ಖಜಾನೆಯಲ್ಲಿ ಹಣ ಕೊಳೀತಿದೆ: ಆದ್ರೂ ಗಣಿನಾಡಿನಲ್ಲಿ ಅಭಿವೃದ್ಧಿ ಮರೀಚಿಕೆ

|

Updated on: Feb 10, 2020 | 3:02 PM

ಬಳ್ಳಾರಿ: ಗಣಿನಾಡು ಬಳ್ಳಾರಿ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕಾಗಿ ಕಾಯಬೇಕಿಲ್ಲ. ಯಾಕಂದ್ರೆ ಜಿಲ್ಲೆಯ ಡೆವಲಪ್​ಮೆಂಟ್​ಗೆ ಅಂತಲೇ ಹಣದ ಹೊಳೆ ಹರಿದು ಬರ್ತಿದೆ. ಜಿಲ್ಲಾ ಖನಿಜ ನಿಧಿ ಒಂದರಿಂದ್ಲೇ ಸಾವಿರಾರು ಕೋಟಿ ಸಂಗ್ರಹ ಆಗ್ತಿದೆ. ಆದ್ರೆ ಜಿಲ್ಲಾ ಖನಿಜ ನಿಧಿ ಸಕಾಲದಲ್ಲಿ ಖರ್ಚಾಗದೇ ಇರೋದ್ರಿಂದ ಅಷ್ಟೂ ಹಣ ಖಜಾನೆಯಲ್ಲೇ ಕೊಳೆಯುತ್ತಿದೆ. ಹಣ ಬಂದರೂ ಅಭಿವೃದ್ಧಿ ಮರೀಚಿಕೆ..! ಹೌದು, ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ತೀರಾ ಹದಗೆಟ್ಟಿದೆ. ಅದರಲ್ಲೂ ಗಡಿ ಭಾಗದ ಗ್ರಾಮಗಳಲ್ಲಿ ಅಭಿವೃದ್ಧಿ ಅನ್ನೋದೆ ಮರೀಚಿಕೆಯಾಗಿದೆ. ಹಾಗಂತ […]

ಖಜಾನೆಯಲ್ಲಿ ಹಣ ಕೊಳೀತಿದೆ: ಆದ್ರೂ ಗಣಿನಾಡಿನಲ್ಲಿ ಅಭಿವೃದ್ಧಿ ಮರೀಚಿಕೆ
Follow us on

ಬಳ್ಳಾರಿ: ಗಣಿನಾಡು ಬಳ್ಳಾರಿ ಅಭಿವೃದ್ಧಿಗೆ ಸರ್ಕಾರದ ಅನುದಾನಕ್ಕಾಗಿ ಕಾಯಬೇಕಿಲ್ಲ. ಯಾಕಂದ್ರೆ ಜಿಲ್ಲೆಯ ಡೆವಲಪ್​ಮೆಂಟ್​ಗೆ ಅಂತಲೇ ಹಣದ ಹೊಳೆ ಹರಿದು ಬರ್ತಿದೆ. ಜಿಲ್ಲಾ ಖನಿಜ ನಿಧಿ ಒಂದರಿಂದ್ಲೇ ಸಾವಿರಾರು ಕೋಟಿ ಸಂಗ್ರಹ ಆಗ್ತಿದೆ. ಆದ್ರೆ ಜಿಲ್ಲಾ ಖನಿಜ ನಿಧಿ ಸಕಾಲದಲ್ಲಿ ಖರ್ಚಾಗದೇ ಇರೋದ್ರಿಂದ ಅಷ್ಟೂ ಹಣ ಖಜಾನೆಯಲ್ಲೇ ಕೊಳೆಯುತ್ತಿದೆ.

ಹಣ ಬಂದರೂ ಅಭಿವೃದ್ಧಿ ಮರೀಚಿಕೆ..!
ಹೌದು, ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ ತೀರಾ ಹದಗೆಟ್ಟಿದೆ. ಅದರಲ್ಲೂ ಗಡಿ ಭಾಗದ ಗ್ರಾಮಗಳಲ್ಲಿ ಅಭಿವೃದ್ಧಿ ಅನ್ನೋದೆ ಮರೀಚಿಕೆಯಾಗಿದೆ. ಹಾಗಂತ ಇದಕ್ಕೆಲ್ಲಾ ಅನುದಾನದ ಕೊರತೆಯೇ ಕಾರಣವಲ್ಲ. ಸಾವಿರಾರು ಕೋಟಿ ದುಡ್ಡು ಇದ್ರೂ ಅದನ್ನ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿಲ್ಲ.

ಜಿಲ್ಲೆಯಲ್ಲಿನ ಖನಿಜ ನಿಧಿಯಲ್ಲಿ ಬರೋಬ್ಬರಿ 1475 ಕೋಟಿ ಸಂಗ್ರಹವಾಗಿದೆ. ಇದಿಷ್ಟೂ ಹಣ ಕೇವಲ 3 ವರ್ಷದಲ್ಲಿ ಸಂಗ್ರವಾಗಿದ್ದು. ಆದ್ರೆ ಇದನ್ನ ಮಾತ್ರ ಅಧಿಕಾರಿಗಳು ಸಮರ್ಪಕವಾಗಿ ಬಳಸಿಕೊಳ್ತಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಜಿಲ್ಲೆಯಲ್ಲಿ ನಾನಾ ಸಮಸ್ಯೆಗಳು ತಾಂಡವವಾಡುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

3 ವರ್ಷದಲ್ಲಿ ಸಂಗ್ರಹವಾಗಿದ್ದು ಬರೋಬ್ಬರಿ ₹1475 ಕೋಟಿ..!
ಅಂದಹಾಗೆ ₹1475 ಕೋಟಿ ಸಂಗ್ರಹವಾಗಿದ್ದರೂ 194 ಕೋಟಿ ಮಾತ್ರ ಖರ್ಚು ಮಾಡಲಾಗಿದೆಯಂತೆ. ಈ ರೀತಿ ಪ್ರತಿಜಿಲ್ಲೆಯಲ್ಲೂ ಖನಿಜ ನಿಧಿ ಇರುತ್ತೆ. ಖನಿಜ ನಿಧಿಯನ್ನ ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲಸೌಕರ್ಯದ ಅಭಿವೃದ್ಧಿಗೆ ಬಳಸಿಕೊಳ್ಳಬಹುದು. ಆದ್ರೆ ಬಳ್ಳಾರಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅನುದಾನ ಇದ್ದರೂ, ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ಬಳಿ ಪ್ರಶ್ನಿಸಿದ್ರೆ, ಬಳಕೆಯಾಗದ ಹಣವನ್ನು ತ್ವರಿತವಾಗಿ ಅಭಿವೃದ್ಧಿಗೆ ಬಳಸಿಕೊಳ್ಳುವ ಭರವಸೆ ನೀಡುತ್ತಿದ್ದಾರೆ.

ಒಟ್ನಲ್ಲಿ ಗಣಿಗಾರಿಕೆಯಿಂದ ನಾನಾ ಸಮಸ್ಯೆ ಎದುರಿಸುತ್ತಿರುವ ಬಳ್ಳಾರಿ ಜನರಿಗೆ ಅಭಿವೃದ್ಧಿ ಮರೀಚಿಕೆಯಾಗಿದೆ. ಮುಖ್ಯವಾಗಿ ಸರ್ಕಾರಿ ಶಾಲೆಗಳು ಆತಂಕದಲ್ಲಿವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿಯೇ ಕನ್ನಡ ಶಾಲೆಯ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈಗಲಾದರೂ ಜಿಲ್ಲಾ ಖನಿಜ ನಿಧಿಯನ್ನ ಸಮರ್ಪಕವಾಗಿ ಬಳಸಿಕೊಂಡು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಯೋಜನೆ ರೂಪಿಸಬೇಕಿದೆ. ಹಾಗೇ ಈ ಬಗ್ಗೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಗಮನ ಹರಿಸಬೇಕಿದೆ.








Published On - 1:51 pm, Mon, 10 February 20