AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವಕಪ್ ಇತಿಹಾಸದಲ್ಲೇ ಹೀಗೆ ಆಲೌಟಾದ ಮೊದಲ ತಂಡ ಆಸ್ಟ್ರೇಲಿಯಾ!

Australia vs Sri Lanka: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್​ಗಳಲ್ಲಿ 181 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಶ್ರೀಲಂಕಾ ತಂಡ 18 ಓವರ್​ಗಳಲ್ಲಿ ಚೇಸ್ ಮಾಡಿ 8 ವಿಕೆಟ್​ಗಳ ಗೆಲುವು ದಾಖಲಿಸಿದೆ.

ಝಾಹಿರ್ ಯೂಸುಫ್
|

Updated on: Feb 17, 2026 | 7:43 AM

Share
T20 World Cup 2026: ಟಿ20 ವಿಶ್ವಕಪ್‌ನ 30ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ಪಲ್ಲೆಕೆಲೆ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕ ಬೌಲಿಂಗ್ ಆಯ್ದುಕೊಂಡಿದ್ದರು.

1 / 6
ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಸ್ಫೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್‌ನಿಂದಲೇ ಅಬ್ಬರಿಸಲಾರಂಭಿಸಿದ ಈ ಜೋಡಿಯು ಪವರ್ ಪ್ಲೇನಲ್ಲಿ ಕಲೆಹಾಕಿದ್ದು ಬರೋಬ್ಬರಿ 70 ರನ್ ಗಳು.

2 / 6
ಪವರ್ ಪ್ಲೇ ಬಳಿಕ ಕೂಡ ಆರ್ಭಟ ಮುಂದುವರೆಸಿದ ಈ ಜೋಡಿಯು 9ನೇ ಓವರ್‌ನಲ್ಲಿ ತಂಡದ ಮೊತ್ತವನ್ನು 100 ರನ್ ಗಳ ಗಡಿದಾಟಿಸಿದರು. ಈ ಶತಕದ ಜೊತೆಯಾಟದ ಬಳಿಕ ಟ್ರಾವಿಸ್ ಹೆಡ್ (56) ಔಟಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಷ್ (54) ಕೂಡ ವಿಕೆಟ್ ಒಪ್ಪಿಸಿದರು.

3 / 6
ಈ ಎರಡು ವಿಕೆಟ್‌ಗಳ ಪತನದ ಬಳಿಕ ಆಸ್ಟ್ರೇಲಿಯಾ ತಂಡದ ಕುಸಿತ ಶುರುವಾಯಿತು. ಪರಿಣಾಮ ದ್ವಿತೀಯಾರ್ಧದ 10 ಓವರ್‌ಗಳಲ್ಲಿ ಕೇವಲ 71 ರನ್ ಗಳಿಸಿ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡಿತು. ಈ ಮೂಲಕ 181 ರನ್ ಗಳಿಸಿ ಆಲೌಟ್ ಆಗಿದ್ದರು.

4 / 6
ಇದರೊಂದಿಗೆ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿ, ಆ ಬಳಿಕ ದಿಢೀರ್ ಕುಸಿತಕ್ಕೊಳಗಾಗಿ ಆಲೌಟ್ ಆದ ಮೊದಲ ತಂಡ ಎನಿಸಿಕೊಂಡಿತು. ಅಂದರೆ ಟಿ20 ವಿಶ್ವಕಪ್‌ನಲ್ಲಿ ಯಾವುದೇ ತಂಡ ಮೊದಲ ವಿಕೆಟ್‌ಗೆ 100ಕ್ಕೂ ಅಧಿಕ ರನ್ ಗಳಿಸಿದ ಬಳಿಕ ಆಲೌಟ್ ಆದ ನಿದರ್ಶನ ಇರಲಿಲ್ಲ.

5 / 6
ಆದರೆ ಶ್ರೀಲಂಕಾ ಬೌಲರ್‌ಗಳ ಕರಾರುವಾಕ್ಕಾದ ದಾಳಿಗೆ ಕಂಗೆಟ್ಟ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಮೊದಲ ವಿಕೆಟ್‌ಗೆ 100 ರನ್ ಗಳಿಸಿ ಆ ಬಳಿಕ ಆಲೌಟ್ ಆದ ತಂಡ ಎನಿಸಿಕೊಂಡಿದೆ.

6 / 6
ಕೋರ್ಟ್ ತೀರ್ಪಿನ ಬಳಿಕ ಖಡಕ್ ನಿರ್ಧಾರ ತೆಗೆದುಕೊಂಡ ಯಶ್ ತಾಯಿ ಪುಷ್ಪಾ

ರಾಜಸ್ಥಾನದ ಕೆಮಿಕಲ್ ಫ್ಯಾಕ್ಟರಿಯಲ್ಲಿ ನಡೆದ ಸ್ಫೋಟದ ಹೊಸ ವಿಡಿಯೋ ವೈರಲ್

ದಾರಿ ಬಿಡುವ ವಿಚಾರಕ್ಕೆ ಬಸ್- ಆಟೋ ಚಾಲಕ ಹೊಡೆದಾಟ, ವಿಡಿಯೋ ನೋಡಿ

ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುವಾಗ ಕಾಲು ಜಾರಿ ಕೆಳಗೆ ಬಿದ್ದ ಮಹಿಳೆ

ನಾಳೆ ವರ್ಷದ ಮೊದಲ ಸೂರ್ಯಗ್ರಹಣ: ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್

ಜೈಲಿನಲ್ಲಿ ದರ್ಶನ್ ನೋಡಿ ಖುಷಿಯಿಂದ ವಾಪಸ್ ಹೊರಟ ವಿಜಯಲಕ್ಷ್ಮಿ

ಮಗಳ ಮದುವೆ ಸಾಲ ತೀರಿಸೋಕೆ ದುಡಿಯುತ್ತಿದ್ದ ಅಪ್ಪ-ಮಗ ಒಟ್ಟಿಗೆ ಸಾವು

ಸಚಿವ ಸ್ಥಾನಕ್ಕೆ ರಾಜೀನಾಮೆ: ಸ್ಪಷ್ಟನೆ ಕೊಟ್ಟ SS ಮಲ್ಲಿಕಾರ್ಜುನ್

ಸಿದ್ದಾರೂಢರ ಮಹಾರಥೋತ್ಸವದಲ್ಲಿ ಭಕ್ತ ಸಾಗರ: ಎತ್ತ ನೋಡಿದ್ರೂ ಜನವೋ ಜನ