ಬಳ್ಳಾರಿ: ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ಸಚಿವ ಶ್ರೀರಾಮುಲು ಪುತ್ರ; ಕುತೂಹಲ ಮೂಡಿಸಿದ ಧನುಷ್ ನಡೆ

ಬಳ್ಳಾರಿಯಲ್ಲಿ ನಡೆದ ಎಸ್​.ಟಿ ಸಮಾವೇಶದಲ್ಲಿ ಮೊದಲ ಬಾರಿಗೆ ತಂದೆಯೊಂದಿಗೆ ವೇದಿಕೆಯ ಮೇಲೆ ಶ್ರೀರಾಮಲು ಪುತ್ರ ಧನುಷ್​ ಕಾಣಿಸಿಕೊಂಡಿದ್ದಾರೆ.

ಬಳ್ಳಾರಿ: ಮೊದಲ ಬಾರಿ ವೇದಿಕೆಯಲ್ಲಿ ಕಾಣಿಸಿಕೊಂಡ ಸಚಿವ ಶ್ರೀರಾಮುಲು ಪುತ್ರ; ಕುತೂಹಲ ಮೂಡಿಸಿದ ಧನುಷ್ ನಡೆ
ಬಳ್ಳಾರಿ
Edited By:

Updated on: Nov 21, 2022 | 1:31 PM

ಬಳ್ಳಾರಿ: ಬಳ್ಳಾರಿಯ ST ಸಮಾವೇಶದಲ್ಲಿ ಮೊದಲ ಬಾರಿಗೆ ಶ್ರೀರಾಮಲು ಮಗ ಧನುಷ್ ಅವರು ಕಾಣಿಸಿಕೊಂಡಿದ್ದಾರೆ. ರಾಜಕೀಯದಿಂದ ದೂರವಿದ್ದ ಧನುಷ್ ಮೊದಲಬಾರಿ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ವೇದಿಕೆಯಲ್ಲಿ ಶ್ರೀರಾಮುಲು ಅವರು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಮಗನನ್ನು ಪರಿಚಯಿಸಿದ್ದಾರೆ. ಇನ್ನು ಶ್ರೀರಾಮಲು ಕಳೆದ ಪಾಲಿಕೆ ಚುನಾವಣೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ‌ಮಗನನ್ನು ಕಣಕ್ಕಿಳಿಸಿ ಮುಖಭಂಗ ಅನುಭವಿಸಿದ್ದರು. ಇದೀಗ ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಮಗನನ್ನು ಕಣಕ್ಕಿಳಿಸಲು ಶ್ರೀರಾಮುಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಪದವಿಧರನಾಗಿರುವ ಪುತ್ರ ಧನುಷ್ ಅವರನ್ನು ರಾಜಕೀಯಕ್ಕೆ ಕರೆತರಲು ಸಚಿವ ಶ್ರೀರಾಮುಲು ಅವರು ತುದಿಗಾಲಿನಲ್ಲಿ ನಿಂತಂತೆ ಕಾಣುತ್ತಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ