ಬಳ್ಳಾರಿ: ಶ್ರೀಗಂಧದ ತುಂಡುಗಳನ್ನ ಸಾಗಿಸ್ತಿದ್ದ ಖದೀಮರು ಅಂದರ್; ಸೀನಿಮಿಯ ರೀತಿ ಚೇಸ್​ ಮಾಡಿ ಅರೆಸ್ಟ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 27, 2024 | 6:32 PM

ಅವರು ಪುಷ್ಪ ಸಿನಿಮಾ ಸ್ಟೈಲಿನಲ್ಲಿ ಶ್ರೀಗಂಧದ ಮರದ ತುಂಡುಗಳನ್ನ ಕತ್ತರಿಸಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ರು, ಈ ವಿಷಯ ಪೋಲಿಸರಿಗೆ ಗೊತ್ತಾಗಿದ್ದು, ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ಪೋಲಿಸರು ದಾಳಿ ಮಾಡಿ, ಶ್ರೀಗಂಧದ ಸಮೇತ ಖದೀಮರನ್ನ ಅರೆಸ್ಟ್ ಮಾಡಿದ್ದಾರೆ.

ಬಳ್ಳಾರಿ: ಶ್ರೀಗಂಧದ ತುಂಡುಗಳನ್ನ ಸಾಗಿಸ್ತಿದ್ದ ಖದೀಮರು ಅಂದರ್; ಸೀನಿಮಿಯ ರೀತಿ ಚೇಸ್​ ಮಾಡಿ ಅರೆಸ್ಟ್​
ಶ್ರೀಗಂಧದ ತುಂಡುಗಳನ್ನ ಸಾಗಿಸ್ತಿದ್ದ ಖದೀಮರು ಅಂದರ್
Follow us on

ಬಳ್ಳಾರಿ, ಮಾ.27: ದೇಶದಾದ್ಯಂತ ಗಮನ ಸೆಳೆದಿದ್ದ ಪುಷ್ಪ ಸಿನಿಮಾ ಎಲ್ಲರಿಗೂ ಗೊತ್ತಿರುವ ವಿಚಾರ, ಅದೇ ಸಿನಿಮಾ ಸ್ಟೈಲ್‌ನಲ್ಲಿ ಇಲ್ಲೊಂದು ಕಡೆ ಖದೀಮರು ಶ್ರೀಗಂಧದ ಮರಕ್ಕೆ(Sandalwood) ಕನ್ನ ಹಾಕಿ, ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದಾರೆ. ಆದರೆ, ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಖದೀಮರ ಪ್ಲಾನ್ ತೆಲೆಕೆಳಗಾಗುವಂತೆ ಮಾಡಿ, ಮಾಲ್ ಸಮೇತ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಚ್‌ಎಲ್‌ಸಿ ಕ್ಯಾನಲ್ ಬಳಿ. ಇದೇ ಮಾರ್ಚ್​ 22 ನೇ ತಾರೀಖು ರಾತ್ರಿ‌ 12:30 ರ‌ ಸುಮಾರಿಗೆ ಗೂಡ್ಸ್‌ವಾಹನ ಮತ್ತು ಫಿಕಪ್ ವಾಹನದಲ್ಲಿ ಸುಮಾರು 203 ಕೆಜಿ ತೂಕದ ಶ್ರೀಗಂಧದ ಮರದ ತುಂಡುಗಳನ್ನ ಯಾವುದೇ ಪರವಾನಿಗೆ ಇಲ್ಲದೆ ಖದೀಮರು ಸಾಗಾಟ ಮಾಡುತ್ತಿದ್ದರು. ವಿಷಯ ತಿಳಿದು ಪೊಲೀಸರು ದಾಳಿ ಮಾಡಿ ಮಾಲ್‌ ಸಮೇತ ಖದೀಮರನ್ನ ಬಂದಿಸಿದ್ದಾರೆ‌‌.

ಪುಷ್ಪ ಸಿನಿಮಾ ರೀತಿಯಲ್ಲಿ ಪ್ಲಾನ್​

ಇನ್ನು ಖದೀಮರು ಅಕ್ರಮವಾಗಿ ತುಂಬಿದ ಶ್ರೀಗಂಧದ ಮರದ ತುಂಡುಗಳು ಯಾರಿಗೂ ಕಾಣಬಾರದು ಎಂದು ವಾಹನ ಹಿಂಬದಿಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿ, ಸುಮಾರು 11 ಪ್ಲಾಸ್ಟಿಕ್ ಚೀಲದಲ್ಲಿ ಮರದ ತುಂಡುಗಳನ್ನ ತುಂಬಿದ್ದರು. ಜೊತೆಗೆ ರಾತ್ರಿ ವೇಳೆ ಹೊಸಪೇಟೆಯಿಂದ ಸಂಡೂರು ಎಚ್‌ಎಲ್‌ಸಿ ಕ್ಯಾನಲ್ ಮಾರ್ಗವಾಗಿ ಬಳ್ಳಾರಿಗೆ ಸಾಗಾಟ ಮಾಡುತ್ತಿದ್ದರು. ಆದರೆ, ಹೊಸಪೇಟೆ ಪಟ್ಟಣ ಠಾಣೆ ಪೋಲಿಸರು ಖಚಿತ ಮಾಹಿತಿ ಮೇರೆಗೆ ಎಸ್ಪಿ ಶ್ರೀಹರಿಬಾಬು ಮಾರ್ಗದರ್ಶನದಲ್ಲಿ ಪಿಐ ಮತ್ತು ಪಿಎಸ್‌ಐ ನೇತೃತ್ವದಲ್ಲಿ ದಾಳಿ ಮಾಡಿ ಅಂದಾಜು 203 ಕೆಜಿ ತೂಕದ 30 ಲಕ್ಷ 45 ಸಾವಿರ ರೂ ಬೆಲೆ ಬಾಳು ಶ್ರೀಗಂಧದ ಮರದ ತುಂಡುಗಳು ಹಾಗೂ ಎರಡು ವಾಹನಗಳನ್ನ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ:ಗಂಧದ ತುಂಡುಗಳನ್ನ ಕದ್ದ ಖತರ್ನಾಕ್ ಕಳ್ಳರನ್ನ ಯಾದಗಿರಿ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿದರು, ಆದರೆ ಕಳ್ಳರ ಕಹಾನಿ ಕೇಳಿ ಶಾಕ್ ಆಗಿದ್ದಾರೆ!

ಶ್ರೀಗಂಧದ ಮರ ಸೇರಿದಂತೆ ಎರಡು ವಾಹನಗಳ ಒಟ್ಟು ಮೌಲ್ಯ 37 ಲಕ್ಷ 45 ಸಾವಿರ ವಸ್ತುಗಳನ್ನ ಜಪ್ತಿ ಮಾಡಿ, ಕರ್ನಾಟಕ ಅರಣ್ಯ ಕಾಯ್ದೆ 1963 ಕಲಂ 84,85,86, 71(A) ಕೆಪಿ ಆಕ್ಟ್ 1963 ಕಲಂ 98 ಅಡಿ ಪ್ರಕರಣ ದಾಖಲು ಮಾಡಿ ನಾಲ್ವರು ಖದೀಮರನ್ನ ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ. ಆರೋಪಿ ಒನ್ ಗಂಗಾನಾಯ್ಕ (ಸಂಡೂರ), ಮಾಂತೇಶ (ಕೊಟ್ಟೂರು), ಚೆನ್ನಪ್ಪ (ಬಾಗಲಕೋಟಿ), ರಾಮಣ್ಣ (ಬಾಗಲಕೋಟಿ) ಈ ನಾಲ್ವರು ಖದೀಮರನ್ನ ಬಂಧಿಸುವಲ್ಲಿ ಹೊಸಪೇಟೆ ಶಹರ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ. ಇನ್ನಿಬ್ಬರು ಅಂತರರಾಜ್ಯ ಕಳ್ಳರ ಬಂಧನಕ್ಕೆ ತಲಾಷ್ ನಡೆಸಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡಿ ಅಕ್ರಮವಾಗಿ ಸಾಗಿಸುವ ವೇಳೆ ಹೊಸಪೇಟೆ ಪೋಲಿಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ನಾಲ್ವರು ಖದೀಮರನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ