ಚರಂಡಿ ವಿಚಾರಕ್ಕೆ ಜಗಳ: ಹಾಡಹಗಲೇ ಒಳ್ಳಾರಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ

| Updated By: ಆಯೇಷಾ ಬಾನು

Updated on: Nov 13, 2023 | 1:27 PM

11ನೇ ವಾರ್ಡ್​ನ ಪುರಸಭೆ ಸದಸ್ಯನಾಗಿರುವ ನಾಗರಾಜ ನಾಯ್ಕ ಹಾಗೂ ಶಿವಕುಮಾರ್ ಅವರಿಗೆ ಕಳೆದ ಒಂದು ವರ್ಷದಿಂದ ಮನೆ ಮುಂದೆ ಇರುವ ಚರಂಡಿ ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದವು. ಅದೇ ರೀತಿ ಗಲಾಟೆ ನಡೆದಿದ್ದು ಈ ವೇಳೆ ಮಾತಿಗೆಮಾತು ಬೆಳೆದು ನಾಗರಾಜ ಮೇಲೆ ಮಚ್ಚಿನಿಂದ ಶಿವರಾಜ್ ಹಲ್ಲೆ ನಡೆಸಿದ್ದಾರೆ.

ಚರಂಡಿ ವಿಚಾರಕ್ಕೆ ಜಗಳ: ಹಾಡಹಗಲೇ ಒಳ್ಳಾರಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ
ಹಲ್ಲೆ
Follow us on

ಬಳ್ಳಾರಿ, ನ.13: ಹಾಡಹಗಲೇ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿರುವ ಭಯಾನಕ ಘಟನೆ ಬಳ್ಳಾರಿ (Ballari) ಜಿಲ್ಲೆ ತೋರಣಗಲ್ ಪಟ್ಟಣದ ಘೋರ್ಪಡೆ ನಗರದಲ್ಲಿ ನಡೆದಿದೆ. ಪುರಸಭೆ ಸದಸ್ಯ ನಾಗರಾಜ ನಾಯ್ಕ(32) ಮೇಲೆ ಶಿವಕುಮಾರ್​​​​​​ ಎಂಬುವವರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರ ನಡುವೆ ಚರಂಡಿ ವಿಚಾರಚಾಗಿ ದ್ವೇಷ ಇತ್ತು ಅದೇ ದ್ವೇಷದ ಹಿನ್ನೆಲೆ ಹಲ್ಲೆ ನಡೆಸಲಾಗಿದೆ. ತೆಲೆಗೆ, ಬೆನ್ನಿಗೆ, ಕೈಗಳಿಗೆ ಮಚ್ಚಿನಿಂದ ಹಲ್ಲೆ ಆಗಿದೆ.

11ನೇ ವಾರ್ಡ್​ನ ಪುರಸಭೆ ಸದಸ್ಯನಾಗಿರುವ ನಾಗರಾಜ ನಾಯ್ಕ ಹಾಗೂ ಶಿವಕುಮಾರ್ ಅವರಿಗೆ ಕಳೆದ ಒಂದು ವರ್ಷದಿಂದ ಮನೆ ಮುಂದೆ ಇರುವ ಚರಂಡಿ ವಿಚಾರವಾಗಿ ಗಲಾಟೆಗಳು ನಡೆಯುತ್ತಿದ್ದವು. ಅದೇ ರೀತಿ ಗಲಾಟೆ ನಡೆದಿದ್ದು ಈ ವೇಳೆ ಮಾತಿಗೆಮಾತು ಬೆಳೆದು ನಾಗರಾಜ ಮೇಲೆ ಮಚ್ಚಿನಿಂದ ಶಿವರಾಜ್ ಹಲ್ಲೆ ನಡೆಸಿದ್ದಾರೆ. ಗಾಯಾಳು ನಾಗರಾಜ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತೋರಣಗಲ್​​​​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಯ ಭೀಕರತೆ ಬಚ್ಚಿಟ್ಟ ಸ್ನೇಹಿತ

ಇನ್ನು ಘಟನೆ ಸಂಬಂಧ ಹಲ್ಲೆ ವೇಳೆ ಜೊತೆಗಿದ್ದ ಸ್ನೇಹಿತ ರಫೀಕ್ ಪ್ರತಿಕ್ರಿಯೆ ನೀಡಿದ್ದು ಘಟನೆ ಸಂದರ್ಭದ ಭೀಕರತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾಗರಾಜ್ ಮತ್ತು ನಾನು ಇಬ್ಬರು ಸ್ನೇಹಿತರು, ದೀಪಾವಳಿ ಹಬ್ಬಕ್ಕೆ ಬಟ್ಟೆ ತರುವುದಕ್ಕೆ ಅಂತಾ ಹೋರಟಿದ್ವಿ. ಬೈಕ್ ಮೇಲೆ ಇಬ್ಬರು ಹೋಗುತ್ತಿದ್ವಿ, ಆಗ ಶಿವಕುಮಾರ್ ಬೈಕ್ ಅಡ್ಡಗಟ್ಟಿದ. ಯಾಕೆ ಅಡ್ಡ ಗಟ್ಟಿದೆ ಎಂದು ಕೇಳುವ ಮೊದಲೇ ನಾಗರಾಜ್ ಮೇಲೆ ಹಲ್ಲೆ ಮಾಡಿದ. ಗ್ರಾಮಸ್ಥರ ಸಮ್ಮುಖದಲ್ಲಿ ಹಲ್ಲೆ ಮಾಡಿದ, ಬಿಡಿಸಲು ಯಾರು ಮುಂದೆ ಬಂದರೂ ಅವರ ಮೇಲೆ ಮಚ್ಚು ಬೀಸುತಿದ್ದ. ಹೀಗಾಗಿ ನಾಗರಾಜ್ ಮೇಲಿನ ಹಲ್ಲೆ ತಡೆಯಲು ಆಗಲಿಲ್ಲ. ನಾಗರಾಜ್ ಕುಟುಂಬಕ್ಕೆ ಹಾಗೂ ಶಿವಕುಮಾರ್ ಕುಟುಂಬಕ್ಕೆ ಹಳೆಯ ದ್ವೇಷ ಇತ್ತು. ನಿನ್ನೆ ರಾತ್ರಿಯೂ ನಾಗರಾಜ್ ಜೊತೆಗೆ ಶಿವು ಜಗಳ ಮಾಡಿಕೊಂಡಿದ್ದ. ಅದಕ್ಕೆ ಬಂದು ಹಲ್ಲೆ ಮಾಡಿದ್ದಾನೆ, ಶಿವಕುಮಾರ್ ಮನೆ ಮಂದಿ ಹಲ್ಲೆ ಮಾಡುವುದನ್ನು ನಿಂತು ನೋಡುತಿದ್ದರು. ನಾ ಬಿಡಿಸಲು ಮು‌ಂದೆ ಹೋದರೆ ನನ್ನ ಮೇಲೂ ಮಚ್ಚು ಬೀಸಿದ. ಜನರ ಮೇಲೂ ಮಚ್ಚು ಬೀಸಿದ್ದಾನೆ ಎಂದು ರಫೀಕ್ ತಿಳಿಸಿದ್ದಾರೆ.

ವರದಕ್ಷಿಣೆ ಕಿರುಕುಳ, ಕೊಲೆ ಆರೋಪ

ಕೋಲಾರ ನಗರದ ವಿನಾಯಕ ನಗರ ಬಡಾವಣೆಯಲ್ಲಿ ವರದಕ್ಷಿಣೆ ಕಿರುಕುಳ ಮಹಿಳೆಯ ಕೊಲೆ ಮಾಡಲಾಗಿರುವ ಆರೋಪ ಕೇಳಿ ಬಂದಿದೆ. ಸೆಹರ್ ಅಂಜುಂ (23) ಕೊಲೆಯಾದ‌ ಮಹಿಳೆ. ಗಂಡ ಅಫ್ಜಲ್ ಹಾಗೂ ಅತ್ತೆ ತನ್ವೀರ್ ಬೇಗಂ ಮಹಿಳೆಯನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೊಲೆ ಮಾಡಿ ನೇಣು ಹಾಕಿದ್ದಾರೆಂದು ಮೃತ ಸೆಹರ್ ಅಂಜುಂ ಕುಟುಂಬಸ್ಥರು ದೂರು ಸಲ್ಲಿಸಿದ್ದಾರೆ. ಎರಡೂವರೆ ವರ್ಷದ ಹಿಂದೆ ಅಂಜುಂ ಹಾಗೂ ಅಫ್ಜಲ್​ಗೆ ಮದುವೆಯಾಗಿತ್ತು. ವರದಕ್ಷಿಣೆ ಕಿರುಕುಳ ಹಾಗೂ ಮಕ್ಕಳಾಗಿಲ್ಲ ಎಂದು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ ಬಸ್, BMW ಕಾರು ಡಿಕ್ಕಿ: ಏರ್ ಬ್ಯಾಗ್​ನಿಂದ ಬದುಕುಳಿದ ದಂಪತಿ

ಗಾಂಜಾ ಮಾರಾಟ ಮಾಡುತ್ತಿದ್ದವರು ಅರೆಸ್ಟ್

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಮಾಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್, ಹರೀಶ್, ನಿಖಿಲ್ ಬಂಧಿತರು. ಬಂಧಿತರ ಬಳಿ ಇದ್ದ 50 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ಮಾಲೂರು ಸೇರಿದಂತೆ ವಿವಿದೆಡೆ ಮಾರಾಟ ಮಾಡಲು ಗಾಂಜಾ ತಂದಿದ್ದರು.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:42 pm, Mon, 13 November 23