Vijayanagara: BSNL ಕಚೇರಿ ಗೇಟ್‌ ಮುರಿದುಬಿದ್ದು 7 ವರ್ಷದ ಬಾಲಕ ಸಾವು

BSNL ಕಚೇರಿ ಗೇಟ್‌ ಮುರಿದುಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಆಧಾರ್ ಕಾರ್ಡ್‌ ತಿದ್ದುಪಡಿಗೆ ಬಂದಿದ್ದ 7 ವರ್ಷದ ಗೌತಮ್ ಎಂಬ ಬಾಲಕ ಸಾವನ್ನಪ್ಪಿದ್ದಾನೆ.

Vijayanagara: BSNL ಕಚೇರಿ ಗೇಟ್‌ ಮುರಿದುಬಿದ್ದು 7 ವರ್ಷದ ಬಾಲಕ ಸಾವು
ಸಾಂದರ್ಭಿಕ ಚಿತ್ರ
TV9kannada Web Team

| Edited By: ಅಕ್ಷಯ್​ ಕುಮಾರ್​​

Nov 24, 2022 | 8:02 PM

ವಿಜಯನಗರ: BSNL ಕಚೇರಿ ಗೇಟ್‌ ಮುರಿದುಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಆಧಾರ್ ಕಾರ್ಡ್‌ ತಿದ್ದುಪಡಿಗೆ ಬಂದಿದ್ದ 7 ವರ್ಷದ ಗೌತಮ್ ಎಂಬ ಬಾಲಕ ಮೇಲೆ ಗೇಟ್‌ ಮುರಿದುಬಿದ್ದು ಸಾವನ್ನಪ್ಪಿದ್ದಾನೆ. ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮದ ಮಲ್ಲಿಕಾರ್ಜುನ್ ಅವರ ಪುತ್ರ ಗೌತಮ್ ಎಂದು ಗುರುತಿಸಲಾಗಿದೆ.

BSNL ಕಚೇರಿ ಆವರಣದಲ್ಲೇ ಇರುವ ಆಧಾರ್ ತಿದ್ದುಪಡಿ ಕೇಂದ್ರ ಆವರಣದಲ್ಲಿ ನಿಂತಿದ್ದಾಗ ಗೇಟ್‌ ಮುರಿದು ಗೌತಮ್‌ ಮೇಲೆ ಬಿದ್ದಿದೆ, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ.

ಇದನ್ನು ಓದಿ:  ಡ್ರಗ್ಸ್​​ ಸೇವಿಸುತ್ತಿದ್ದ ಮಗನನ್ನು ಕತ್ತರಿಸಿ, ಪ್ಲಾಸ್ಟಿಕ್ ಬ್ಯಾಗ್​ನಲ್ಲಿ ತುಂಬಿ ಬಿಸಾಡಿದ ಅಪ್ಪ!

ಗೌತಮ್ ಆಧಾರ ತಿದ್ದು ಪಡಿಗೆ ಬಂದಿದ್ದ. BSNL ಕಚೇರಿ ಆವರಣದಲ್ಲಿಯೇ ಇರುವ ಆಧಾರ ತಿದ್ದು ಪಡಿ ಕೇಂದ್ರದಲ್ಲಿ ನಿಂತ ಬಾಲಕನ ಮೇಲೆ ಗೇಟ್ ಮುರಿದು ಬಿದ್ದಿದೆ. ಬಾಲಕ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭಿರ ಗಾಯವಾಗಿರುವ ಕಾರಣ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada