ಬಳ್ಳಾರಿ: ಕೆಲಸ ಮಾಡಲು ಬಿಡದೆ ಜಾತಿನಿಂದನೆ ಮಾಡುತ್ತಿದ್ದಾರೆ ಎಂದು ವಿಷ ಸೇವಿಸುವ ವಿಡಿಯೋ ಮಾಡಿ ಬಿಲ್ ಕಲೆಕ್ಟರ್ ಕಣ್ಣೀರು ಹಾಕಿದ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ನಡೆದಿದೆ. ಮೆಟ್ರಿ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಶಿವಪ್ಪ ವಿಷ ಸೇವಿಸುವ ವಿಡಿಯೋ ಮಾಡಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ನನಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿ ಬಿಟ್ಟು ವಿಷ ಸೇವಿಸಿದ ಬಿಲ್ ಕಲೆಕ್ಟರ್ ಶಿವಪ್ಪ, ನಾನು ಸತ್ತರೆ ಇವರೇ ಕಾರಣ ಎಂದು ಹೇಳಿದ್ದಾರೆ. ವಿಷ ಕುಡಿದ ಬಿಲ್ ಕಲೆಕ್ಟರ್ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಚಿಕಿತ್ಸೆ ಪಡೆದಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಶಿವಪ್ಪಗೆ ನ್ಯಾಯ ಕೊಡಿಸುವಂತೆ, ಗ್ರಾಮ ಪಂಚಾಯತಿ ನೌಕರರ ಸಂಘದ ಸದಸ್ಯರು ಒತ್ತಾಯಿಸಿದ್ದಾರೆ.
ಚಾಮರಾಜನಗರ ವರದಿ: ಪ್ರೇಮಿಗಳು ಕಾರಿನಲ್ಲಿಯೇ ಆತ್ಮಹತ್ಯೆ
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕಿನಕನಹಳ್ಳಿ ಗ್ರಾಮದ ಬಳಿ ಪ್ರೇಮಿಗಳು ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಂಬಳ್ಳಿ ಗ್ರಾಮದ ಕಾಂಚನ (20) ಮತ್ತು ಶ್ರೀನಿವಾಸ್ (24) ಸಜೀವವಾಗಿ ಭಸ್ಮಗೊಂಡ ಯುವ ಪ್ರೇಮಿಗಳು. ಯುವತಿ ಮನೆಯವರು ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಾಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಳಂದೂರು ತಾಲೂಕಿನ ಕಿನಕನಹಳ್ಳಿ ಸಮೀಪದ ಜಮೀನಿನ ಬಳಿ ಘಟನೆ ನಡೆದಿದೆ.
ಯುವಕನ ಮನೆಯವರು ಎರಡು ಬಾರಿ ಯುವತಿಯ ಮನೆಗೆ ಹೋಗಿ ಮದುವೆ ಮಾಡಿ ಕೊಡುವಂತೆ ಕೇಳಿದ್ದರು. ಆದರೆ ಯುವತಿ ಮನೆಯವರು ಮದುವೆಗೆ ನಿರಾಕರಣೆ ಮಾಡಿದ್ದರು. ಮದುವೆಗೆ ನಿರಾಕರಣೆ ಮಾಡಿದ್ದರಿಂದ ಮೂರು ತಿಂಗಳ ಹಿಂದೆ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ಮನೆಯವರು ಆತ್ಮಹತ್ಯೆ ಯತ್ನವನ್ನು ವಿಫಲಗೊಳಿಸಿದ್ದರು. ಒಂದು ವಾರಗಳ ಕಾಲ ಆಸ್ಪತ್ರೆಯಲ್ಲಿ ಇದ್ದು ಚಿಕಿತ್ಸೆಗಾಗಿ ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ್ದರು.
ಯುವಕ ಚೇತರಿಸಿಕೊಂಡ ಬಳಿಕ ಎರಡನೇ ಬಾರಿಗೆ ಮದುವೆ ಮಾಡಿ ಕೊಡುವಂತೆ ಕೇಳಿದ್ದರು. ಯುವತಿ ಮನೆಯಲ್ಲಿ ಮದುವೆ ನಿರಾಕರಣೆ ಮಾಡಿದ್ದರಿಂದ ಇಬ್ಬರ ಲವ್ ಬ್ರೇಕ್ ಅಪ್ ಆಗಿತ್ತು. ಇದಾದ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಗುರುವಾರ ಆಸ್ಪತ್ರೆಯಲ್ಲಿ ರಾತ್ರಿ ಪಾಳಿ ಕೆಲಸ ಮುಗಿಸಿದ್ದಳು. ಯುವಕ ವ್ಯವಸಾಯದ ಜೊತೆಗೆ ಕ್ಯಾಬ್ ಒಡಿಸುತ್ತಿದ್ದ ಎಂದು ತಿಳಿದುಬಂದಿದೆ.
ಯುವತಿ ಶುಕ್ರವಾರ ಬೆಳಗ್ಗೆ ಯುವಕನ ಜೊತೆ ಹೊರಗಡೆ ಹೋಗಿದ್ದರು. ಇಡೀ ದಿನ ಯುವಕನ ಕಾರಿನಲ್ಲಿಯೇ ಸುತ್ತಾಟ ನಡೆಸಿದ್ದರು. ಶುಕ್ರವಾರ ಸಂಜೆ ಆಗುತ್ತಿದ್ದಂತೆ ಕಾರಿಗೆ ಪೆಟ್ರೋಲ್ ಸುರಿದು ತಾವುಗಳು ಕಾರಿನಲ್ಲಿಯೇ ಇದ್ದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸೋದರಿಯ ಕೊಲೆ ಮಾಡಲಾಗಿದೆ ಎಂದು ಯುವತಿಯ ಸಹೋದರ ಅಗರ ಮಾಂಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ; ಸೇಡಂ ಠಾಣೆ ಪಿಎಸ್‌ಐ ನಾನಾಗೌಡ ಪಾಟೀಲ್ ವಿರುದ್ಧ ಎಫ್ಐಆರ್