ನಾನು ಗೂಂಡಾಗಿರಿ ಮಾಡುತ್ತಿದ್ದೆ, ಕಾಪಿ ಹೊಡೆಯುವುದ್ರಲ್ಲಿ ಪಿಎಚ್​ಡಿ: ಆ ದಿನಗಳನ್ನು ಮೆಲುಕು ಹಾಕಿದ ರಾಮುಲು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 10, 2022 | 4:35 PM

ಕಾಪಿ ಹೊಡೆಯುವುದರಲ್ಲಿ ನಾನು ಪಿಹೆಚ್​ಡಿ ಮಾಡಿದ್ದೇನೆ. ನಾನು ಗೂಂಡಾಗಿರಿ ಮಾಡುತ್ತಿದ್ದೆ ಎಂದು ತಮ್ಮ ಶಾಲಾ ಕಾಲೇಜು ದಿನಗಳನ್ನು ಮೆಲುಕು ಹಾಕಿದ ಸಚಿವ ಬಿ. ಶ್ರೀರಾಮುಲು.

ನಾನು ಗೂಂಡಾಗಿರಿ ಮಾಡುತ್ತಿದ್ದೆ, ಕಾಪಿ ಹೊಡೆಯುವುದ್ರಲ್ಲಿ ಪಿಎಚ್​ಡಿ: ಆ ದಿನಗಳನ್ನು ಮೆಲುಕು ಹಾಕಿದ ರಾಮುಲು
ಸಚಿವ ಶ್ರೀರಾಮುಲು
Follow us on

ಬಳ್ಳಾರಿ: ವಿದ್ಯಾರ್ಥಿಯಾಗಿದ್ದಾಗ ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು ಪಿಹೆಚ್​ಡಿ ಮಾಡಿದ್ದೇನೆ. ನಾನು ಗೂಂಡಾಗಿರಿ ಮಾಡುತ್ತಿದ್ದೆ, ಬಹಳ ಜಗಳವಾಡುತ್ತಿದ್ದೆ ಎಂದು ತಮ್ಮ ಶಾಲಾ ಕಾಲೇಜು ದಿನಗಳನ್ನು ಸಚಿವ ಬಿ. ಶ್ರೀರಾಮುಲು (Sriramulu) ನೆನಪು ಮಾಡಿಕೊಂಡರು. ಜಿಲ್ಲೆಯ ಎಸ್.ಜಿ.ಕಾಲೇಜು ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ನನಗೆ ಓದು ತಲೆಗೆ ಹತ್ತಲಿಲ್ಲ, ಆದರೆ ಸಂಸ್ಕಾರ ಮಾತ್ರ ಬಿಡಲಿಲ್ಲ. ನಾನು ಬಾರಿ ಬುದ್ಧಿವಂತನಲ್ಲ, ಲಾಸ್ಟ್​ ಬೆಂಚ್ ಸ್ಟೂಡೆಂಟ್​. ಶಿಕ್ಷಕರು ಪ್ರೀತಿಯಿಂದ ಬೈಯ್ತಿದ್ದರು. 5 ಬಾರಿ ಶಾಸಕ, 4 ಬಾರಿ ಸಚಿವನಾಗಿರುವುದಕ್ಕೆ ವಿವಿ ಸಂಘ ಕಾರಣ. ಸಂಸ್ಕಾರ ಗೊತ್ತಿರದ ದಿನಗಳಲ್ಲಿ ನನಗೆ ಸಂಸ್ಕಾರ ನೀಡಿದ್ದ ಸಂಘ. ಶಿಕ್ಷಕರು ಬಂದಾಗ ಲಾಸ್ಟ್​ ಬೆಂಚ್​ನಲ್ಲಿ ಕುಳಿತು ಅಂಗಿಸುತ್ತಿದ್ದೆವು. ಕನ್ನಡ ಬರಲ್ಲ, ತೆಲುಗು ಬರಲ್ಲ, ಇಂಗ್ಲಿಷ್ ಬರಲ್ಲ ಎಂದು ಹೇಳುತ್ತಿದ್ದರು. ನೀನು ಯಾವ ಶಾಲೆಯಲ್ಲಿ ಕಲಿತಿದ್ದೆ ಎಂದು ಶಿಕ್ಷಕರು ಕೇಳುತ್ತಿದ್ದರು ಎಂದು ಹೇಳಿದರು.

ಬಡವರ ಪರ ನಿಂತು ಜಗಳವಾಡಿ 14-16 ಬಾರಿ ಜೈಲಿಗೆ ಹೋಗಿದ್ದೆ. ನನಗೆ ಬೇಲ್​ ಕೊಡಿಸಲು ನಮ್ಮಪ್ಪ ವಕೀಲ ತಿಪ್ಪಣ್ಣ ಬಳಿ ಹೋಗುತ್ತಿದ್ದರು. ನಿನಗೆ ಎಷ್ಟು ಬಾರಿ ಬೇಲ್​ ಕೊಡಿಸಬೇಕು ಎಂದು ತಿಪ್ಪಣ್ಣ ಹೇಳುತ್ತಿದ್ದರು. ಇದನ್ನೆಲ್ಲ ಬಿಟ್ಟು ನಿಮ್ಮಪ್ಪನ ಜತೆ ಕೆಲಸಕ್ಕೆ ಹೋಗು ಎಂದು ಬುದ್ದಿವಾದ ಹೇಳಿದ್ದರು. ನಾನು ಜೀನ್ಸ್​ಪ್ಯಾಂಟ್ ಹಾಕಿಕೊಂಡು ಹೋದರೆ ಹುಡುಗಿಯರು ನೋಡ್ತಾರೆ. ನಾನು ಹೀಗೆಲ್ಲ ಬೇರೆ ಕಡೆ ಮಾತಾಡಿಲ್ಲ, ನಮ್ಮೂರಿನಲ್ಲಿ ಮಾತನಾಡುತ್ತಿದ್ದೇನೆ. ನಾನು ಮಾತನಾಡುತ್ತಿರುವುದು ತಪ್ಪಾ ಎಂದು ಪ್ರಶ್ನಿಸಿದರು. ಕಲಿಸಿದ ಶಿಕ್ಷಕರು, ವಿದ್ಯಾರ್ಥಿ ಜೀವನವನ್ನು ಶ್ರೀರಾಮುಲು ನೆನಪಿಸಿಕೊಂಡರು.

ಪದ್ಮಾವತಿ ಯಾದವ್ ಕೊಲೆ ಪ್ರಕರಣ ಸಿಬಿಐಗೆ ವಹಿಸುವಂತೆ ಸಿಎಂಗೆ ಪತ್ರ

ಇನ್ನು ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಸಿಎಂ ಹಾಗೂ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು. ನಮ್ಮ ಅಭಿಪ್ರಾಯ ಕಾನೂನು ಬಹಳ ದೊಡ್ಡದು. ಯಾರು ಏನೇ ಆರೋಪ ಮಾಡಲಿ. ನ್ಯಾಯಾಲಯ ಬಹಳ ದೊಡ್ಡದು. ನ್ಯಾಯಾಲಯದ ತೀರ್ಮಾನಕ್ಕೆ ನಾವು ಬದ್ಧ.
ಕಾನೂನು ಪ್ರಕಾರ ಅವರು ಏನಾದ್ರು ಹೋರಾಟ ಮಾಡಲಿ. ರಾಜಕೀಯದ ಆರೋಪಗಳು ಸಹಜ. ಎಷ್ಟು ಜನಪ್ರಿಯ ಆಗ್ತಿತಾರೋ ಅಷ್ಟೇ ಸಮಸ್ಯೆಗಳು ಬರುತ್ತವೆ.

ಇದನ್ನೂ ಓದಿ: ಜನಾರ್ಧನ ರೆಡ್ಡಿಯನ್ನು ಬಿಜೆಪಿಗೆ ವಾಪಸ್ಸು ತರಲು ಎಲ್ಲ ಪ್ರಯತ್ನ ಮಾಡಿರುವೆ, ವರಿಷ್ಠರಿಂದ ಹಸಿರು ಸಿಗ್ನಲ್ ಸಿಗುತ್ತಿಲ್ಲ: ಶ್ರೀರಾಮುಲು

ಕಾಂಗ್ರೆಸ್​ ಮುತ್ಸದಿ ನಾಯಕರು ಬಿಜೆಪಿಗೆ ಬರಲಿದ್ದಾರೆ

ಜನಪ್ರಿಯತೆ ಇಲ್ಲ ಅಂದ್ರೆ ಸಮಸ್ಯೆಗಳು ಇರಲ್ಲ. ಕಾಂಗ್ರೆಸ್​ನಲ್ಲಿ ಸಮಾವೇಶ ನಡೆಯುತ್ತಿವೆ. ಕಲ್ಯಾಣ ಕರ್ನಾಟಕದಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಆದರೆ ಗುಂಪು, ಕುತಂತ್ರಗಳಿಂದ ಸಮಾವೇಶ ನಡೆಯತ್ತಿವೆ. ಕಾಂಗ್ರೆಸ್​ನಲ್ಲಿ ಡಿ.ಕೆ ಶಿವಕುಮಾರ, ಸಿದ್ದರಾಮಯ್ಯ, ಪರಮೇಶ್ವರ, ಖರ್ಗೆ ಗುಂಪಿನ ಮಧ್ಯೆ ಕುತಂತ್ರಗಳು ನಡೆಯುತ್ತಿವೆ. ಕಾಂಗ್ರೆಸ್​ನಲ್ಲಿ 4-5 ಗುಂಪುಗಳ ಮಧ್ಯೆ ಕುರ್ಚಿಗಾಗಿ ಫೈಟ್ ನಡೆಯುತ್ತಿವೆ. ಕಾಂಗ್ರೆಸ್​ನ ಬಹುದೊಡ್ಡ ನಾಯಕರು ಮುಂದೆ ಬಿಜೆಪಿ ಬಾವುಟ ಹಿಡಿಯಲಿದ್ದಾರೆ. ಕಾಂಗ್ರೆಸ್​ ಮುತ್ಸದಿ ನಾಯಕರು ಬಿಜೆಪಿಗೆ ಬರಲಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲೂ ಗುಜರಾತ್ ಮಾಡಲ್ ಬರಲಿದೆ

ಕಾಂಗ್ರೆಸ್ ನಾಯಕರ ಕನಸು ಹಗಲುಕನಸು ಆಗಿದೆ. ಗುಜರಾತ್ ಫಲಿತಾಂಶ ನಂತರ ರಾಜ್ಯದಲ್ಲಿ ಅದೇ ರೀತಿ ಫಲಿತಾಂಶ ಬರಲಿದೆ. ರಾಜ್ಯದಲ್ಲಿ ಗುಜರಾತ್ ಅಭಿವೃದ್ಧಿ ಮಾದರಿ ಬರಲಿದೆ. ಗುಜರಾತ್ ಮಾಡಲ್ ಅಂದ್ರೆ ಇದ್ದವರನ್ನ ತಗೆಯಲ್ಲ. ಹಿರಿಯರನ್ನ ಕೈ ಬಿಡುವ ಬಗ್ಗೆ ಪಕ್ಷದ ನಾಯಕರು ತೀರ್ಮಾನ ಮಾಡಲಿದ್ದಾರೆ. ರೆಡ್ಡಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ನಾನು ಸ್ವಲ್ಪ ಬ್ಯೂಸಿ ಇದ್ದೆ. ಭೇಟಿ ಆಗಿಲ್ಲ. ರೆಡ್ಡಿ ರಾಜಕೀಯ ವಿಚಾರವಾಗಿ ಸಿಎಂ ಗಮನಕ್ಕೆ ತಂದಿರುವೆ. ಸಿಎಂ ಸಹ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದಿದ್ದಾರೆ. ನಾವಿಬ್ಬರೂ ಜೀವಕ್ಕೆ ಜೀವ ಕೊಡುವ ಸ್ನೇಹಿತರು. ಸ್ನೇಹ ಹಾಗೂ ರಾಜಕೀಯವನ್ನ ಜೊತೆ ಜೊತೆಗೆ ತಗೆದುಕೊಂಡು ಹೋಗಬೇಕಾಗಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.