AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಎನ್​ಐಎ ದಾಳಿಯಲ್ಲಿ ಇಬ್ಬರ ಬಂಧನ ಕೇಸ್​: ಸಂಚಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಂಕಿತ ಉಗ್ರರು

ಬಳ್ಳಾರಿಯಲ್ಲಿ ಎನ್​ಐಎ ದಾಳಿ ನಡೆಸಿ ಇಬ್ಬರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರು ನಡೆಸಿದ್ದ ಸಂಚಿನ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ನವೆಂಬರ್ 22ರಂದು ರಸಗೊಬ್ಬರ ಮಳಿಗೆಯಲ್ಲಿ ಸ್ಫೋಟಕ ತಯಾರಿಕೆಗೆ ಬಳಸಲು 1 ಕೆಜಿ ಅಮೋನಿಯಂ ನೈಟ್ರೇಟ್ ಖರೀದಿಸಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಬಳ್ಳಾರಿ: ಎನ್​ಐಎ ದಾಳಿಯಲ್ಲಿ ಇಬ್ಬರ ಬಂಧನ ಕೇಸ್​: ಸಂಚಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಂಕಿತ ಉಗ್ರರು
ಪ್ರಾತಿನಿಧಿಕ ಚಿತ್ರ
ವಿನಾಯಕ ಬಡಿಗೇರ್​
| Edited By: |

Updated on:Dec 23, 2023 | 3:38 PM

Share

ಬಳ್ಳಾರಿ, ಡಿಸೆಂಬರ್​ 23: ನಗರದಲ್ಲಿ ಎನ್​ಐಎ (NIA) ದಾಳಿ ನಡೆಸಿ ಇಬ್ಬರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆ ಮೂಲಗಳಿಂದ ಶಂಕಿತ ಉಗ್ರರು ನಡೆಸಿದ್ದ ಸಂಚಿನ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ನವೆಂಬರ್ 22ರಂದು ರಸಗೊಬ್ಬರ ಮಳಿಗೆಯಲ್ಲಿ ಸ್ಫೋಟಕ ತಯಾರಿಕೆಗೆ ಬಳಸಲು 1 ಕೆಜಿ ಅಮೋನಿಯಂ ನೈಟ್ರೇಟ್ ಖರೀದಿಸಿದ್ದರು. ಶಂಕಿತ ಉಗ್ರರು ಅಂಗಡಿಗೆ ಬಂದಿದ್ದ ಬಗ್ಗೆ ಮಾಲೀಕರಿಗೆ ಮಾಹಿತಿಯಿಲ್ಲ.

ಬಳ್ಳಾರಿಯಲ್ಲಿ ಒಂಬತ್ತು ಕಡೆಗಳಲ್ಲಿ ಎನ್​ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಮೊಹಮ್ಮದ್ ಸುಲೇಮಾನ್, ಸೈಯದ್ ಸಮೀರ್​ನ್ನು NIA ಬಂಧಿಸಿತ್ತು.

ನಕಲಿ ನೋಟು ಪ್ರೀಂಟ್ ಜಾಲ: ಓರ್ವ ಬಂಧನ

ದೇಶಾದ್ಯಾಂತ ಸಂಚಲನ ಮೂಡಿಸಿರು ನಕಲಿ ನೋಟ್ ಮುದ್ರಣ ಮತ್ತು ಚಲಾವಣೆ ಪ್ರಕರಣದಲ್ಲಿ ಎನ್ಐಎ ತಂಡ ವಿವಿಧ ರಾಜ್ಯದ ನಾಲ್ವರು ಮತ್ತು ಬಳ್ಳಾರಿಯ ಯುವಕನೊರ್ವನನ್ನು ಇತ್ತೇಚೆಗೆ ಬಂಧಿಸಿದ್ದರು. ಹಳೇ ನೋಟು ಬದಲಾಗಿ ಹೊಸ ನೋಟುಗಳ ಮುದ್ರಣ ಪ್ರಾರಂಭವಾದ ಬಳಿಕ ನಕಲಿ ನೋಟಿನ ಹಾವಳಿಗೆ ಕಡಿವಾಣ ಬಿದ್ದಿತ್ತು. ಆದರೆ, ಇದೀಗ ಎನ್ಐಎ ದೇಶದ ನಾಲ್ಕು ಪ್ರಮುಖ ರಾಜ್ಯಗಳ ಮೇಲೆ ದಾಳಿ ಮಾಡಿ ನಕಲಿ ನೋಟಿನ ದೊಡ್ಡ ಜಾಲವೊಂದನ್ನು ಪತ್ತೆ ಮಾಡಿತ್ತು.

ಇದನ್ನೂ ಓದಿ: ದೇಶದ 41 ಕಡೆ NIA ದಾಳಿ, ಬೆಂಗಳೂರಿನಲ್ಲಿ ಸ್ಫೋಟಕ ತಯಾರಿಕೆಗೆ ಬಳಸುವ 7 ಕೆಜಿ ಸೋಡಿಯಂ ನೈಟ್ರೇಟ್ ಪತ್ತೆ

ಉತ್ತರ ಪ್ರದೇಶದ ಮೂಲದ ಕಿಂಗ್ ಪಿನ್ ಗಳಾದ ರಾಹುಲ್ ತಾನಜಿ ಪಾಟೀಲ್, ಮಹಾರಾಷ್ಟ್ರದ ವಿವೇಕ್ ಠಾಕೂರು, ಶಿವು ಪಾಟೀಲ್, ಬಿಹಾರದ ಶಶಿಭೂಷಣ್ ಸೇರಿದಂತೆ ಬಳ್ಳಾರಿಯ 19 ವರ್ಷದ ಯುವಕ ಮಹೇಂದ್ರ ಅವರನ್ನು ಬಂಧಿಸಿದ್ದರು.

ಬಳ್ಳಾರಿಯ ಮಹೇಂದ್ರ ಮನೆಯಲ್ಲಿ ಐದು ನೂರು ಮುಖ ಬೆಲೆಯ ಅಚ್ಚಿನ ಮಾದರಿ ಮತ್ತು ಒಂದು ಪ್ರಿಂಟಿಂಗ್ ಮಿಷನ್ ಸೀಜ್ ಮಾಡಲಾಗಿತ್ತು. ಆದರೆ ಮಹೇಂದ್ರ ಕುಟುಂಬಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. 10ನೇ ತರಗತಿಯವರೆಗೂ ಆಂಧ್ರದಲ್ಲಿ ವ್ಯಾಸಂಗ ಮಾಡಿದ ಮಹೇಂದ್ರ ಕಳೆದೆರಡು ವರ್ಷದ ಹಿಂದೆ ಬಳ್ಳಾರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದನು. ಇವನಿಗೆ ಇಷ್ಟೆಲ್ಲ ಲಿಂಕ್ ಹೇಗೆ ಸಿಕ್ತು ಎನ್ನುವದೇ ದೊಡ್ಡ ಪ್ರಶ್ನೆಯಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:27 pm, Sat, 23 December 23

Follow Us
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
‘ಮಹಾಕವಿ’ ಸಿನಿಮಾದಲ್ಲಿ ಪಂಪನ ಪಾತ್ರ ಮಾಡಿದ ಖ್ಯಾತ ನಟ ಕಿಶೋರ್
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಕೊಲೆ ಆರೋಪಿ ದರ್ಶನ್ ಭೇಟಿಗೆ ಆಗಮಿಸಿದ ನಟಿ ರಕ್ಷಿತಾ ಪ್ರೇಮ್, ವಿಜಯಲಕ್ಷ್ಮೀ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಪ್ರಧಾನಿ ನಿವಾಸದ ಬಳಿ ಧರಣಿ ವೇಳೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
ನನ್ನ ತಂದೆಗೆ ಇಲ್ಲವಾದರೆ ನನಗೆ ಸಚಿವ ಸ್ಥಾನ ನೀಡಿ: ರಾಜೇಂದ್ರ ರಾಜಣ್ಣ
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ