AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ-ಕಾಂಗ್ರೆಸ್ ಅಂತಲ್ಲ, ಹುಲಿ ಬೇಟೆಗೆ ನಿಂತರೆ ಬೇಟೆ ಆಡೇ ಆಡುತ್ತೆ: ಬಳ್ಳಾರಿಯಲ್ಲಿ ಗುಡುಗಿದ ಜನಾರ್ದನ ರೆಡ್ಡಿ

ನಾವು ಯಾವತ್ತೂ ಜನರ ಜೇಬಿಗೆ ಕತ್ತರಿ ಹಾಕಿಲ್ಲ. ಯಾರಿಗೂ ನಾವು ಮೋಸ ಮಾಡಿಲ್ಲ. ಅದೃಷ್ಟದಿಂದ ಮೇಲೆ ಬಂದವರು. ಹೆಲಿಕಾಪ್ಟರ್ ತೆಗೆದುಕೊಂಡಿದ್ದಕ್ಕೆ ಕೆಲವರು ಮಾತನಾಡಿದರು. -ಜನಾರ್ದನ ರೆಡ್ಡಿ

ಬಿಜೆಪಿ-ಕಾಂಗ್ರೆಸ್ ಅಂತಲ್ಲ, ಹುಲಿ ಬೇಟೆಗೆ ನಿಂತರೆ ಬೇಟೆ ಆಡೇ ಆಡುತ್ತೆ: ಬಳ್ಳಾರಿಯಲ್ಲಿ ಗುಡುಗಿದ ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ
TV9 Web
| Edited By: |

Updated on:Nov 05, 2022 | 11:24 AM

Share

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಮತ್ತೆ ಗುಡುಗಿದ್ದಾರೆ. ಹುಲಿ ಬೇಟೆಗೆ ನಿಂತರೆ ಬೇಟೆ ಆಡೇ ಆಡುತ್ತೆ. ರಾಜಕೀಯಕ್ಕೆ ಬಿಜೆಪಿ, ಕಾಂಗ್ರೆಸ್ ಯಾವ್ದೋ ಗೊತ್ತಿಲ್ಲ ಎಂದು ಬಳ್ಳಾರಿಯಲ್ಲಿ ನಿನ್ನೆ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಹೇಳಿದರು.

ಬಳ್ಳಾರಿಯಲ್ಲಿ ನವೆಂಬರ್ 4ರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ತಾವು ಯಾವ ಪಕ್ಷದಿಂದಾದರೂ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಲಿ ಭೇಟೆಗೆ ನಿಂತ್ರೆ ಭೇಟೆ ಆಡೇ ಆಡುತ್ತೇ. ರಸ್ತೆಯಲಿ ಓರ್ವ ಹುಡುಗ ಹುಲಿ ಫೋಟೋ ತೋರಿಸಿ ನನ್ನನ್ನು ಹುಲಿ ಅಂತಾ ಕರೆದ. ಹುಲಿಗೆ ಹಸಿವಾದಾಗ ಭೇಟೆಗೆ ಬರುತ್ತೇ. ಭೇಟೆ ಹೊಡೆದೆ ಹೊಡಿಯುತ್ತೇ. ರಕ್ತದಲ್ಲಿ ಇರೋದ್ನ ಯಾರು ತಗೆಯಲಿಕ್ಕೆ ಸಾಧ್ಯ ಇಲ್ಲ ಕೆಲವೊಬ್ಬರು ಮತ್ತೆ ನನ್ನ ಬಳ್ಳಾರಿಯಿಂದ ಹೊರ ಹಾಕುತ್ತಿದ್ದಾರೆ. 2-3 ತಿಂಗಳಿನಲ್ಲಿ ಮತ್ತೆ ನಾನು ಬಳ್ಳಾರಿಗೆ ಬರುತ್ತೇನೆ. ನನ್ನ ತಂದೆ ಪೊಲೀಸ್ ಪೇದೆ ಆಗಿ ಕೆಲಸ ಮಾಡಿರಬಹುದು. ಆದ್ರೆ ನನ್ನ ತಾತಂದಿರು ರಾಜರಂತೆ ಬದುಕಿದರು. ಅವರ ರಕ್ತ ನನ್ನಲಿದೆ ಅದ್ನ ಬದಲಾಯಿಸಲಾಗದು. 12 ವರ್ಷ ನಾನು ಸುಮ್ನೆ ಇದ್ದೀನಿ ಅಂದ್ರೆ ನನ್ನ ಕೈಯಲ್ಲಿ ಏನೂ ಆಗೋದಿಲ್ಲ ಅಂತಾ ಅಲ್ಲ. ಒಂದೂವರೆ ವರ್ಷದಿಂದ ಬಳ್ಳಾರಿ ಮನೆಯಿಂದ ಹೊರ ಬಂದಿಲ್ಲ. ಯಾಕಂದ್ರೆ ಆಗುವ ಕೆಲಸ ಆಗುವುದಿಲ್ಲ ಎಂದು ಸುಮ್ಮನಿದ್ದೆ. ನಮ್ಮ ಕುಟುಂಬ ಬಳ್ಳಾರಿ ಅಭಿವೃದ್ಧಿಗೆ ಬದ್ದವಾಗಿದೆ. ಕಾಂಗ್ರೆಸ್ ಬಿಜೆಪಿ ಅಂತಾ ನಾನು ಹೇಳೋದಿಲ್ಲ. ನಮ್ಮ ಕುಟುಂಬದ ಮೇಲೆ ಬಳ್ಳಾರಿ ಜನರ ಆಶೀರ್ವಾದ ಇರಲಿ ಎಂದರು.

ಇದನ್ನೂ ಓದಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮುಜುಗರ ತರುವ ಕೆಲಸ ಯಾರು ಮಾಡಲ್ಲ: ಶ್ರೀರಾಮುಲು

ನಾವು ಯಾವತ್ತೂ ಜನರ ಜೇಬಿಗೆ ಕತ್ತರಿ ಹಾಕಿಲ್ಲ. ಯಾರಿಗೂ ನಾವು ಮೋಸ ಮಾಡಿಲ್ಲ. ಅದೃಷ್ಟದಿಂದ ಮೇಲೆ ಬಂದವರು. ಹೆಲಿಕಾಪ್ಟರ್ ತೆಗೆದುಕೊಂಡಿದ್ದಕ್ಕೆ ಕೆಲವರು ಮಾತನಾಡಿದರು. ಆದ್ರೇ ನಾನು ಸಚಿವನಾಗಿದ್ದಾಗ ರಸ್ತೆ ಮೂಲಕ ಬೆಂಗಳೂರಿಗೆ ಹೋದ್ರೆ ಏಳೆಂಟು ಗಂಟೆಯಾಗುತ್ತಿತ್ತು. ನನಗೆ ಬಳ್ಳಾರಿಯ ಜನರಿಗೆ ಸಮಯ ಕೊಡೋಕೆ ಆಗ್ತಾ ಇರಲಿಲ್ಲ. ಹೀಗಾಗಿ ಹೆಲಿಕಾಪ್ಟರ್ ತೆಗೆದುಕೊಂಡಿದ್ದೆ, ಎರಡು ಗಂಟೆಯಲ್ಲಿ ಬೆಂಗಳೂರಿಗೆ ಹೋಗಿ ಬಂದು ಬಳ್ಳಾರಿ ಜನರ ಜೊತೆ ಸಮಯ ಕಳೆಯುತ್ತಿದ್ದೆ ಎಂದು ಜನಾರ್ದನ‌ ರೆಡ್ಡಿ ಹೇಳಿದರು.

Published On - 11:22 am, Sat, 5 November 22

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್