ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಕರ್ನಾಟಕದ ಹಂಪಿ (Hampi) ಬಗ್ಗೆ ಫೋಟೊ ಪ್ರದರ್ಶನ ಆಯೋಜಿಸುವ ಮೂಲಕ ಲಂಡನ್ನಲ್ಲಿರುವ ಬ್ರಿಟಿಷ್ ಲೈಬ್ರರಿ (British Library) ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆ. 1857ರಿಂದ 1970ರ ನಡುವಿನ ಅವಧಿಯಲ್ಲಿ ಹಂಪಿಯಲ್ಲಿ ತೆಗೆದ ಫೋಟೊಗಳನ್ನು Hampi: Photography and Archaeology in southern India’ ಎಂಬ ಚಿತ್ರ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿದೆ. 14ನೇ ಶತಮಾನದಲ್ಲಿ ಹಂಪಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಖ್ಯಾತ ಛಾಯಾಗ್ರಾಹಕ ರಘು ರೈ ಅವರ ಮೂರು ಕೃತಿಗಳ ಪ್ರದರ್ಶನವನ್ನು ಬ್ರಿಟಿಷ್ ಗ್ರಂಥಾಲಯದ ಆರ್ಕೈವ್ಸ್ ಮತ್ತು ನಗರದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪಾತ್ರವಹಿಸಿದ ಸಂಶೋಧನಾ ಚಟುವಟಿಕೆಗಳ ಮೂಲಕ ಹಂಪಿಯ ಪುರಾತತ್ವ ಪರಂಪರೆಯನ್ನು ತೋರಿಸಲಾಗಿದೆ. ಲಂಡನ್‌ನಲ್ಲಿ ಸೋಮವಾರ ನಡೆದ ವಸ್ತುಪ್ರದರ್ಶನದ ಸಂಭ್ರಮಾಚರಣೆ ಸಮಾರಂಭದಲ್ಲಿ ಯುಕೆಯಲ್ಲಿನ ಭಾರತೀಯ ಹೈ ಕಮಿಷನರ್ ವಿಕ್ರಮ್ ದೊರೈಸ್ವಾಮಿ, ಆ ಸಮಯದಲ್ಲಿ ಇದು ವಿಶ್ವದ ಅತ್ಯಂತ ಅಸಾಮಾನ್ಯ ನಗರ ಎಂದು ಇಟಾಲಿಯನ್ ಪ್ರಯಾಣಿಕರೊಬ್ಬರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಇದು ಅತ್ಯದ್ಭುತವಾದ ನಗರ ವಾಸ್ತುಶಿಲ್ಪವನ್ನು ಹೊಂದಿದ್ದು, ಅದು ಅಭಿವೃದ್ಧಿ ಹೊಂದಿದ, ಸಮೃದ್ಧವಾದ ನಗರವಾಗಿದೆ. ನೀವು ಈಗಲೂ ಹಂಪಿಗೆ ಭೇಟಿ ನೀಡಿದರೆ ಇಡೀ ಹಂಪಿ ಸುತ್ತುವುದಕ್ಕೆ ಹಲವು ದಿನಗಳೇ ಬೇಕಾಗುತ್ತದೆ. ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬ್ರಿಟಿಷ್ ಲೈಬ್ರರಿ ಜತೆ ಕೆಲಸ ಮಾಡಲು ಹೈಕಮಿಷನ್ ಗೆ ಸಂತೋಷವಾಗುತ್ತದೆ. ಇದು ತುಂಬಾ ಅದ್ಭುತವಾಗಿದೆ. ನಮಗೆಲ್ಲರಿಗೂ ಇತಿಹಾಸದ ಭಾಗವಾಗಲು ಅವಕಾಶವನ್ನು ನೀಡುತ್ತದೆ. ಸ್ವಾತಂತ್ರ್ಯದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಇದು ಸಾಧ್ಯವಾಗಿಸಿದೆ ಎಂದು ಅವರು ಹೇಳಿದ್ದಾರೆ.
ಪ್ರಾಚೀನ ನಗರವಾದ ಹಂಪಿ ತುಂಗಭದ್ರಾ ನದಿಯ ದಡದಲ್ಲಿ ನೆಲೆಗೊಂಡಿದೆ. ಇದು ದೇವಾಲಯ ಸಂಕೀರ್ಣಗಳು, ಅರಮನೆಗಳು ಮತ್ತು ಆಡಳಿತಾತ್ಮಕ ಕಟ್ಟಡಗಳನ್ನು ಗ್ರಾನೈಟ್ ಬಂಡೆಗಳ ಒರಟಾದ ಭೂದೃಶ್ಯದ ನಡುವೆ ನಿರ್ಮಿಸಲಾಗಿದೆ. 200 ವರ್ಷಗಳ ಕಾಲ ಪ್ರವರ್ಧಮಾನಕ್ಕೆ ಬಂದ ನಂತರ, ವಿಜಯನಗರವು 1565 ರಲ್ಲಿ ಪ್ರತಿಸ್ಪರ್ಧಿ ಸಾಮ್ರಾಜ್ಯ ಮುಂದೆ ಸೋಲು ಹಂಪಿ ಅಭಿವೃದ್ಧಿ ಕಾಣದೆ ಉಳಿಯಿತು. ಆದರೆ ಅದರ ಧಾರ್ಮಿಕ ಪ್ರಾಮುಖ್ಯತೆ ಮತ್ತು 1987 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿದ ನಂತರ ಇಂದಿಗೂ ಅದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಾಗಾಗಿ ಬ್ರಿಟಿಷ್ ಲೈಬ್ರರಿ ಪ್ರದರ್ಶನವು ಆಚರಿಸಲು ಉದ್ದೇಶಿಸಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಮಧ್ಯರಾತ್ರಿ 3 ಗಂಟೆವರೆಗೂ ಹೋಟೆಲ್ ತೆರೆಯಲು ಅನುಮತಿ ಕೊಡಿ; ಪೊಲೀಸ್ ಇಲಾಖೆಗೆ ಹೋಟೆಲ್ ಮಾಲೀಕರ ಮನವಿ
ಲೈಬ್ರರಿಯ ವಿಷುಯಲ್ ಆರ್ಟ್ಸ್ ಮುಖ್ಯಸ್ಥೆ ಮಾಲಿನಿ ರಾಯ್ ಅವರು ನಿರ್ವಹಿಸಿದ ಲಂಡನ್ ಪ್ರದರ್ಶನವು ಬ್ರಿಟಿಷ್ ಲೈಬ್ರರಿಯಲ್ಲಿ ದಕ್ಷಿಣ ಏಷ್ಯಾದ ವ್ಯಾಪಕ ಕಾರ್ಯಕ್ರಮದ ಭಾಗವಾಗಿದೆ. ಇದು ಕಳೆದ ತಿಂಗಳಿನಿಂದ ಮುಂಬೈನಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ವಾಸ್ತು ಸಂಗ್ರಹಾಲಯ (CSMVS)ದಲ್ಲಿ ಪ್ರದರ್ಶಿಸಲಾಗುತ್ತಿರುವ Early Photography and Archaeology in Western India ‘ ಪ್ರದರ್ಶನಕ್ಕೆ ಸಂಬಂಧಿಸಿದೆ. ಹಂಪಿ ಬಗ್ಗೆ ಇರುವ ಈ ಪ್ರದರ್ಶನವು ಭಾರತದ 75ನೇ ಸ್ವಾತಂತ್ರ್ಯೋತ್ಸವದ ಭಾಗವಾಗಿದ್ದು ಉಭಯ ದೇಶಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಾರತದಲ್ಲಿರುವ ನಮ್ಮ ಪಾಲುದಾರರೊಂದಿಗೆ ನಮ್ಮ ಸಂಬಂಧ ಗಟ್ಟಿಯಾಗಿದೆ ಎಂದು ಬ್ರಿಟಿಷ್ ಲೈಬ್ರರಿ ಅಧ್ಯಕ್ಷ ಡೇಮ್ ಕರೋಲ್ ಬ್ಲಾಕ್ ಹೇಳಿದ್ದಾರೆ.
ಮುಂಬೈನ ಸಿಎಸ್ಎಂವಿಎಸ್ ನಲ್ಲಿ ನಡೆಯುತ್ತಿರುವ ಪ್ರದರ್ಶನವು ಬ್ರಿಟಿಷ್ ಕೌನ್ಸಿವ್ಸ್ ಇಂಡಿಯಾ ಮತ್ತು ಯುಕೆಯ ಅಂಗವಾಗಿದೆ.
ಭಾರತದ ಶ್ರೀಮಂತ ಪುರಾತತ್ವ ಪರಂಪರೆ ಬಗ್ಗೆ ತಿಳಿಯುವ ಕೆಲವು ಅಪೂರ್ವ, ಪ್ರಾಚೀನ ಛಾಯಾಚಿತ್ರಗಳನ್ನು ನೋಡುವ ಅವಕಾಶ ನಮಗೆ ಸಿಗುತ್ತಿದೆ ಎಂದು ಬ್ರಿಟಿಷ್ ಕೌನ್ಸಿಲ್ನ ಗ್ಲೋಬಲ್ ಡೈರೆಕ್ಟರ್ ಆಫ್ ಆರ್ಟ್ಸ್ ಸ್ಕಿಂದರ್ ಹುಂದಾಲ್ ಹೇಳಿದ್ದಾರೆ.