ಸಂಕಷ್ಟದಲ್ಲಿರೋ ರೈತರಿಗೆ ಇದೀಗ ಮತ್ತೊಂದು ಶಾಕ್: ಬೆಳೆ ಸಾಲ ಮರುಪಾವತಿಗೆ ರೈತರಿಗೆ ನೋಟೀಸ್ ಜಾರಿ
ಇದೀಗ ಅನ್ನದಾತರ ಸಂಕಷ್ಟ ಆಲಿಸದೆ ಸಾಲ ಮರುಪಾವತಿಗೆ ಬ್ಯಾಂಕ್ ಸಿಬ್ಬಂದಿ ಪಟ್ಟು ಹಿಡಿದಿದೆ. ಕಾನೂನು ಕ್ರಮದ ಬೆದರಿಕೆ ಆರೋಪ ಮಾಡಿದ್ದು, ಕಷ್ಟದ ಪರಿಸ್ಥಿತಿಯಲ್ಲೂ ಸಾಲ ಮರುಪಾವತಿ ಮಾಡ್ತೇವೆ ಆದ್ರೆ ಬಡ್ಡಿ ವಿನಾಯ್ತಿಗೆ ರೈತರು ವಿಜಯನಗರ ಡಿಸಿ ಮೋರೆ ಹೋಗಿದ್ದಾರೆ.
ವಿಜಯನಗರ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ಅನ್ನದಾತರಿಗೆ ಇದೀಗ ಆತಂಕ ಶುರುವಾಗಿದ್ದು, ಬೆಳೆ ಸಾಲ ಮರುಪಾವತಿಗೆ ರೈತರಿಗೆ ನೋಟೀಸ್ ನೀಡಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಜಮೀನು ಹರಾಜು ಹಾಕುವ ಮೌಖಿಕ ನೋಟೀಸ್ ಜಾರಿ ಮಾಡಿದ್ದು, ಸಂಕಷ್ಟದಲ್ಲಿರೋ ರೈತರಿಗೆ ಇದೀಗ ಮತ್ತೊಂದು ಶಾಕ್ ನೀಡಲಾಗಿದೆ. ಕೃಷಿಗಾಗಿ ರೈತರು ಮಾಡಿದ ಸಾಲ ಮರುಪಾವತಿಗಾಗಿ ನೋಟೀಸ್ ಕಿರುಕುಳ ಆರೋಪ ಮಾಡಲಾಗಿದೆ. ಕೊನೆಯ ಹಂತದ ಕಾನೂನು ಕ್ರಮ ಜರುಗಿಸುವುದಾಗಿ ಬ್ಯಾಂಕ್‌ನಿಂದ ರೈತರಿಗೆ ನೋಟೀಸ್ ನೀಡಲಾಗಿದೆ. ಈಗಾಗಲೇ 300 ಕ್ಕೂ ಹೆಚ್ಚು ರೈತರಿಗೆ ಅಂತಿಮ ಹಂತದ ನೋಟೀಸ್ ಜಾರಿ ಮಾಡಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹೊಸಪೇಟೆ ಶಾಖೆಯಿಂದ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಟ್ಟೂರು ತಾಲೂಕಿನ ನೂರಾರು ರೈತರಿಗೆ ನೋಟೀಸ್ ನೀಡಲಾಗಿದೆ. ಸಾಲ ಮರುಪಾವತಿ ಮಾಡಬೇಕು ಇಲ್ಲವಾದ್ರೆ ಆಸ್ತಿ ಜಪ್ತಿ ಮಾಡುವುದಾಗಿ ಆರೋಪ ಕೇಳಿಬಂದಿದೆ. ಬ್ಯಾಂಕ್ ನಡೆಗೆ ವಿಜಯನಗರದ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷವೂ ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿತ್ತು. ಅಸಲು, ಬಡ್ಡಿ ಮರುಪಾವತಿ ಸಾಧ್ಯ ಆಗಿಲ್ಲ. ಇದೀಗ ಚಕ್ರ ಬಡ್ಡಿ ರೂಪದಲ್ಲಿ ಸಾಲ ದುಪ್ಪಟ್ಟಾಗಿದೆ ಅಂತಾ ಅನ್ನದಾತರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: IPL 2022 Points Table: ಲೀಗ್ ಪಂದ್ಯಗಳು ಇಂದಿಗೆ ಅಂತ್ಯ: ಐಪಿಎಲ್ ಪಾಯಿಂಟ್ ಟೇಬಲ್ ಈಗ ಹೀಗಿದೆ ನೋಡಿ
ಇದೀಗ ಅನ್ನದಾತರ ಸಂಕಷ್ಟ ಆಲಿಸದೆ ಸಾಲ ಮರುಪಾವತಿಗೆ ಬ್ಯಾಂಕ್ ಸಿಬ್ಬಂದಿ ಪಟ್ಟು ಹಿಡಿದಿದೆ. ಕಾನೂನು ಕ್ರಮದ ಬೆದರಿಕೆ ಆರೋಪ ಮಾಡಿದ್ದು, ಕಷ್ಟದ ಪರಿಸ್ಥಿತಿಯಲ್ಲೂ ಸಾಲ ಮರುಪಾವತಿ ಮಾಡ್ತೇವೆ ಆದ್ರೆ ಬಡ್ಡಿ ವಿನಾಯ್ತಿಗೆ ರೈತರು ವಿಜಯನಗರ ಡಿಸಿ ಮೋರೆ ಹೋಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.