ವಿಜಯನಗರ, ಸೆ.20: ಬೆಂಗಳೂರಿನಿಂದ ರಾಜಸ್ಥಾನದತ್ತ ಹೊರಟಿದ್ದ ಲಾರಿಯೊಂದು ವಾಕಿಂಗ್ ಮಾಡುತ್ತಿದ್ದ ಮೂವರ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ. ಆಲೂರಿನ ಸಿದ್ದಲಿಂಗಯ್ಯ(39) ಹಾಗೂ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ದೇವಸಮುದ್ರ ಗ್ರಾಮದ ದೇವಸಮುದ್ರದ ಕೊಟ್ರಯ್ಯ(26) ಮೃತ ರ್ದುದೈವಿಗಳು. ಗಾಯಗೊಂಡ ಮತ್ತೊಬ್ಬ ಪಾದಚಾರಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ: ಶ್ರೀನಿವಾಸಪುರ ತಾಲೂಕಿನ ಹಕ್ಕಿಪಿಕ್ಕಿ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಕೊನೆಯುಸಿರೆಳೆದಿದ್ದಾರೆ. ಆಂಧ್ರಪ್ರದೇಶದ ಚೀಕಲಬೈಲು ಗ್ರಾಮದ ನಿವಾಸಿ ಗುಣಶೇಖರ್(28) ಮೃತರು. ಬೈಕ್ ಸವಾರ ರಾಯಲ್ಪಾಡುನಿಂದ ಆಂಧ್ರಕ್ಕೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ಸವಾರನ ರುಂಡ ಮುಂಡ ಬೇರೆಯಾಗಿದೆ. ಈ ಕುರಿತು ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ರಾಮನಗರ: ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಒಂದೇ ಕುಟುಂಬದ ಐವರು ದುರ್ಮರಣ
ಬೆಂಗಳೂರು: ಅಪಘಾತ ಔಟರ್ರಿಂಗ್ ರಸ್ತೆಯಲ್ಲಿ 10 ಚಕ್ರದ ಲಾರಿ ನಿಯಂತ್ರಣ ತಪ್ಪಿ ಮೆಟ್ರೋ ಕಾಮಗಾರಿ ಕಾಂಪೌಂಡ್ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕೆಲಕಾಲ ಕಿಲೋಮೀಟರ್ವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕೂಡಲೇ ಸಂಚಾರಿ ಪೊಲೀಸರು ಜೆಸಿಬಿ ಮೂಲಕ ಲಾರಿ ತೆರವು ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Fri, 20 September 24