ಬಳ್ಳಾರಿ ಬೆಳೆ ನಾಶ: ರೈತರ ವಿರುದ್ಧ ಅಟ್ರಾಸಿಟಿ ಕೇಸ್​ ದಾಖಲಿಸಿದ ಖಾಸಗಿ ಕಂಪನಿ

ಸಂಡೂರು ತಾಲೂಕಿನ ರಣಜಿತ್‌ಪುರ‌ ಗ್ರಾಮದ ರೈತರ ಬೆಳೆ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿ 14 ಜನ ರೈತರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ 14 ಜನ ರೈತರು ಗ್ರಾಮವನ್ನು ತೊರೆದಿದ್ದಾರೆ.

ಬಳ್ಳಾರಿ ಬೆಳೆ ನಾಶ: ರೈತರ ವಿರುದ್ಧ ಅಟ್ರಾಸಿಟಿ ಕೇಸ್​ ದಾಖಲಿಸಿದ ಖಾಸಗಿ ಕಂಪನಿ
ಬೆಳೆ ನಾಶ
Follow us
| Updated By: ವಿವೇಕ ಬಿರಾದಾರ

Updated on:Dec 10, 2023 | 10:23 AM

ಬಳ್ಳಾರಿ, ಡಿಸೆಂಬರ್​ 10: ಸಂಡೂರು (Sandur) ತಾಲೂಕಿನ ರಣಜಿತ್‌ಪುರ‌ ಗ್ರಾಮದ ರೈತರ (Farmers) ಬೆಳೆ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿ 14 ಜನ ರೈತರ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಿದೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ 14 ಜನ ರೈತರು ಗ್ರಾಮವನ್ನು ತೊರೆದಿದ್ದಾರೆ. ನಮ್ಮವರಿಗೆ ಜೀವ ಬೆದರಿಕೆ ಇದೆ. ನಮಗೆ ನ್ಯಾಯಬೇಕು, ನಮ್ಮ ಮನೆಯವರು ವಾಪಾಸ್ ಮನೆಗೆ ಬರಬೇಕು ಎಂದು ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ.

ಪ್ರಕರಣ ದಾಖಲಾದ ದಿನದಿಂದ ರೈತರ ಮೇಲೆ ಕಂಪನಿ ದಬ್ಬಾಳಿಕೆ ಮಾಡುತ್ತಿದೆ. ಕಳೆದ ವಾರ ಬೆಳೆ ನಾಶ ಮಾಡಿದರು. ಈಗ ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ 14 ಜನ ರೈತರು ಜೀವ ಭಯದಿಂದ ಗ್ರಾಮವನ್ನು ತೊರೆದಿದ್ದಾರೆ. ಅವರು ಎಲ್ಲಿಗೆ ಹೋಗಿದ್ದಾರೆ ಗೊತ್ತಿಲ್ಲ ಅಂತ ಗ್ರಾಮಸ್ಥರು ಹೇಳಿದರು. ಇನ್ನು ಭೂಮಿ ಕಳೆದುಕೊಂಡ ಕುಟುಂಬಸ್ಥರ ನೆರವಿಗೆ ಹಲವು ರೈತ ಪರ ಸಂಘಟನೆಗಳು ನಿಂತಿವೆ.

ಏನಿದು ಘಟನೆ

ಮೈನಿಂಗ್ ಕಂಪನಿ ಅಭಿವೃದ್ಧಿಗಾಗಿ ಜಮೀನು ನೀಡಲಿಲ್ಲವೆಂದು ಕಳೆದ ಎರಡು ದಿನಗಳ ಹಿಂದೆ ಖಾಸಗಿ ಕಂಪನಿಯ ಸಿಬ್ಬಂದಿಗಳು ಜೆಸಿಬಿ ತಂದು ಬೆಳೆ ನಾಶಮಾಡಿ ಅಟ್ಟಹಾಸ ಮೇರೆದಿದ್ದರು. ಗ್ರಾಮದ ಕಾಡಪ್ಪ ಮತ್ತು ಪರಮೇಶ್ವರಪ್ಪ ಸೇರಿದಂತೆ ಇತರ ರೈತರ ಬೆಳೆನಾಶ ಮಾಡಲಾಗಿತ್ತು. ಕಷ್ಟಪಟ್ಟು ಬಿತ್ತಿದ ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ಕೃಷಿ ಪರಿಕಗಳನ್ನು ನಾಶ ಮಾಡಿದ್ದಾರೆಂದು ಆರೋಪ ಮಾಡಲಾಗಿತ್ತು.

ಇದನ್ನೂ ಓದಿ: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಸ್ವಚ್ಚ : ಚಾಮರಾಜನಗರ ಗ್ರಾಮಾಂತರ ​ಠಾಣೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲು

ಸಂಡೂರಿನ ಖಾಸಗಿ ಕಂಪನಿಯವರು (ಆರ್‌ಐಪಿಎಲ್) ತಮ್ಮ ಮೈನಿಂಗ್ ಕಂಪನಿ ಅಭಿವೃದ್ಧಿಗಾಗಿ ಜಮೀನು ತೆಗೆದುಕೊಳ್ಳಲು ಪಯತ್ನ ನಡೆಸಿದ್ದಾರೆ. ಭೂಮಿ ನೀಡುವುದಿಲ್ಲ ಎಂದು ಹೇಳಿದರೂ ಕೆಐಡಿಬಿ ಮೂಲಕ ಖಾಸಗಿ ಕಂಪನಿ ಒತ್ತಡ ಹಾಕುತ್ತಿದೆ. ಆದರೆ ರೈತರು ಮಾತ್ರ ಭೂಮಿ ನೀಡುತ್ತಿಲ್ಲ. ಈ ಬಗ್ಗೆ ಧಾರವಾಡ ಹೈಕೋರ್ಟ್​ನಲ್ಲಿ ವ್ಯಾಜ್ಯ ನಡೆಯುತ್ತಿದೆ.

ಈ ಮಧ್ಯೆ ರಾತ್ರೋರಾತ್ರಿ ಕಂಪನಿಯವರು ಜಮೀನಿನಲ್ಲಿ ಬೆಳೆದ ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ನಾಶ ಮಾಡಿದ್ದರು. ಇದೀಗ ಖಾಸಗಿ ಕಂಪನಿ ವಿರುದ್ಧ ರೈತರು ಪೊಲೀಸ್ ಠಾಣೆ ಮೆಟ್ಡಿಲೇರಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದರು. ಆದರೆ ಇದೀಗ ಖಾಸಗಿ ಕಂಪನಿ ಅಟ್ರಾಸಿಟಿ ಕೇಸ್​ ಹಾಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:18 am, Sun, 10 December 23

Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!