಯೋಗಳನ್ನು ವೈರಲ್ ಮಾಡಿದ್ದಾನೆ. ಆ ಫೋಟೋ ಯುವತಿಯ ಗಂಡನ ಫೋನ್ಗೆ ಬಂದಿದ್ದು, 20 ದಿನ ಹಿಂದೆಷ್ಟೇ ಕಟ್ಟಿದ್ದ ತಾಳಿಯನ್ನು ಕಿತ್ತುಕೊಂಡು ಹೆಂಡ್ತಿಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಲಿಚೆರ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ (ಡಿಸೆಂಬರ್ 15): ಪ್ರೇಯಸಿ ತನ್ನ ಬಿಟ್ಟು ಬೇರೊಬ್ಬನ ಜೊತೆ ಮದುವೆಯಾಗಿರುವುದಕ್ಕೆ ಕೋಪಗೊಂಡ ಪ್ರಿಯಕರ ಆಕೆ ಜೊತೆಗಿನ ಫೋಟೋ, ವಿಡಿಯೋಗಳನ್ನು ವೈರಲ್ ಮಾಡಿದ್ದಾನೆ. ಆ ಫೋಟೋ ಯುವತಿಯ ಗಂಡನ ಫೋನ್ಗೆ ಬಂದಿದ್ದು, 20 ದಿನ ಹಿಂದೆಷ್ಟೇ ಕಟ್ಟಿದ್ದ ತಾಳಿಯನ್ನು ಕಿತ್ತುಕೊಂಡು ಹೆಂಡ್ತಿಯನ್ನು ಮನೆಯಿಂದ ಆಚೆ ಹಾಕಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಪಲಿಚೆರ್ಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಂಬರೀಶ್ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದ್ರೆ, ಯುವತಿ ಕಳೆದ 20 ದಿನಗಳ ಹಿಂದಷ್ಟೇ ಬೇರೆ ಹುಡುಗನ ಜೊತೆ ಮದುವೆಯಾಗಿದ್ದಳು. ಇದರಿಂದ ಕೆರಳಿದ ಪ್ರಿಯಕರ ಅಂಬರೀಶ್, ಖಾಸಗಿ ವಿಡಿಯೋವನ್ನು ಪ್ರೇಯಿಸಿ ಪತಿಗೆ ಕಳುಹಿಸಿದ್ದಾನೆ. ಇದರಿಂದ ಪ್ರೇಯಿಸಿ ದಾಂಪತ್ಯ ಜೀವನ ಮುರಿಬಿದ್ದಿದೆ. ಇದರಿಂದ ಕಂಗಾಲಾದ ಯುವತಿ, ನ್ಯಾಯಕ್ಕಾಗಿ ಪ್ರಿಯಕರನ ಮುಂದೆ ಪ್ರತಿಭಟನೆ ನಡೆಸಿದ್ದಾಳೆ. ತನ್ನ ಜೀವನ ಹಾಳುಮಾಡಿದ ಅಂಬರೀಶ್ ನನ್ನ ಜೀವನ ಸರಿಪಡಿಸಬೇಕು ಆಗ್ರಹಿಸಿದ್ದು, ಈ ಸಂಬಂಧ ಅಂಬರೀಶ್ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಸದ್ಯ ಅಂಬರೀಶ್ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

