Koluru Basanagouda: ಕಾಂಗ್ರೆಸ್ನ ಮತ್ತೋರ್ವ ಹಿರಿಯ ನಾಯಕ ಕೂಳೂರು ಬಸವನಗೌಡ ವಿಧಿವಶ
ಕಾಂಗ್ರೆಸ್ ನಾಯಕ ಶ್ರೀಶೈಲಪ್ಪ ಬಿದರೂರು ಸಾವನ್ನಪ್ಪಿದ್ದ ಬೆನಲ್ಲೇ ಇದೀಗ ಮತ್ತೋರ್ವ ಕಾಂಗ್ರೆಸ್ ಹಿರಿಯ ನಾಯಕ ವಿಧಿವಶರಾಗಿದ್ದಾರೆ.
ಬಳ್ಳಾರಿ: ಲಿಂಗಾಯತ ಸಮುದಾಯದ ಹಿರಿಯ ಮುಖಂಡ, ಬಳ್ಳಾರಿಯ ಮಾಜಿ ಸಂಸದ ಕೂಳೂರು ಬಸವನಗೌಡ(88) (koluru basanagouda)ವಿಧಿವಶರಾಗಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೂಳೂರು ಬಸವನಗೌಡ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು(ನವೆಂಬರ್ 25) ಕೊನೆಯುಸಿರೆಳೆದರು.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಗೆ ಬಂದಿದ್ದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರುಗೆ ಹೃದಯಘಾತ, ಆಸ್ಪತ್ರೆಯಲ್ಲಿ ನಿಧನ
2000ರಲ್ಲಿ ಸೋನಿಯಾ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು. ನಾಳೆ(ನವೆಂಬರ್ 26) ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Published On - 4:09 pm, Fri, 25 November 22