ಬಳ್ಳಾರಿ: ಮುಖ್ಯ ಶಿಕ್ಷಕಿ ಕರ್ತವ್ಯ ವಹಿಸಿಕೊಳ್ಳುವಾಗ ಬೈಬಲ್ ಬೋಧನೆ ಮಾಡಿದ ಪಾಸ್ಟರ್, ನೊಟೀಸ್ ನೀಡಿದ ಡಿಡಿಪಿಐ

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 27, 2022 | 12:49 PM

ಬಳ್ಳಾರಿ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಮುಖ್ಯಶಿಕ್ಷಕಿಯಾಗಿ ಅಧಿಕಾರ ಸ್ವೀಕಾರ ಮಾಡುವ ವೇಳೆ ಚರ್ಚ್​ ಪಾಸ್ಟರ್ ಮೂಲಕ ಧರ್ಮಭೋಧನೆ ಮಾಡಿಸಿರುವ ಆರೋಪ ಕೇಳಿಬಂದಿದೆ.

ಬಳ್ಳಾರಿ: ಮುಖ್ಯ ಶಿಕ್ಷಕಿ ಕರ್ತವ್ಯ ವಹಿಸಿಕೊಳ್ಳುವಾಗ ಬೈಬಲ್ ಬೋಧನೆ ಮಾಡಿದ ಪಾಸ್ಟರ್, ನೊಟೀಸ್ ನೀಡಿದ ಡಿಡಿಪಿಐ
ಮುಖ್ಯ ಶಿಕ್ಷಕಿಯಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ
Follow us on

ಬಳ್ಳಾರಿ: ನಗರದ ಸರ್ಕಾರಿ ಶಾಲೆಯ ಜಾಯ್ ಡಿಬೋರಾ ಎಂಬ ಶಿಕ್ಷಕಿಯೊಬ್ಬರು ಮುಖ್ಯಶಿಕ್ಷಕಿಯಾಗಿ ಅಧಿಕಾರ ಸ್ವೀಕಾರ ಮಾಡುವ ವೇಳೆಯಲ್ಲಿ ಚರ್ಚ್​ ಪಾಸ್ಟರ್​ನನ್ನು ಕರೆಯಿಸಿ ಬೈಬಲ್ ಗ್ರಂಥವಿಟ್ಟು ಪ್ರಾರ್ಥನೆ, ಧರ್ಮಭೋಧನೆ ಮಾಡಿಸಿದ್ದಾರೆ. ಇದರ ಜೊತೆಗೆ ಮುಖ್ಯಶಿಕ್ಷಕಿ ತನ್ನ ಕುರ್ಚಿಯ ಮೇಲೆ ಪಾಸ್ಟರ್​ನನ್ನು ಕೂಡಿಸಿದ್ದಾರೆ. ಮುಖ್ಯ ಶಿಕ್ಷಕಿಯ ಅಧಿಕಾರ ಸ್ವೀಕಾರ ಸಮಾರಂಭದ ವೇಳೆ ಚರ್ಚ್​ ಪಾಸ್ಟರ್​ ಅವರಿಂದ ಧರ್ಮಭೋಧನೆ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಶಿಕ್ಷಕಿಯ ಈ ನಡೆಯ ವಿರುದ್ದ ಶಿಕ್ಷಣ ಸಚಿವರು ಸೇರಿದಂತೆ ಹಲವರಿಗೆ ದೂರು ಸಲ್ಲಿಕೆಯಾಗಿದೆ.

ಬಳ್ಳಾರಿಯ ಸರ್ಕಾರಿ ಗರ್ಲ್ಸ್ ಹೈಸ್ಕೂಲಿನ ಹಿಂದಿ ಶಿಕ್ಷಕಿ ಜಾಯ್ ಡಿಬೋರಾ ಮುಖ್ಯಶಿಕ್ಷಕಿಯಾಗಿ ಅಧಿಕಾರ ಸ್ವೀಕಾರ ಸಮಾರಂಭದ ವೇಳೆ ಚರ್ಚ್ ಪಾಸ್ಟರ್ ಕರೆಯಿಸಿ ಶಿಕ್ಷಕರಿಗೆ ಧರ್ಮ ಭೋಧನೆ ಮಾಡಿದ್ದಾರೆ ಅನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಇತ್ತೀಚಿಗೆ ಶಾಲೆಯ ಮುಖ್ಯಶಿಕ್ಷಕರಾಗಿ ಪ್ರಭಾರ ವಹಿಸಿಕೊಂಡ ಜಾಯ್ ಡಿಬೋರಾ ಎನ್ನುವವರು ಅಧಿಕಾರ ಸ್ವೀಕಾರ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಇದೇ ವೇಳೆ ನಗರದ ಚರ್ಚ್ ಪಾಸ್ಟರ್​ರೊಬ್ಬರನ್ನು ಶಾಲೆಗೆ ಕರೆಯಿಸಿ ಅಧಿಕಾರ ಸ್ವೀಕಾರದ ವೇಳೆ ಬೈಬಲ್ ಗ್ರಂಥವಿಟ್ಟು ಪ್ರಾರ್ಥನೆ ಮಾಡಿದ್ದಾರಂತೆ.

ಶಿಕ್ಷಕರಿಗೆ ಧರ್ಮಭೋಧನೆ ಮಾಡಿದ ಚರ್ಚ್​ ಪಾಸ್ಟರ್ ಶಾಲೆಯ ಹೆಡ್​ಮಾಸ್ಟರ್ ಕುರ್ಚಿಯ ಮೇಲೆ ಕುಳಿತಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಶಾಲೆಯ ಕೆಲ ಶಿಕ್ಷಕರು. ಸ್ಥಳೀಯರು ಮುಖ್ಯಶಿಕ್ಷಕಿಯ ವರ್ತನೆ ಹಾಗೂ ಅಧಿಕಾರ ದುರುಪಯೋಗದ ವಿರುದ್ದ ಶಿಕ್ಷಣ ಸಚಿವರು. ಡಿಡಿಪಿಐ, ಡಿಸಿಯವರಿಗೆ ಲಿಖಿತವಾಗಿ ದೂರು ಸಲ್ಲಿಸಿದ್ದಾರೆ. ಡಿಡಿಪಿಐ ಅವರು ಪಾಸ್ಟರ್ ಶಾಲೆಯ ಹೆಡ್​ಮಾಸ್ಟರ್ ಕುರ್ಚಿಯ ಮೇಲೆ ಕುಳಿಸಿರುವುದಕ್ಕೆ ಸೋಮವಾರ ಲಿಖಿತವಾಗಿ ಉತ್ತರ ನೀಡಬೇಕು ಎಂದು ಮುಖ್ಯ ಶಿಕ್ಷಕಿಗೆ ದೂರವಾಣಿ ಕರೆಯ ಮೂಲಕ ಹೇಳಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯ ಶಿಕ್ಷಕಿ, ‘ಪಾಸ್ಟರ್ ಬಂದಿದ್ದು ಸತ್ಯ. ಅವರು ನನ್ನ ಸಹೋದರ. ಅಧಿಕಾರ ಸ್ವೀಕಾರ ಮಾಡಿದಕ್ಕೆ ಶುಭಾಶಯ ಕೋರಲು ಬಂದಿದ್ದರು. ಆದರೆ ಶಾಲೆಯ ಶಿಕ್ಷಕರಿಗೆ ಧರ್ಮಭೋಧನೆ ಮಾಡಿಲ್ಲ, ಬೈಬಲ್ ಗ್ರಂಥವಿಟ್ಟು ಪ್ರಾರ್ಥನೆ ಮಾಡಿಲ್ಲ’ ಎಂದು ತಿಳಿಸಿದರು.

ವರದಿ: ವೀರೇಶ್​ ದಾನಿ ಟಿವಿ9 ಬಳ್ಳಾರಿ

ಇದನ್ನೂ ಓದಿ: ಬಳ್ಳಾರಿ: ನಕಲಿ ಹತ್ತಿ ಬೀಜ ಬಿತ್ತಿ ಮೋಸ ಹೋದ ಅನ್ನದಾತರು; ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ರೈತರ ಪರಿಸ್ಥಿತಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ