ಬಳ್ಳಾರಿ: ಪಶ್ಚಿಮ ಬಂಗಾಳದ ಆ ಕುಟುಂಬ ಕಳೆದ ಹದಿನೈದು ವರ್ಷಗಳಿಂದಲೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿ ಕೂಲಿ ಕೆಲ್ಸ ಮಾಡಿಕೊಂಡು ಜೀವನ ನಡೆಸುತ್ತಿತ್ತು. ಕಳೆದ ಹದಿನೈದು ವರ್ಷಗಳಿಂದಲೂ ಈ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿರುವ ಈ ಕುಟುಂಬದಲ್ಲಿ ಈಗ ಮೂವರು ಮಕ್ಕಳು ಅನಾಥರಾಗಿದ್ದಾರೆ. ಮಹಾಮಾರಿ ಕೊರೊನಾ ಅನ್ನೋ ಹೆಮ್ಮಾರಿ ಮೂರು ಮಕ್ಕಳನ್ನ ತಬ್ಬಲಿಗಳನ್ನಾಗಿ ಮಾಡಿದೆ. ಹೌದು ಪಶ್ಚಿಮ ಬಂಗಾಳದ ಮಧುಪುರ ಗುಲ್ಡ್ ಬಾ ಗ್ರಾಮದ ಅಬ್ದುಲ್ ಅಲೀಂ ಹಾಗೂ ಪತ್ನಿ ಪರ್ಷಿಯಾ ಕಳೆದ ಹದಿನೈದು ವರ್ಷಗಳಿಂದೆ ತಾಯಕನಹಳ್ಳಿ ಗ್ರಾಮದಲ್ಲಿ ಬಂದಿದ್ದರು. ಗ್ರಾಮದಲ್ಲಿ ಗಾರೆ ಕೆಲ್ಸ ಮಾಡಿಕೊಂಡು ಈ ಕುಟುಂಬ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ರು.
ಕಳೆದ ಫೆಬ್ರವರಿ ತಿಂಗಳಲ್ಲಿ ತಾಯಕನಹಳ್ಳಿ ಗ್ರಾಮದಲ್ಲಿ ಮೂರು ಮಕ್ಕಳನ್ನ ಬಿಟ್ಟು ತನ್ನ ತಾಯಿಯನ್ನ ನೋಡಲು ಪತ್ನಿಯೊಂದಿಗೆ ಅಬ್ದುಲ್ ಅಲೀಂ ಪಶ್ಚಿಮ ಬಂಗಾಳಕ್ಕೆ ತೆರಳಿದ್ರು. ಆದ್ರೆ ಮಾರ್ಚ್ ತಿಂಗಳಲ್ಲಿ ಕೊರೊನಾ ಹೆಮ್ಮಾರಿ ತಡೆಯಲು ಕೇಂದ್ರ ಸರ್ಕಾರ ಕೈಗೊಂಡ ಲಾಕ್ಡೌನ್ನಿಂದಾಗಿ ವಾಪಾಸ್ ಬರಲು ಈ ಅಬ್ದುಲ್ ಅಲೀಂ ಗೆ ಸಾಧ್ಯವಾಗಿಲ್ಲ.
ಮಕ್ಕಳನ್ನು ನೋಡುವ ಮುನ್ನವೇ ಇಹಲೋಕ ತ್ಯಜಿಸಿದ ತಂದೆ:
ಲಾಕ್ಡೌನ್ ಸಡಿಲಿಕೆ ಬಳಿಕ ವಾಪಾಸ್ ಮಕ್ಕಳಿರುವ ತಾಯಕನಹಳ್ಳಿ ಗ್ರಾಮಕ್ಕೆ ಹೋಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದ ಅಬ್ದುಲ್ ಅಲೀಂ ಹೃದಯಘಾತವಾಗಿ ಬಾರದ ಲೋಕಕ್ಕೆ ಹೋಗಿದ್ದಾರೆ. ಫೆಬ್ರುವರಿಯಲ್ಲಿ ಪಶ್ಚಿಮ ಬಂಗಾಳಕ್ಕೆ ಹೋಗಿದ್ದ ಈ ದಂಪತಿ ಮೂರು ತಿಂಗಳು ಕಳೆದ್ರೂ ವಾಪಾಸ್ ಕರ್ನಾಟಕಕ್ಕೆ ಬರಲು ಸಾಧ್ಯವಾಗಲಿಲ್ಲ.
ಇತ್ತ ತಂದೆಯ ಸಾವಿನ ಸುದ್ದಿ ತಿಳಿದು ಮೂವರು ಮಕ್ಕಳು ಕಣ್ಣೀರು ಹಾಕಿದ್ದಾರೆ. ಅಲ್ಲದೇ ತಂದೆಯ ಅಂತ್ಯಸಂಸ್ಕಾರಕ್ಕೂ ಹೋಗದ ಪರಿಸ್ಥಿತಿ ಇವರದ್ದು. ಮೊಬೈಲ್ ವಾಟ್ಸಾಪ್ ಮೂಲಕವೇ ತಂದೆಯ ಅಂತ್ಯಸಂಸ್ಕಾರವನ್ನ ವೀಕ್ಷಿಸಿದ್ದಾರೆ. ಮಕ್ಕಳನ್ನ ನೋಡುವುದಕ್ಕಿಂತ ಮುಂಚೆಯೇ ಅಬ್ದುಲ್ ಅಲೀಂ ಇಹಲೋಕ ತ್ಯಜಿಸಿದ್ದಾರೆ. ಈತ್ತ ನಿತ್ಯ ತಂದೆಯನ್ನ ನೆನೆದು ಮೂವರು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ.
ತಂದೆಯನ್ನ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಅನಾಥವಾಗಿದ್ದ ಮೂವರು ಮಕ್ಕಳನ್ನ ಗ್ರಾಮದ ಮುಖಂಡ ಗನಿಸಾಬ್ ತಮ್ಮ ತೋಟದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಮೂರು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. 18 ವರ್ಷದ ಜನಾತುನ್ ಪಿರ್ದೋಜ್, 17 ವರ್ಷದ ಹಕ್ಲೀಮಾ ಬಳ್ಳಾರಿಯ ಮದ್ರಾಸಾ ದಲ್ಲಿ ಅಭ್ಯಾಸ ಮಾಡುತ್ತಿದ್ದು ಇನ್ನೊರ್ವ ಮಗಳು 14 ವರ್ಷದ ರಹಿಮಾ ಬಿಸ್ವಾಸ್ ಇದೇ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಈ ಮೂವರ ಮಕ್ಕಳ ತಾಯಿ ಪಶ್ಚಿಮ ಬಂಗಾಳದಿಂದ ಬರುವವರೆಗೂ ಇವರನ್ನ ಗ್ರಾಮದ ಗನಿಸಾಬ್ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
ಲಾಕ್ಡೌನ್ ಎಫೆಕ್ಟ್ನಿಂದಾಗಿ ಮೂವರು ಮಕ್ಕಳು ಅನಾಥರಾಗಿದ್ದಾರೆ. ತಂದೆಯನ್ನ ಕಳೆದುಕೊಂಡು ಪ್ರತಿನಿತ್ಯ ಕಣ್ಣೀರು ಹಾಕುತ್ತಿದ್ದಾರೆ. ಈತ್ತ ಅನಾಥರಾಗಿರುವ ಮೂವರು ಮಕ್ಕಳು ಪಶ್ಚಿಯ ಬಂಗಾಳದಿಂದ ತಾಯಿಯ ಬರುವಿಕೆಗಾಗಿ ಎದುರು ನೋಡುತ್ತಿದ್ದಾರೆ.
Published On - 1:56 pm, Wed, 20 May 20