ಬಳ್ಳಾರಿ: 121.9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಉದ್ಘಾಟಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ
ಬಳ್ಳಾರಿ ಜಿಲ್ಲೆಯ ತಾಳೂರು ರಸ್ತೆಯಲ್ಲಿ 121.9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿಯವರು ಲೋಕಾರ್ಪಣೆಗೊಳಿಸಿದರು.
ಬಳ್ಳಾರಿ: ಜಿಲ್ಲೆಯ ತಾಳೂರು ರಸ್ತೆಯಲ್ಲಿ 121.9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು (District Court) ಹೈಕೋರ್ಟ್ (High Court) ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ (Chief justice Ritu Raj Awasthi) ಯವರು ಲೋಕಾರ್ಪಣೆಗೊಳಿಸಿದರು. ನ್ಯಾಯಾಲಯವು ಕೇಂದ್ರೀಕೃತ ಹವಾ ನಿಯಂತ್ರಿತ, 19 ಕೋರ್ಟ್ ಹಾಲ್‍ಗಳು, ಸುಸಜ್ಜಿತ ಕಾನ್ಫರೆನ್ಸ್ ಹಾಲ್ ಹೊಂದಿದೆ. ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾ.ಕೆ.ನಟರಾಜನ್, ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶೆ ಎಸ್.ಹೆಚ್.ಪುಷ್ಪಾಂಜಲಿದೇವಿ ಸೇರಿದಂತೆ ವಿವಿಧ ನ್ಯಾಯಾಧೀಶರು ಭಾಗಿಯಾಗಿದ್ದರು.
ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿದ ಸಿಎಂ
ಧಾರವಾಡ: ಇಂದು (ಜೂನ್ 26) ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದರು. ಅಂದಾಜು 35 ಕೋಟಿ ವೆಚ್ಚದ ವಿವಿಧ ರಸ್ತೆ ಕಾಮಗಾರಿ, ವಿದ್ಯುತ್ ಚಿತಾಗಾರ ಮತ್ತು ವಿವಿಧ ಕಾಮಗಾರಿಗಳನ್ನು ಲೋರ್ಕಾಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವರಾದ ಹಾಲಪ್ಪ ಆಚಾರ್, ಭೈರತಿ ಬಸವರಾಜ್ ಭಾಗಿಯಾಗಿದ್ದರು.
ಇದನ್ನು ಓದಿ: ಭಾರತದ ಮಾಧ್ಯಮ, ಮನರಂಜನಾ ಉದ್ಯಮ 2025ರ ವೇಳೆಗೆ 4 ಲಕ್ಷ ಕೋಟಿ ತಲುಪುವ ನಿರೀಕ್ಷೆ: ಅನುರಾಗ್ ಠಾಕೂರ್
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ ಸ್ಮಾಟ್೯ ಸಿಟಿ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಅನೇಕ ಕಾರ್ಯಕ್ರಮ ನಡಿತಿದೆ. ಕುಡಿಯುವ ನೀರಿನ ಯೋಜನೆಗೆ ಅತೀ ಹೆಚ್ಚು ದುಡ್ಡು ನೀಡುತ್ತಿದ್ದೇವೆ. ಭಾರತ ಸರ್ಕಾರ ಮೂಲಭೂತ ಸೌಕರ್ಯ ಹೆಚ್ಚಿಸೋ ಕೆಲಸ ಮಾಡುತ್ತಿದೆ. ಬೊಮ್ಮಾಯವರು ರೈಲ್ವೇ ಡಬ್ಲಿಂಗ್ ಕಾಳಜಿ ವಹಿಸಿದ್ದಾರೆ. ಕೊರೊನಾ ಕಾಲದಲ್ಲಿ ಆಹಾರ ಭದ್ರತೆ ನೀಡಿದ ಏಕೈಕ ದೇಶ ನಮ್ಮದು ಎಂದು ಹೇಳಿದರು.
ಸ್ಮಾರ್ಟ್ಸಿಟಿ ಯೋಜನೆ 2 ವರ್ಷಗಳ ಹಿಂದೆಯೇ ಮುಗಿಯಬೇಕಿತ್ತು. ಕೆಲವು ಪಾಲಿಕೆಗಳು ಹಿಂದೇಟು ಹಾಕಿದ್ದರಿಂದ ಕಾಮಗಾರಿ ಮುಗಿದಿಲ್ಲ. ಒಂದು ವರ್ಷದೊಳಗೆ ಎಲ್ಲಾ ಕಾಮಗಾರಿ ಮುಗಿಸಬೇಕು. ಕಾರಣದ ಹೇಳದೆ ಮಾರ್ಚ್ ತಿಂಗಳೊಳಗೆ ಕಾಮಗಾರಿ ಮುಗಿಸಿಬೇಕು. ಗುಣಮಟ್ಟ ಕಾಪಾಡದ ಕಂಟ್ರ್ಯಾಕ್ಟರ್ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಮಾರ್ಟ್ಸಿಟಿ ಯೋಜನೆ ಎಂಡಿ ಶಕೀಲ್ ಅಹ್ಮದ್ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ನೀಡಿದ್ದಾರೆ.
ಈ ಭಾಗದ ಕಾಂಗ್ರೆಸ್ ಶಾಸಕ ಅಬ್ಬಯ್ಯನದು ನಂದು ದೊಸ್ತಿ ಇದೆ. ಅದಕ್ಕಾಗಿ ನಾನು ಅನುದಾನ ನೀಡಿದ್ದೆನೆ. ನಾನು ವಿಪಕ್ಷದಲ್ಲಿದ್ದಾಗ ನಿಮ್ಮ ಸರ್ಕಾರ ನಯಾ ಪೈಸೆ ಕೊಟ್ಟಿಲ್ಲ. ಆದರೆ ಹುಬ್ಬಳ್ಳಿಗೆ ಅನೂಕುಲ ಆಗುತ್ತೆ ಅಂದರೆ ನಾನು ಕೊಡುತ್ತೇನೆ. ಹುಬ್ಬಳ್ಳಿ- ಬೆಳಗಾವಿ ರೈಲ್ವೆ ಯೋಜನೆಗೆ 800 ಕೋಟಿಗೂ ನೀಡಿದ್ದೆನೆ ಎಂದರು