ಬಳ್ಳಾರಿಯಲ್ಲಿ 31 ಕೆಜಿ ಬೆಳ್ಳಿ ವಸ್ತು ಕಳ್ಳತನ ಕೇಸ್ : ಕೆಲಸ ಕೊಟ್ಟ ಮಾಲೀಕನ ಅಂಗಡಿಗೆ ಕನ್ನ ಹಾಕಿದ ಖದೀಮರು ಅಂದರ್

|

Updated on: Jun 22, 2023 | 1:13 PM

ಕೆಲ ದಿನಗಳ ಹಿಂದೆ ನಗರದ ಜುವೆಲರ್ಸ್ ಶಾಪ್​ನಲ್ಲಿ‌ 31 ಕೆ.ಜಿ ಬೆಳ್ಳಿ ಕಳ್ಳತನವಾಗಿತ್ತು. ಈ ಹಿನ್ನಲೆ ಅಂಗಡಿ ಮಾಲೀಕ ಚಂದ್ರಕಾಂತ ಸೋನಿ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ಇದೀಗ 6 ಆರೋಪಿಗಳನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ಬಳ್ಳಾರಿಯಲ್ಲಿ 31 ಕೆಜಿ ಬೆಳ್ಳಿ ವಸ್ತು ಕಳ್ಳತನ ಕೇಸ್ : ಕೆಲಸ ಕೊಟ್ಟ ಮಾಲೀಕನ ಅಂಗಡಿಗೆ ಕನ್ನ ಹಾಕಿದ ಖದೀಮರು ಅಂದರ್
ಆರೋಪಿಗಳು ಅರೆಸ್ಟ್​
Follow us on

ಬಳ್ಳಾರಿ: ಕೆಲ ದಿನಗಳ ಹಿಂದೆ ನಗರದ ಜುವೆಲರ್ಸ್ ಶಾಪ್​ನಲ್ಲಿ‌ 31 ಕೆ.ಜಿ ಬೆಳ್ಳಿ(Silver) ಕಳ್ಳತನವಾಗಿತ್ತು. ಈ ಹಿನ್ನಲೆ ಅಂಗಡಿ ಮಾಲೀಕ ಚಂದ್ರಕಾಂತ ಸೋನಿ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ಇದೀಗ 6 ಆರೋಪಿಗಳನ್ನು ಬಳ್ಳಾರಿ(Ballari) ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಹೌದು ಅಂಗಡಿ ಮಾಲೀಕ ಚಂದ್ರಕಾಂತ ಸೋನಿ ಇಲ್ಲದ ವೇಳೆ ನೋಡಿಕೊಂಡು ಅಲ್ಲಿಯೇ ಕೆಲಸ ಮಾಡುತ್ತಿದ್ದ ಆರು ಜನ ಆರೋಪಿಗಳು 22 ಲಕ್ಷ ರೂಪಾಯಿ ಮೌಲ್ಯದ 31 ಕೆ.ಜಿ ಬೆಳ್ಳಿ ಕಳವು ಮಾಡಿದ್ದರು. ಈ ಕುರಿತು ಪೊಲೀಸರಿಗೆ ತಲೆ ನೋವಾಗಿದ್ದ ಆರೋಪಿಗಳನ್ನ ಅಂಗಡಿ ಮಾಲೀಕ ನೀಡಿದ ಸುಳಿವಿನ ಮೇರೆಗೆ ಆರೋಪಿಗಳು ಅಂದರ್​ ಆಗಿದ್ದಾರೆ.

ಇನ್ನು ಬಹುದಿನಗಳಿಂದ ಚಂದ್ರಕಾಂತ ಸೋನಿ ಅವರ ಜೊತೆಗಿದ್ದ ಆರೋಪಿಯೊಬ್ಬ ಅವರ ಕಾರಿನಲ್ಲಿ 2 ಕೆ.ಜಿ ಬೆಳ್ಳಿ ಇಟ್ಟಿದ್ದ. ಇದೇ ಇಡೀ ಪ್ರಕರಣ ಹೊರಬರಲು ಕಾರಣವಾಯಿತು. ಹೌದು ಕಾರಿನಲ್ಲಿದ್ದ ಎರಡು ಕೆ.ಜಿ ಬೆಳ್ಳಿ ಅಂಗಡಿ ಮಾಲೀಕನ ಕಣ್ಣಿಗೆ ಬಿದ್ದಿದ್ದು, ಈ ಬಗ್ಗೆ ಸಂಶಯಗೊಂಡ ಚಂದ್ರಕಾಂತ್​ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ತನಿಖೆ ನಡೆಸಿದಾಗ ಆರು ಆರೋಪಿಗಳು ಸೇರಿಕೊಂಡು 31 ಕೆ.ಜಿ. ಬೆಳ್ಳಿಯನ್ನ ‌ಕಳವು ಮಾಡಿದ್ದು ಪತ್ತೆಯಾಗಿದೆ. ಈ ಪ್ರಕರಣ ಪತ್ತೆಗೆ ಸಿರುಗುಪ್ಪ ಡಿವೈಎಸ್ಪಿ ವೆಂಕಟೇಶ ಮತ್ತು ಬಳ್ಳಾರಿ ಗ್ರಾಮೀಣ ಇನ್ಸ್‌ಪೆಕ್ಟರ್ ಪಿ. ನಿರಂಜನ್​ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಇದನ್ನೂ ಓದಿ:ರೈಲ್ವೆ ಪ್ರಯಾಣದ ವೇಳೆ ವಸ್ತುಗಳು ಕಳ್ಳತನವಾದರೇ ರೈಲ್ವೆ ಇಲಾಖೆ ಹೊಣೆಯಲ್ಲ: ಸುಪ್ರಿಂ ಕೋರ್ಟ್​

ಸಾಮಿಲ್​ನಲ್ಲಿ ಒಂಟೆ ಪತ್ತೆ; ದಾಳಿ ನಡೆಸಿ ಒಂಟೆಯನ್ನ ರಕ್ಷಿಸಿದ ಪೊಲೀಸರು

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಸೈಯದ್ ಬಿಲಾಲ್ ಎಂಬುವವರಿಗೆ ಸೇರಿದ ರೆಹಮಾನಿಯಾ ಸಾಮಿಲ್​ನಲ್ಲಿ ಒಂಟೆ ಪತ್ತೆಯಾಗಿದ್ದು, ಬಕ್ರಿದ್ ಹಬ್ಬಕ್ಕೆ ಒಂಟೆಯನ್ನು ಕಡಿಯುವ ಉದ್ದೇಶದಿಂದ ಅಕ್ರಮವಾಗಿ ತಂದಿರುವ ಶಂಕೆ ವ್ಯಕ್ತವಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಶಿರಾಳಕೊಪ್ಪ ಪೋಲಿಸರ ಭರ್ಜರಿ ಕಾರ್ಯಾಚರಣೆ ನಡೆಸಿ, ಪ್ರಾಣಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲು ಮಾಡಿ, ಒಂಟೆಯನ್ನ ಪೋಲಿಸರು ರಕ್ಷಿಸಿದ್ದಾರೆ. ಇನ್ನು ಈ ಹಿಂದೆ ಸೈಯದ್ ಬಿಲಾಲ್‌ ಎಂಬ ವ್ಯಕ್ತಿ ಮೇಲೆ ಆಕ್ರಮವಾಗಿ ಜಿಂಕೆ ಮರಿಯನ್ನು ಸಾಮಿಲ್​ನಲ್ಲಿ ಕಟ್ಟಿ ಹಾಕಿದ್ದ ಪ್ರಕರಣ ಕೂಡ ದಾಖಲಾಗಿತ್ತು. ಇದೀಗ ಒಂಟೆ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ