ಟಿವಿ9 ಇಂಪ್ಯಾಕ್ಟ್​: ಬಳ್ಳಾರಿಯಲ್ಲಿ ಬಂದ್ ಆಗಿದ್ದ ಎಂಟು ಇಂದಿರಾ ಕ್ಯಾಂಟೀನ್ ರೀ ಓಪನ್

ಬಡವರಿಗೆ, ಹಸಿದವರಿಗೆ ಅನ್ನ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್, ಆ ಕ್ಯಾಂಟೀನ್‌ಗಳಿಗೆ ಬಿಲ್ ಬಾಕಿ ಇದೆ ಎಂದು ಬೀಗ ಹಾಕಲಾಗಿತ್ತು. ಈ ವಿಷಯ ತಿಳಿದ ಟಿವಿ9 ಸ್ಥಳಕ್ಕೆ ಹೋಗಿ ರಿಯಾಲಿಟಿ ಚೆಕ್ ನಡೆಸಿ ವಿಸ್ತೃತ ವರದಿ ಬಿತ್ತಾರ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಜಿಲ್ಲಾಡಳಿತಕ್ಕೆ ಕ್ಲಾಸ್ ತೆಗೆದುಕೊಂಡು ಬಳ್ಳಾರಿ ಜಿಲ್ಲೆಯಲ್ಲಿ ಕ್ಯಾಂಟೀನಗಳನ್ನ ರೀ ಓಪನ್ ಮಾಡಿಸಿದೆ. ಕ್ಯಾಂಟೀನ್ ಪುನಃ ತಗೆದಿದ್ದಕ್ಕೆ ಜನ ಪುಲ್ ಖುಷ್​ ಆಗಿದ್ದಾರೆ.

ಟಿವಿ9 ಇಂಪ್ಯಾಕ್ಟ್​: ಬಳ್ಳಾರಿಯಲ್ಲಿ ಬಂದ್ ಆಗಿದ್ದ ಎಂಟು ಇಂದಿರಾ ಕ್ಯಾಂಟೀನ್ ರೀ ಓಪನ್
ಬಳ್ಳಾರಿಯಲ್ಲಿ ಬಂದ್ ಆಗಿದ್ದ ಎಂಟು ಇಂದಿರಾ ಕ್ಯಾಂಟೀನ್ ರೀ ಓಪನ್
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 10, 2024 | 5:27 PM

ಬಳ್ಳಾರಿ, ಫೆ.10: ಗಣಿನಾಡು ಬಳ್ಳಾರಿಯಲ್ಲಿ ಹಸಿದವರಿಗೆ ಅನ್ನ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಬಿಲ್ ಬಾಕಿ ಇದೆ ಎಂದು ಬಂದ್ ಆಗಿದ್ದವು. ಹಸಿದವರ ಅನ್ನ ಕಸೆದುಕೊಂಡಿದ್ದ ಸರ್ಕಾರಕ್ಕೆ ಟಿವಿ9 ವಿಸ್ತೃತ ವರದಿ ಮಾಡುವ ಮೂಲಕ ಬಿಸಿ ಮುಟ್ಟಿಸಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಸಿಎಂ ಕಚೇರಿಯಿಂದ ನೇರವಾಗಿ ಜಿಲ್ಲಾಡಳಿತಕ್ಕೆ ಪೋನ್ ಮಾಡಿಸಿ ಸಮಸ್ಯೆ ಬಗೆಹರಿಸಿ, ಕ್ಯಾಂಟೀನ್ ರೀ ಓಪನ್ ಮಾಡುವಂತೆ ಸೂಚನೆ ನೀಡಿತ್ತು. ಬಳಿಕ ಜಿಲ್ಲಾಡಳಿತ ಕ್ಯಾಂಟೀನ್ ನಡೆಸುತ್ತಿದ್ದ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಬಾಕಿ ಇರುವ ಬಿಲ್‌ನ್ನು ಪಾವತಿಸುವ ಭರವಸೆ ನೀಡಿ, ಮತ್ತೆ ಕ್ಯಾಂಟೀನ್‌ಗಳನ್ನ ರೀ ಓಪನ್ ಮಾಡಿಸಿದೆ.

ಕಳೆದ ಇಪ್ಪತ್ತು ದಿನಗಳಿಂದ ಬಳ್ಳಾರಿ ನಗರದಲ್ಲಿ 5 ಕ್ಯಾಂಟೀನ್‌ಗಳು ಮತ್ತು ಕುಡ್ಲಿಗಿ, ಸಿರಗುಪ್ಪ, ಸಂಡೂರು ತಾಲೂಕಿನಲ್ಲಿ ತಲಾ ಒಂದೊಂದು ಕ್ಯಾಂಟೀನ್ ಸಂಪೂರ್ಣವಾಗಿ ಬಂದ್ ಆಗಿತ್ತು. ಸುಮಾರು ಮೂರು ವರ್ಷಗಳಿಂದ ಬಿಲ್ ಪಾವತಿ ಮಾಡದ ಸರ್ಕಾರಕ್ಕೆ ಗುತ್ತಿಗೆದಾರ ಕಂಪನಿ ಸಾಕಷ್ಟು ಬಾರಿ ಮನವಿ ಮಾಡಿತ್ತಾದರೂ, ಇವರ ಮನವಿಗೆ ಸ್ಪಂದಿಸದ ಹಿನ್ನಲೆ ಕ್ಯಾಂಟೀನ್ ಕ್ಲೋಸ್ ಮಾಡಲಾಗಿತ್ತು. ಇದರಿಂದ ನಿತ್ಯ ಕ್ಯಾಂಟೀನ್‌ಗಳಿಗೆ ಊಟ-ಉಪಹಾರಕ್ಕೆ ಬರುತ್ತಿದ್ದ ಜನರಿಗೆ ತೊಂದರೆಯಾಗಿತ್ತು. ಇದೀಗ ಜಿಲ್ಲಾಡಳಿತದ ಸೂಚನೆ ಮೇರೆಗೆ ಕ್ಯಾಂಟೀನ್ ತೆರೆದಿದ್ದೆವೆ ಎಂದು ಕ್ಯಾಂಟೀನ್‌ಗಳ ನಿರ್ವಾಹಕ ಮಹದೇವ ಎಂಬುವವರು ಹೇಳುತ್ತಾರೆ.

ಇದನ್ನೂ ಓದಿ:Indira Canteen: ಬಳ್ಳಾರಿಯಲ್ಲಿ 8 ಇಂದಿರಾ ಕ್ಯಾಂಟೀನ್​ಗಳು ಬಂದ್, ಗ್ಯಾರಂಟಿ ಪರಿಣಾಮವೇ ಕಾರಣವೆಂಬ ಆರೋಪ

ಕೊಟ್ಯಾಂತರ ರೂ. ಬಿಲ್​ ಬಾಕಿ

ಇನ್ನು ಬಳ್ಳಾರಿ ನಗರದ ಎಪಿಎಂಸಿ, ಓಪಿಡಿ (ಜಿಲ್ಲಾ ಆಸ್ಪತ್ರೆ ಆವರಣ) ಮೋತಿ ಸರ್ಕಲ್, ವಿಮ್ಸ್, ಬೆಳಗಲ್ ಕ್ರಾಸ್ ಬಳಿ‌ ಇದ್ದು, ಐದು ಇಂದಿರಾ ಕ್ಯಾಂಟೀನ್‌ಗಳ ಸುಮಾರು 3.38 ಕೋಟಿ ರೂ. ಬಿಲ್ ಬಾಕಿ ಜೊತೆಗೆ ಕುಡ್ಲಿಗಿ ತಾಲೂಕಿನ ಒಂದು ಕ್ಯಾಂಟೀನ್‌ನ 43 ಲಕ್ಷ, ಸಿರಗುಪ್ಪ ತಾಲೂಕಿನ ಒಂದು ಕ್ಯಾಂಟೀನ್ 52 ಲಕ್ಷ, ಸಂಡೂರು ಒಂದು ಕ್ಯಾಂಟೀನ್‌ನ 27 ಲಕ್ಷ ಒಟ್ಟು ಎಂಟು ಕ್ಯಾಂಟೀನ್‌ನಗಳ 4.59 ಕೋಟಿ ಹಣವನ್ನ ಸರ್ಕಾರ ಬಾಕಿ ಇರಿಸಿಕೊಂಡಿದೆ. ಹೀಗಾಗಿ Cheftak food and Hospitality services PVT. LTD ಕಂಪನಿಯು ‌ಕ್ಯಾಂಟೀನಗಳನ್ನ ನಡೆಸಲಿಕ್ಕೆ ಆಗಲ್ಲ. ಬಾಕಿ‌ಬಿಲ್ ಪಾವತಿ ಮಾಡಿ ಎಂದು ಕ್ಲೋಸ್ ಮಾಡಿತ್ತು. ಈಗ ಜಿಲ್ಲಾಡಳಿತ ಸಭೆ ನಡೆಸುವ ಮೂಲಕ ಮನವೊಲಿಕೆ ಮಾಡಿ ಕ್ಯಾಂಟೀನ್ ರೀ ಓಪನ್ ಮಾಡಿದ್ದಾರೆ.

ಬಡ ಜನರು, ವಿದ್ಯಾರ್ಥಿಗಳು ಫುಲ್​ ಖುಷ್​

ಇದರಿಂದ ಬಡಜನ್ರು, ವಿದ್ಯಾರ್ಥಿಗಳು ಪುಲ್ ಖುಷಿಯಾಗಿದ್ದಾರೆ.. ಕ್ಯಾಂಟೀನ್ ಬಂದ ಆಗಿದ್ದಕ್ಕೆ ಸಾಕಷ್ಟು ತೊಂದರೆಯಾಗಿತ್ತು.. 5 ರೂ ಗೆ ಟಿಪೆನ್, 10 ರೂ ಊಟ‌ಸಿಗುತ್ತೆ.. ಹೊರಗಡೆಯಾದ್ರೆ 100 ರೂ ಕೊಡಬೇಕು.. ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿದ್ದು ಸಂತಸವಾಗಿದೆ.. ಇದನ್ನ ಹೀಗೆ ಮುಂದುವರೆಸಬೇಕು ಅಂತಾ ಒತ್ತಾಯ ಮಾಡಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯನವರ ಕನಸಿನ ಯೋಜನೆಯಾಗಿದ್ದ ಇಂದಿರಾ ಕ್ಯಾಂಟೀನ್, ಅವರ ಸರ್ಕಾರ ಇದ್ದಾಗಲೇ ಕ್ಲೋಸ್ ಆಗಿದ್ದು ದುರಂತವೇ ಸರಿ. ಈಗ ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಕ್ಲೋಸ್ ಆಗಿದ್ದ ಕ್ಯಾಂಟೀನ್ ಗಳನ್ನು ರೀ ಓಪನ್ ಮಾಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ