Plastic Rice? ಅಕ್ಷರ ದಾಸೋಹ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಿಶ್ರಿತ ಅಕ್ಕಿ ಪತ್ತೆ! ಆತಂಕಗೊಂಡ ಶಾಲಾ ಮಕ್ಕಳು, ಪೋಷಕರು ಮಾಡಿದ್ದೇನು?
ಪ್ಲಾಸ್ಟಿಕ್ ಮೊಟ್ಟೆ. ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮಾದರಿಯ ಮಿಶ್ರಣ ವಸ್ತುಗಳು... ಇನ್ನೂ ಏನೇನು ಇದಾವೋ!? ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿರುವುದು ಪೋಷಕರನ್ನ ಆತಂಕಕ್ಕೆ ದೂಡಿದೆ. ಆದ್ರೆ ಅಕ್ಕಿಯಲ್ಲಿ ಸಿಕ್ಕಿರೋದು ಪ್ಲಾಸ್ಟಿಕ್ ಅಕ್ಕಿಯೋ.. ಸಾರಜನಕಯುಕ್ತ ಅಕ್ಕಿಯೋ ಅನ್ನೋ ಗೊಂದಲ ಮೂಡಿದೆ.
ಪ್ಲಾಸ್ಟಿಕ್ ಮೊಟ್ಟೆ. ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮಾದರಿಯ ಮಿಶ್ರಣ ವಸ್ತುಗಳು… ಇನ್ನೂ ಏನೇನು ಇದಾವೋ!? ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿರುವುದು ಪೋಷಕರನ್ನ ಆತಂಕಕ್ಕೆ ದೂಡಿದೆ. ಆದ್ರೆ ಅಕ್ಕಿಯಲ್ಲಿ ಸಿಕ್ಕಿರೋದು ಪ್ಲಾಸ್ಟಿಕ್ ಅಕ್ಕಿಯೋ.. ಸಾರಜನಕಯುಕ್ತ ಅಕ್ಕಿಯೋ ಅನ್ನೋದು ಮಾತ್ರ ಗೊಂದಲ ಮೂಡಿಸಿದೆ.
ಪ್ಲಾಸ್ಟಿಕ್ ಅಕ್ಕಿಯೋ.. ಸಾರಜನಕಯುಕ್ತ ಅಕ್ಕಿಯೋ ಅಂತಾ ಆತಂಕ..!
ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಮೂಟೆಯಲ್ಲಿ ಅನುಮಾನಸ್ಪದವಾಗಿ ಕಂಡು ಬಂದ ಅಕ್ಕಿಯನ್ನು… ಪ್ಲಾಸ್ಟಿಕ್ ಅಕ್ಕಿ ಅಂತಾ ಆತಂಕಗೊಂಡ ಪೋಷಕರು ಶಾಲೆಯಲ್ಲಿನ ಅಕ್ಕಿ ಮೂಟೆಯನ್ನ ಪರಿಶೀಲನೆ ಮಾಡಿ ನೋಡಿದಾರೆ.
ಈ ಅಕ್ಕಿ ಸಾಮಾನ್ಯ ಅಕ್ಕಿಯಂತೆ ಇಲ್ಲ. ಬದಲಾಗಿ ಪ್ಲಾಸ್ಟಿಕ್ ಮಾದರಿಯಂತೆ ಇರುವ ಈ ಅಕ್ಕಿಯೇ (Plastic Rice) ಇದೀಗ ಪೋಷಕರ ಆತಂಕ್ಕೆ ಕಾರಣವಾಗಿದೆ. ಬಳ್ಳಾರಿ ತಾಲೂಕಿನ ಕೊಳಗಲ್ ಗ್ರಾಮದ (Kolagal Village, Bellary) ಸರ್ಕಾರಿ ಹಿರಿಯ ಪ್ರೌಢಶಾಲೆಯ ಮಕ್ಕಳಿಗೆ ವಿತರಣೆ ಮಾಡಿರುವ ಆಹಾರ ಧಾನ್ಯದಲ್ಲಿ ಪ್ಲಾಸ್ಟಿಕ್ ಮಾದರಿ ಕಂಡು ಬಂದಿರುವ ಅಕ್ಕಿ ಇದು. ಅನ್ನ ಮಾಡಿದ್ರೆ ಕರಗದೇ ಇರುವ ಅಕ್ಕಿಯಿದು. ನೀರಿನಲ್ಲಿ ತೇಲುವ ಈ ಅಕ್ಕಿ ಪ್ಲಾಸ್ಟಿಕ್ ಅಕ್ಕಿ ಅಂತಾ ಪೋಷಕರು ಆತಂಕಗೊಂಡಿದ್ದಾರೆ.
ಈ ಅಕ್ಕಿಯನ್ನ ಮಕ್ಕಳಿಗೆ ವಿತರಣೆ ಮಾಡಬಾರದು. ಮಕ್ಕಳು ಈ ಅಕ್ಕಿಯಿಂದ ಮಾಡಿದ ಅನ್ನವನ್ನ ಊಟ ಮಾಡಿದ್ರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಪೋಷಕರು ಆತಂಕಗೊಂಡಿದ್ದಾರೆ. ಅಷ್ಟೇ ಅಲ್ಲ ಮಕ್ಕಳಿಗೆ ವಿತರಣೆ ಮಾಡಿದ ಪ್ಲಾಸ್ಟಿಕ್ ಮಾದರಿ ಇರೋ ಅಕ್ಕಿಯನ್ನ ಪೋಷಕರು ಮರಳಿ ಶಾಲೆಗೆ ಮರಳಿಸಿದ್ದು ಪ್ಲಾಸ್ಟಿಕ್ ಮಾದರಿಯ ಅಕ್ಕಿ ವಿತರಣೆ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಗ್ರಾಮ ಪಂಚಾಯತ್ ಸದಸ್ಯರೂ ಆದ ಪೋಷಕ ಗಂಗಾಧರ ಹೇಳಿದ್ದಾರೆ.
ಸದ್ಯು ಕೊಳಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಇಸ್ಕಾನ್ ಬಿಸಿಯೂಟವನ್ನ ಹಂಚಿಕೆ ಮಾಡಲಾಗ್ತಿದೆ. ಆದ್ರೆ ಕೋವಿಡ್ ಕಾಲದಲ್ಲಿ ನೀಡಿದ್ದ ಅಕ್ಕಿಯನ್ನು ಶಿಕ್ಷಕರು ಮಕ್ಕಳಿಗೆ ಈಗ ವಿತರಣೆ ಮಾಡಿದ್ದಾರೆ. ಈ ಆಹಾರ ಧಾನ್ಯದ ಅಕ್ಕಿಯಲ್ಲೆ ಪ್ಲಾಸ್ಟಿಕ್ ಮಾದರಿಯ ಅಕ್ಕಿ ಪತ್ತೆಯಾಗಿರುವುದು! ಆದ್ರೆ ಪ್ಲಾಸ್ಟಿಕ್ ಮಾದರಿಯ ಅಕ್ಕಿ ನಿಜವಾಗಿಯೂ ಪ್ಲಾಸ್ಟಿಕ್ ಅಕ್ಕಿಯಲ್ಲ. ಅದು ಸಾರಜನಕಯುಕ್ತವಾದ ಅಕ್ಕಿಯಾಗಿದೆ.
ಪೋಷಕರು ಅಕ್ಕಿಯನ್ನ ಮರಳಿ ನೀಡಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಕ್ಷರ ದಾಸೋಹದ ಅಧಿಕಾರಿಗಳು ಅಕ್ಕಿ ಪರಿಶೀಲನೆ ಮಾಡಲಿದ್ದಾರೆ. ಪ್ಲಾಸ್ಟಿಕ್ ಮಾದರಿಯ ಅಕ್ಕಿ ಬೇಡ ಅಂದ್ರೆ ಮಕ್ಕಳಿಗೆ ವಿತರಣೆ ಮಾಡಲ್ಲ. ಮಕ್ಕಳ ಆರೋಗ್ಯ ನಮ್ಮಗೆ ಮುಖ್ಯ ಎಂದು ಪ್ರಭಾರಿ ಮುಖ್ಯೋಪಾಧ್ಯಾಯನಿ ವೀಣಾ ಹೇಳಿದ್ದಾರೆ.
ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ವಿತರಣೆ ಮಾಡಿರುವ ಅಕ್ಕಿಯಲ್ಲಿ ಪತ್ತೆಯಾಗಿರುವ ಪ್ಲಾಸ್ಟಿಕ್ ಮಾದರಿಯ ಅಕ್ಕಿ ನಿಜವಾಗಿಯೂ ಪ್ಲಾಸ್ಟಿಕ್ ಅಕ್ಕಿಯೋ.. ಅಥವಾ ಸಾರಜನಕಯುಕ್ತ ಅಕ್ಕಿಯೋ ಅನ್ನೋದನ್ನ ಆಹಾರ ಇಲಾಖೆಯ ಅಧಿಕಾರಿಗಳು ದೃಢಪಡಿಸಬೇಕಾಗಿದೆ. ಇಲ್ಲದಿದ್ದರೇ ಶಾಲಾ ಮಕ್ಕಳು ಪ್ಲಾಸ್ಟಿಕ್ ಅಕ್ಕಿ ಅಂತಾ ಶಿಕ್ಷಕರ ಜೊತೆ ವಾಗ್ದಾದಕ್ಕೆ ಇಳಿಯುವುದ್ರಲ್ಲಿ ಎರಡು ಮಾತಿಲ್ಲ. ಶಿಕ್ಷಣ ಇಲಾಖೆ ಈ ಬಗ್ಗೆ ಎನೂ ಕ್ರಮ ಕೈಗೊಳ್ಳುತ್ತೆ ಅನ್ನೋದನ್ನ ಕಾಯ್ದುನೋಡಬೇಕಿದೆ. (ವರದಿ: ವೀರೇಶ ದಾನಿ, TV 9, ಬಳ್ಳಾರಿ)