ಕನ್ನಡ ವಿವಿಯ ಪ್ರತಿಷ್ಠಿತ ನಾಡೋಜ ಗೌರವ ಪದವಿ ವಿವಾದ: ತಮ್ಮ ಹೆಸರಿನ ಮುಂದೆ ನಾಡೋಜ ಪದ ಬಳಸದಂತೆ ನಿಯಮ
ಪಠ್ಯವಿವಾದ ಬೆನ್ನಲ್ಲೇ ಇದೀಗ ಗೌರವ ಪದವಿ ಬಳಕೆ ವಿವಾದಕ್ಕೆ ಹಂಪಿ ಕನ್ನಡ ವಿವಿ ಕಿಡಿ ಹಚ್ಚಿದೆ. ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿ ವಿವಾದ
ವಿಜಯನಗರ: ಪಠ್ಯಪುಸ್ತಕ ವಿವಾದ (Textbook) ಬೆನ್ನಲ್ಲೇ ಇದೀಗ ಗೌರವ ನಾಡೋಜ (Nadoja Award) ಪದವಿ ಉಪಾದಿ ವಿವಾದ ಶುರುವಾದಂತ್ತಾಗಿದೆ. ಕನ್ನಡ ವಿಶ್ವವಿದ್ಯಾಲಯ (Hampi Kannada University) ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ತಮ್ಮ ಹೆಸರಿನ ಮುಂದೆ ಈ ಉಪಾದಿಯನ್ನು ಬಳಸದಂತೆ ನಿಯಮ ಮಾಡಿದ್ದು, ಈ ಮೂಲಕ ನಾಡೋಜ ಪ್ರಶಸ್ತಿ ವಾಪಸ್ಸಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಂದಿ ಹಾಡಿತೇ ಎನ್ನುವ ಪ್ರಶ್ನೆಗಳು ಉಂಟಾಗಿವೆ. ಹಂಪಿ ವಿವಿಯಿಂದ ನಾಡೋಜ ಗೌರವಕ್ಕೆ ಪಾತ್ರರಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಮಹೇಶ್ ಜೋಶಿ ಈ ಬಗ್ಗೆ ಹಂಪಿ ಕನ್ನಡ ವಿವಿಗೆ ಉಪಾದಿ ಹೆಸರಿನ ಹಿಂದೆ ಬಳಸಿಕೊಳ್ಳಬಹುದೇ ಎಂದು ಪತ್ರ ಬರೆದಿದ್ದರು. ಈ ಬಗ್ಗೆ ಸಮಗ್ರ ಚರ್ಚಿಸಿ ನಾಡೋಜ ಹೆಸರು ಬಳಸದಂತೆ ಆದೇಶಿಸಿದೆ.
ಇದನ್ನೂ ಓದಿ: Moto E32s: ಬಜೆಟ್ ಪ್ರಿಯರನ್ನು ದಂಗಾಗಿಸಿದ ಮೋಟೋ E32s ಫೋನ್ ಮಾರಾಟ ಇಂದಿನಿಂದ ಆರಂಭ
ವಿಶ್ವವಿದ್ಯಾಲಯದ ಮಹತ್ವದ ನಿರ್ಣಯದ ಬೆನ್ನಲ್ಲೇ ಪುರಸ್ಕೃತರು ಅಸಮಾಧಾನಗೊಂಡಿದ್ದಾರೆ. ಗೌರವ ಪದವಿ ಮರಳಿಸುವುದರ ಕುರಿತು ಚರ್ಚಿಸಲು ನಿರ್ಧಾರ ಮಾಡಿದ್ದು, ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿ ಸಭೆ ನಡೆದಿದೆ. ಸಮಿತಿ ಸಭೆಯ ನಿರ್ಣಯಕ್ಕೆ ವಿವಿ ಸಿಂಡಿಕೇಟ್ ಸಭೆ ಒಪ್ಪಿಗೆ ನೀಡಿದ್ದರು. ಡಾಕ್ಟರೇಟ್ ಬದಲಿಗೆ ನಾಡೋಜ ಗೌರವ ನೀಡುವುದು ವಾಡಿಕೆ. ಸಾಮಾನ್ಯವಾಗಿ ಎಲ್ಲ ವಿವಿಗಳು ಪ್ರತಿಷ್ಠಿತರಿಗೆ ಗೌರವ ನೀಡುತ್ತವೆ. ಹಂಪಿ ವಿವಿ ಪ್ರತಿವರ್ಷ ನಾಡೋಜ ಪದವಿ ನೀಡಿ ಗೌರವಿಸುತ್ತಿತ್ತು.
ವಿವಾದವೇನು?
ಗಣ್ಯರಿಗೆ ಅಥವಾ ಸಾಹಿತಿಗಳಿಗೆ ಗೌರವ ಡಾಕ್ಟರೇಟ್ ಅಥವಾ ನಾಡೋಜ ಪದವಿಯನ್ನು ನೀಡಿದಾಗ ಅದನ್ನು ಅವರು ತಮ್ಮ ಹೆಸರಿನ ಹಿಂದೆ ಉಪಾದಿಯಾಗಿ ಬಳಸಿಕೊಳ್ಳುವುದು ವಾಡಿಕೆ. ಆದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿ ಪುರಸ್ಕೃತರು ತಮ್ಮ ಹೆಸರಿನ ಹಿಂದೆ ಉಪಾದಿ ಬಳಸದಂತೆ ನಿಯಮ ಹೊರಡಿಸಿದೆ.
ಡಾಕ್ಟರೇಟ್ ಬದಲಿಗೆ ನಾಡೋಜ:
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ಆದರೆ, ಹಂಪಿ ಕನ್ನಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಬದಲಿಗೆ ವಿಶೇಷವಾಗಿ ಪ್ರತಿವರ್ಷ ನುಡಿಹಬ್ಬದ ವೇಳೆ ಗಣ್ಯರಿಗೆ ನಾಡೋಜ ಪದವಿ ನೀಡಿ ಗೌರವಿಸುತ್ತದೆ. ಈವರೆಗೂ ನಡೆದ 30 ನುಡಿಹಬ್ಬಗಳಲ್ಲಿ 92 ಕ್ಕೂ ಹೆಚ್ಚು ಮಹಾನಿಯರಿಗೆ ನಾಡೋಜ ಗೌರವ ಪದವಿ ನೀಡಿ ಗೌರವಿಸಲಾಗಿದೆ. ಇದೀಗ ಅದರ ಬಳಕೆ ವಿಚಾರದಲ್ಲಿ ಸಾಕಷ್ಟು ಪರವಿರೋಧ ಚರ್ಚೆಯಾಗುತ್ತಿವೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.