ನಿನ್ನೆ ರಾತ್ರಿ ಒಳ್ಳಾರಿಯಲ್ಲಿ ಮಲಗಿದ್ದವರ ಮೇಲೆ ಹುಚ್ಚು ನಾಯಿ ದಾಳಿ: 20 ಮಂದಿ ಆಸ್ಪತ್ರೆಗೆ ದಾಖಲು, ನಾಯಿಗಾಗಿ ತಲಾಶ್

| Updated By: ಆಯೇಷಾ ಬಾನು

Updated on: Feb 07, 2023 | 2:41 PM

ಮನೆಯ ಹೊರಗೆ ಮಲಗಿದ್ದ ಮಹಿಳೆಯರು, ಮಕ್ಕಳು, ಯುವಕರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದ್ದು ತೀವ್ರ ಗಾಯಗೊಂಡಿರುವ 8 ಜನರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನಿನ್ನೆ ರಾತ್ರಿ ಒಳ್ಳಾರಿಯಲ್ಲಿ ಮಲಗಿದ್ದವರ ಮೇಲೆ ಹುಚ್ಚು ನಾಯಿ ದಾಳಿ: 20 ಮಂದಿ ಆಸ್ಪತ್ರೆಗೆ ದಾಖಲು, ನಾಯಿಗಾಗಿ ತಲಾಶ್
ಸಾಂದರ್ಭಿಕ ಚಿತ್ರ
Follow us on

ಬಳ್ಳಾರಿ: ಜಿಲ್ಲೆಯ ವಟ್ಟಪ್ಪಗೇರಿಯಲ್ಲಿ ನಿನ್ನೆ ರಾತ್ರಿ ಹುಚ್ಚು ನಾಯಿ ದಾಳಿ(Dog Attack) ನಡೆಸಿದ್ದೂ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಮನೆಯ ಹೊರಗೆ ಮಲಗಿದ್ದ ಮಹಿಳೆಯರು, ಮಕ್ಕಳು, ಯುವಕರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದ್ದು ತೀವ್ರ ಗಾಯಗೊಂಡಿರುವ 8 ಜನರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ವಿಮ್ಸ್ ಆಸ್ಪತ್ರೆಗೆ ವಿಮ್ಸ್ ನಿರ್ದೇಶಕ ಡಾ ಗಂಗಾಧರಗೌಡ, ಡಿಹೆಚ್​ಓ ಜನಾರ್ದನ, ಪಾಲಿಕೆ ಆಯುಕ್ತ ರುದ್ರೇಶ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ವಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ, 21 ಜನರು ಈಗಾಗಲೇ ಚಿಕಿತ್ಸೆಗೆ ಬಂದಿದ್ದಾರೆ. ಮೂವರು ಈಗಾಗಲೇ ಚಿಕಿತ್ಸೆ ಪಡೆದು ಹೋಗಿದ್ದಾರೆ. 18 ಜನರು ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಲ್ಲರಿಗೂ ಆಂಟಿ ರೇಬಿಯಸ್ ಚಿಕಿತ್ಸೆ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Tumakur: ಒಂದೇ ಏರಿಯಾದಲ್ಲಿ 6 ವಿದ್ಯಾರ್ಥಿಗಳು ಸೇರಿ 21 ಜನರಿಗೆ ಕಚ್ಚಿದ ಹುಚ್ಚು ನಾಯಿ

ಇನ್ನು ಇದೇ ವೇಳೆ ಪಾಲಿಕೆ ಆಯುಕ್ತ ರುದ್ರೇಶ ಮಾತನಾಡಿದ್ದು, ವಾರ್ಡ್ ನಂಬರ್ 30ರಲ್ಲಿ ಹುಚ್ಚು ನಾಯಿ ದಾಳಿ‌ ಆಗಿದೆ. ಹುಚ್ಚು ನಾಯಿ ಕಡಿತದಿಂದ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನರಿಗೆ ಮನೆಯ ಹೊರಗೆ ಆಹಾರ ಹಾಕದಂತೆ ಮನವಿ ಮಾಡಿದ್ದೇವೆ. ಪಾಲಿಕೆ ವತಿಯಿಂದ 15 ಜನರು ನಾಯಿ ಹುಡುಕಾಟದಲ್ಲಿ ತೊಡಗಿದ್ದಾರೆ. ಬೀದಿ ನಾಯಿಗಳ ಸಂತಾನಹರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:12 pm, Tue, 7 February 23