ಜಿ20 ಲಾಂಛನದೊಂದಿಗೆ ವಿದ್ಯುದ್ದೀಪಾಲಂಕಾರದಿಂದ ಝಗಮಗಿಸಿದ ಹಂಪಿ
ನೂರು ವಿಶ್ವ ಪರಂಪರೆಯ ತಾಣಗಳು ಮತ್ತು ಸರ್ಕಾರ ಸಂರಕ್ಷಿತ ಸ್ಮಾರಕಗಳನ್ನು ಬೆಳಗಿಸುವ ಮೂಲಕ ಜಿ20 ಅಧ್ಯಕ್ಷತೆಯ ಅಂಗೀಕಾರವನ್ನು ಗುರುತಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಡಿಸೆಂಬರ್ 1 ರಂದು ಭಾರತವು G-20(G-20 presidency) ಅಧ್ಯಕ್ಷತೆ ವಹಿಸಿಕೊಂಡ ನಂತರ ದೇಶದಾದ್ಯಂತವಿರುವ 100 ಸ್ಮಾರಕಗಳು G-20 ಲಾಂಛನದೊಂದಿಗೆ ಬೆಳಗಿವೆ. ಕರ್ನಾಟಕದ ಹಂಪಿಯಲ್ಲಿರುವ (Hampi) ಸ್ಮಾರಕಗಳು ಮತ್ತು ಪಾರಂಪರಿಕ ತಾಣಗಳು ಕೂಡಾ ವಿದ್ಯುದ್ದೀಪದಿಂದ ಝಗಮಗಿಸಿವೆ. ನೂರು ವಿಶ್ವ ಪರಂಪರೆಯ ತಾಣಗಳು ಮತ್ತು ಸರ್ಕಾರ ಸಂರಕ್ಷಿತ ಸ್ಮಾರಕಗಳನ್ನು ಬೆಳಗಿಸುವ ಮೂಲಕ ಜಿ20 ಅಧ್ಯಕ್ಷತೆಯ ಅಂಗೀಕಾರವನ್ನು ಗುರುತಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. G20 ಜಾಗತಿಕ ಸಮಸ್ಯೆಗಳಾದ ಹವಾಮಾನ ಬದಲಾವಣೆ, ಸುಸ್ಥಿರ ಅಭಿವೃದ್ಧಿ, ವಿಶ್ವವ್ಯಾಪಿ ಆರ್ಥಿಕತೆ ಮತ್ತು ಇನ್ನೂ ಹೆಚ್ಚಿನವುಗಳನ್ನು ಪರಿಹರಿಸಲು 19 ದೇಶಗಳು ಮತ್ತು ಯುರೋಪಿಯನ್ ಯೂನಿಯನ್ (EU) ಅನ್ನು ಒಳಗೊಂಡಿರುವ ಒಂದು ಅಂತರ್ ಸರ್ಕಾರಿ ವೇದಿಕೆಯಾಗಿದೆ. ಭಾರತದ 55 ಸ್ಥಳಗಳಲ್ಲಿ 200 ಕ್ಕೂ ಹೆಚ್ಚು ಸಭೆಗಳು ನಡೆಯುವ ನಿರೀಕ್ಷೆಯಿದೆ. ಗುರುವಾರ ಜಿ20 ಲಾಂಛನದೊಂದಿಗೆ ಹಲವಾರು ಸ್ಮಾರಕಗಳು ಮತ್ತು ತಾಣಗಳು ಬೆಳಗಿದವು. ಕರ್ನಾಟಕದ ಹಂಪಿ ಅವುಗಳಲ್ಲಿ ಒಂದಾಗಿದೆ. ಹಂಪಿಯ ದೀಪಾಲಂಕೃತ ಸ್ಮಾರಕಗಳ ಚಿತ್ರಗಳನ್ನು ಆಲ್ ಇಂಡಿಯಾ ರೇಡಿಯೊ ನ್ಯೂಸ್ ಟ್ವೀಟ್ ಮಾಡಿದೆ.
ಎಎಸ್ಐ ಭಾರತಕ್ಕೆ ಜಿ20 ಪ್ರತಿನಿಧಿಗಳನ್ನು ಸ್ವಾಗತಿಸುತ್ತದೆ. ದೇಶಾದ್ಯಂತ ಜಿ20 ಲಾಂಛನದಲ್ಲಿ ಪ್ರಕಾಶಿತ ಸ್ಮಾರಕಗಳ ಒಂದು ನೋಟ ಎಂದು ಭಾರತೀಯ ಪುರಾತತ್ವ ಇಲಾಖೆ ಟ್ವೀಟ್ ಮಾಡಿದೆ.
Hampi Monuments in Karnataka illuminated with #G20 logo to mark the presidency of India for G-20 #G20India pic.twitter.com/FsAQoJzili
— All India Radio News (@airnewsalerts) December 2, 2022
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿಯು ಐತಿಹಾಸಿಕ ಪ್ರಾಮುಖ್ಯತೆಯನ್ನು ಹೊಂದಿರುವ ಪಟ್ಟಣವಾಗಿದೆ. ಇದು ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದು ಕಲ್ಲಿನ ರಥ, ವಿಟ್ಟಲ ದೇವಸ್ಥಾನ, ಹೇಮಕೂಟ ಬೆಟ್ಟಗಳು, ಅಂಜನಾದ್ರಿ ಬೆಟ್ಟಗಳು, ವಿರೂಪಾಕ್ಷ ದೇವಸ್ಥಾನ, ಮುಂತಾದ ಪ್ರಸಿದ್ಧ ತಾಣಗಳನ್ನು ಹೊಂದಿದೆ.
100 ಶಾರ್ಟ್‌ಲಿಸ್ಟ್ ಮಾಡಲಾದ ಸ್ಮಾರಕಗಳ ಪಟ್ಟಿಯಲ್ಲಿ ಟಿಪ್ಪು ಸುಲ್ತಾನನ ಅರಮನೆ ಮತ್ತು ಕರ್ನಾಟಕದ ಗೋಲ್ ಗುಂಬಜ್, ಹುಮಾಯೂನ್ ಸಮಾಧಿ ಮತ್ತು ದೆಹಲಿಯ ಪುರಾಣ ಕ್ವಿಲಾ, ಗುಜರಾತ್‌ನ ಮೊಧೇರಾ ಸೂರ್ಯ ದೇವಾಲಯ, ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯ, ಬಿಹಾರದಲ್ಲಿರುವ ಶೇರ್ ಶಾ ಸೂರಿಯ ಸಮಾಧಿ ಮೊದಲಾದ ಸ್ಮಾರಕಗಳಲ್ಲಿ ಜಿ-20 ಲಾಂಛನದೊಂದಿಗೆ ಪ್ರಕಾಶಿಸಿದೆ