ಬಳ್ಳಾರಿ ವಿಮ್ಸ್​ ಪ್ರಕರಣ: ಸಾವಾಗಿರುವುದು ಇಬ್ಬರು, ಮತ್ತೊಬ್ಬರು ವೆಂಟಿಲೇಟರ್​ನಲ್ಲಿ ಇರಲಿಲ್ಲ: ಸಚಿವ ಸುಧಾಕರ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 18, 2022 | 4:53 PM

ವಿಮ್ಸ್ ನಿರ್ದೇಶಕರನ್ನು ನಾನು ನೇಮಿಸಿಲ್ಲ, ಅದಕ್ಕಾಗಿ ಸಮಿತಿಯಿದೆ. ಆ ಸಮಿತಿಯೇ ವಿಮ್ಸ್ ಆಸ್ಪತ್ರೆಗೆ ನಿರ್ದೇಶಕರನ್ನು ಆಯ್ಕೆ ಮಾಡಿದೆ. ರೋಗಿಗಳ ಸಾವಿನ ಹಿಂದೆ ಷಡ್ಯಂತ್ರವಿದೆ ಎಂದು ಹೇಳಿರುವುದು ತಪ್ಪು.

ಬಳ್ಳಾರಿ ವಿಮ್ಸ್​ ಪ್ರಕರಣ: ಸಾವಾಗಿರುವುದು ಇಬ್ಬರು, ಮತ್ತೊಬ್ಬರು ವೆಂಟಿಲೇಟರ್​ನಲ್ಲಿ ಇರಲಿಲ್ಲ: ಸಚಿವ ಸುಧಾಕರ್
ಆರೋಗ್ಯ ಸಚಿವ ಸುಧಾಕರ್​
Follow us on

ಬಳ್ಳಾರಿ: ಸಾವಾಗಿರುವುದು ಇಬ್ಬರು, ಮತ್ತೊಬ್ಬರು ವೆಂಟಿಲೇಟರ್​ನಲ್ಲಿ ಇರಲಿಲ್ಲ. ಪ್ರಕರಣದ ತನಿಖಾ ವರದಿಯಲ್ಲಿ ಎಲ್ಲದಕ್ಕೂ ಉತ್ತರ ದೊರೆಯಲಿದೆ ಎಂದು ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಸುಧಾಕರ್​ ಹೇಳಿಕೆ ನೀಡಿದರು. ವಿದ್ಯುತ್ ಸಮಸ್ಯೆಯಿಂದ ಘಟನೆ ಆಗಿದ್ದರೆ ಉಳಿದವರಿಗೂ ಸಮಸ್ಯೆಯಾಗಬೇಕಿತ್ತು. ವೆಂಟಿಲೇಟರ್​ನಲ್ಲಿದ್ದ ಉಳಿದ ರೋಗಿಗಳಿಗೂ ಸಮಸ್ಯೆಯಾಗುತ್ತಿತ್ತು. ಅಂದು ಬೆಳಗ್ಗೆ 8.30ಕ್ಕೆ ಪವರ್ ಹೋಗಿ ಬೆಳಗ್ಗೆ 9.30ಕ್ಕೆ ಬಂದಿದೆ. ನಿರ್ದೇಶಕರು ಹೇಳಿದ ಷಡ್ಯಂತ್ರದ ಬಗ್ಗೆಯೂ ತನಿಖೆ ನಡೆಯಲಿದೆ. ದುರಂತದ ಬಗ್ಗೆ ಸರ್ಕಾರ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ತನಿಖಾ ಸಮಿತಿ ನೀಡುವ ವರದಿ ನಂತರ ಕ್ರಮಕೈಗೊಳ್ಳಲಾಗುವುದು. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮಕೈಗೊಳ್ಳಲಾಗುವುದು.  ಎಂದು ಆರೋಗ್ಯ ಸಚಿವ ಸುಧಾಕರ್​ ಹೇಳಿದರು.

ವಿಮ್ಸ್ ನಿರ್ದೇಶಕರನ್ನು ನಾನು ನೇಮಿಸಿಲ್ಲ, ಅದಕ್ಕಾಗಿ ಸಮಿತಿಯಿದೆ. ಆ ಸಮಿತಿಯೇ ವಿಮ್ಸ್ ಆಸ್ಪತ್ರೆಗೆ ನಿರ್ದೇಶಕರನ್ನು ಆಯ್ಕೆ ಮಾಡಿದೆ. ರೋಗಿಗಳ ಸಾವಿನ ಹಿಂದೆ ಷಡ್ಯಂತ್ರವಿದೆ ಎಂದು ಹೇಳಿರುವುದು ತಪ್ಪು. ಜಿಲ್ಲಾಡಳಿತ, ಸಚಿವರು, ತನಿಖಾ ಸಂಸ್ಥೆ ಮುಂದೆ ಅವರು ಹೇಳಬೇಕಿತ್ತು. ವಿಮ್ಸ್ ದುರಂತದ ಬಗ್ಗೆ ತನಿಖಾ ಸಂಸ್ಥೆಯಿಂದ ವರದಿ ಬರಬೇಕಾಗಿದೆ. ತನಿಖಾ ಸಂಸ್ಥೆಯವರು ಜೆಸ್ಕಾಂ ಸಹಾಯ ಕೇಳಿದ್ದಾರೆ. ಅವರಿಗೆ ಜೆಸ್ಕಾಂ ಇಂಜಿನಿಯರ್​ ಒಬ್ಬರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ತಿಳಿಸಿರುವೆ: ಸಚಿವ ಶ್ರೀರಾಮುಲು

ಇನ್ನೂ ಪ್ರಕರಣದ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಕಂಡುಬಂದರೆ ಕ್ರಮಕೈಗೊಳ್ಳಬೇಕು. ವಿಮ್ಸ್ ಆವರಣದಲ್ಲಿ ಏನಾದ್ರೂ ಕೃತ್ಯವೆಸಗಲು ಮುಂದಾದರೆ ಕ್ರಮ. ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ತಿಳಿಸಿರುವೆ. ವಿಮ್ಸ್​ ಆಡಳಿತ ಮಂಡಳಿಯಲ್ಲಿ ಯಾರದ್ದು ಹಸ್ತಕ್ಷೇಪ ಇರುವುದಿಲ್ಲ ಎಂದು ಬಳ್ಳಾರಿ ವಿಮ್ಸ್​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು​ ಹೇಳಿಕೆ ನೀಡಿದರು.

ಆಮ್​​ ಆದ್ಮಿ ಪಕ್ಷದ ಮುಖಂಡರಿಂದ ಸಚಿವ ಸುಧಾಕರ್​ಗೆ ದೂರು

ಪ್ರಕರಣ ಸಂಬಂಧ ಬಳ್ಳಾರಿ ವಿಮ್ಸ್​ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಮ್​​ ಆದ್ಮಿ ಪಕ್ಷದ ಮುಖಂಡರಿಂದ ಸಚಿವ ಸುಧಾಕರ್​ಗೆ ದೂರು ನೀಡಲಾಗಿದೆ. ವಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಸರಿ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.