ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನಿನ ಮೇಲೆ ಅಧಿಕಾರಿಗಳ ದಾಳಿ; ಐವರ ವಿರುದ್ಧ ದೂರು ದಾಖಲು
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಸಂಡೂರು ಆಹಾರ ನಿರೀಕ್ಷಕರು ಹಾಗೂ ಇನ್ನೀತರ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿ ಪಡಿತರ ಅಕ್ಕಿ ದಾಸ್ತಾನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಳ್ಳಾರಿ: ಸಂಡೂರು ತಾಲೂಕಿನ ಸುಶೀಲಾನಗರ ಬೈಪಾಸ್ ರೋಡ್ ಹತ್ತಿರವಿರುವ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಜಮೀನಿನಲ್ಲಿ ಅಪಾರ ಪ್ರಮಾಣದ ಅಕ್ಕಿ ಅಕ್ರಮ ದಾಸ್ತಾನು ಮಾಡಿದ್ದ ಮಾಹಿತಿ ಸಿಕ್ಕಿದೆ. ಮಾಹಿತಿ ತಿಳಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರು ಸಂಡೂರು ಆಹಾರ ನಿರೀಕ್ಷಕರು ಹಾಗೂ ಇನ್ನೀತರ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿ ಪಡಿತರ ಅಕ್ಕಿ ದಾಸ್ತಾನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಅಕ್ರಮ ಅಕ್ಕಿ ದಾಸ್ತಾನಿನ ಮೌಲ್ಯ ರೂಪಾಯಿ 2.35 ಲಕ್ಷ ರೂ.ಮೌಲ್ಯದ 157 ಕ್ವಿಂಟಾಲ್ ಎಂದು ತಿಳಿದುಬಂದಿದೆ. ಅಕ್ರಮ ದಾಸ್ತಾನು ಮಾಡಿದ್ದ ಸುಲ್ತಾನ್, ಸತ್ಯಪ್ಪ, ಕುಮಾರಸ್ವಾಮಿ, ಪ್ರದೀಪ, ಷಂಶು, ಬಾಷಾಸಾಬ್ ದೌಲತ್‍ಪುರ ಇವರ ಮೇಲೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಮಣಪ್ಪುರಂ ಗೋಲ್ಡ್’ ಕಂಪನಿಯಲ್ಲಿ ಅಕ್ರಮದ ಆರೋಪ ಮಣಪುರಂ ಗೋಲ್ಡ್ ಕಂಪನಿ ಗ್ರಾಹಕರಿಂದ ಚಿನ್ನವನ್ನ ಅಡ ಇಟ್ಟುಕೊಂಡು, ಸಾಲ ಕೊಡೋ ಕಂಪನಿ. ಇದೇ ಕಂಪನಿಯಲ್ಲಿ ಅಕ್ರಮ ನಡೆದಿರೋ ಆರೋಪ ಕೇಳಿ ಬಂದಿದೆ. ಅದ್ರಲ್ಲೂ ಕಂಪನಿಯ ಸಿಬ್ಬಂದಿ ವಿರುದ್ಧ ಕಂಪನಿಯವರೇ ದೂರು ಕೊಟ್ಟಿದ್ದಾರೆ. ಕಲಾವತಿ ಅನ್ನೋ ಮಹಿಳೆ ಮಣಪುರಂ ಕಂಪನಿಯಲ್ಲಿ ರೆಗ್ಯುಲರ್ ಆಗಿ ಚಿನ್ನ ಅಡ ಇಟ್ಟು ಸಾಲ ಪಡೆಯುತ್ತಿದ್ರು. ಹೀಗಾಗಿ ಕಂಪನಿಯ ಸಿಬ್ಬಂದಿಗೆ ಪರಿಚಿತರಾಗಿದ್ರು. ಇದ್ರ ನಡುವೆ ಕಲಾವತಿಯನ್ನ ಸಂಪರ್ಕಿಸಿದ್ದ ಕಂಪನಿ ಸಿಬ್ಬಂದಿ, ಆಡಿಟ್ ವೇಳೆ ಸ್ವಲ್ಪ ವ್ಯತ್ಯಾಸವಾಗಿದೆ. ಎರಡು ಕೆಜಿ ಚಿನ್ನ ತಂದು ಕೊಡಿ, ಆಮೇಲೆ ಮರಳಿಸುತ್ತೇವೆ ಅಂತಾ ಹೇಳಿದ್ರಂತೆ. ಆದ್ರೆ ಕಲಾವತಿ ತಂದು ಕೊಟ್ಟಿದ್ದ ಚಿನ್ನವನ್ನ ತಾವೇ ಫ್ಲೆಡ್ಜ್ ಮಾಡಿಕೊಂಡಿದ್ದ ಸಿಬ್ಬಂದಿ ತಮ್ಮ ಕಂಪನಿಯಲ್ಲೇ ತಾವೇ ಸಾಲ ಪಡೆದಿದ್ದಾರೆ.
ಕಂಪನಿಯಲ್ಲಿದ್ದ ಚಿನ್ನವನ್ನೇ ಅಡ ಇಡ್ತಿದ್ದ ಭೂಪರು ವಿಷ್ಯ ಅಂದ್ರೆ ಕಂಪನಿಯಲ್ಲಿ ಗ್ರಾಹಕರು ಇಡ್ತಿದ್ದ ಚಿನ್ನವನ್ನ, ತಮ್ಮ ವಶಕ್ಕೆ ಪಡೆದುಕೊಳ್ತಿದ್ದ ಬ್ರಾಂಚ್ ಹೆಡ್ ಶ್ವೇತಾ, ಬ್ರಾಂಚ್‌ನ ಅಸಿಸ್ಟೆಂಟ್ ಹೆಡ್ ಶಿವಕುಮಾರ್, ಸೇಲ್ಸ್ ಎಕ್ಸಿಕ್ಯೂಟಿವ್ ಅಮರನಾಥ್ ಹಾಗೂ ಆಡಿಟರ್ ಶಂಕರ್ ಗೌಡ ಜತೆ ಸೇರಿ ಅಕ್ರಮ ಮಾಡ್ತಿದ್ರು. ಗ್ರಾಹಕರ ಚಿನ್ನವನ್ನೇ ಮತ್ತೊಮ್ಮೆ ಅಡ ಇಟ್ಟು ಸಾಲ ಪಡೆಯುತ್ತಿದ್ರು. ಯಾವಾಗ ಕಲಾವತಿ ತನ್ನ ಚಿನ್ನದ ಕತೆ ಏನ್ ಆಯ್ತು ಅಂತಾ ಬಂದ್ರೋ ಆವಾಗ ಈ ಪ್ರಕರಣ ಬಯಲಾಗಿದೆ. ಮತ್ತೊಮ್ಮೆ ಆಡಿಟ್ ಮಾಡ್ತಿದ್ದಂತೆ ಕಂಪನಿಗೆ 2 ಕೋಟಿ ನಷ್ಟವಾಗಿರೋದು ಗೊತ್ತಾಗಿದೆ. ಹೀಗಾಗಿ ಯಶವಂತಪುರ ಠಾಣೆಯಲ್ಲಿ 9 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ಸದ್ಯ ಕಲಾವತಿ ನೀಡಿರೋ ದೂರು ಸಂಬಂಧ ಮೋನಿಷಾ ಅನ್ನೋ ಹೌಸ್ ಕೀಪಿಂಗ್ ಜತೆ ಅಸಿಸ್ಟೆಂಟ್ ಹೆಡ್ ಶಿವಕುಮಾರ್, ಸೇಲ್ಸ್ ಎಕ್ಸಿಕ್ಯುಟಿವ್ ಅಮರನಾಥ್ ಹಾಗೂ ಆಡಿಟರ್ ಶಂಕರ್ ಗೌಡನನ್ನ ಬಂಧಿಸಿರೋ ಯಶವಂತಪುರ ಪೊಲೀಸರು ಉಳಿದವರಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ಸಂಬಂಧಿಸಿದಂತೆ ಕರ್ನಾಟಕದ ಜೊತೆ ತಮಿಳುನಾಡಿನ ತಕರಾರೇ ಇಲ್ಲ: ಸಿದ್ದರಾಮಯ್ಯ