ನಾವು ಹಿಂದೂ ವಾದಿಗಳು, ಆದ್ರೆ ಯಾವ ಜಾತಿಗೂ ಅನ್ಯಾಯ ಮಾಡಲ್ಲ; ಸಚಿವ ಕೆ.ಎಸ್.ಈಶ್ವರಪ್ಪ
ರಾಜ್ಯದಲ್ಲಿ 28 ಸಾವಿರ ಕೆರೆಗಳಿವೆ. ಆ ಎಲ್ಲಾ ಕೆರೆಗಳನ್ನೂ ಅಭಿವೃದ್ಧಿ ಮಾಡುತ್ತೇವೆ. ಒಂದೂವರೆ ವರ್ಷದ ಒಳಗೆ ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿ ಮಾಡುತ್ತೇವೆ. ಕೆಲವೆಡೆ ಒತ್ತುವರಿಯಾಗಿದೆ.
ಬಳ್ಳಾರಿ: ನರೇಗಾ ಕಾಮಗಾರಿಯ ಎಲ್ಲಾ ಹಣವನ್ನೂ ಕೇಂದ್ರ ಸರ್ಕಾರ (Central Government) ಬಿಡುಗಡೆ ಮಾಡಿದೆ. ಇದು ಸಂತಸದ ವಿಷಯ ಎಂದು ಬಳ್ಳಾರಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa), ಸೆ.7ಕ್ಕೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರನ್ನು ಭೇಟಿ ಮಾಡಿದ್ದೆ. ಅವರ ಬಳಿ ನರೇಗಾ ಬಾಕಿ ಬಿಡುಗಡೆಗೆ ಮನವಿ ಮಾಡಿದ್ದೆ. ಎಲ್ಲಾ ಬಾಕಿ ಹಣ ಕೊಟ್ಟು 117 ಕೋಟಿ ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ 28 ಸಾವಿರ ಕೆರೆಗಳಿವೆ. ಆ ಎಲ್ಲಾ ಕೆರೆಗಳನ್ನೂ ಅಭಿವೃದ್ಧಿ ಮಾಡುತ್ತೇವೆ. ಒಂದೂವರೆ ವರ್ಷದ ಒಳಗೆ ರಾಜ್ಯದ ಎಲ್ಲ ಕೆರೆಗಳ ಅಭಿವೃದ್ಧಿ ಮಾಡುತ್ತೇವೆ. ಕೆಲವೆಡೆ ಒತ್ತುವರಿಯಾಗಿದೆ. ಒತ್ತುವರಿಯನ್ನು ಬಿಡಿ ಅಂತ ಮನವಿ ಮಾಡುತ್ತೇವೆ. ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದರೂ ಒತ್ತುವರಿ ಬಿಡಿಸಿಕೊಳ್ಳುತ್ತೇವೆ. ಕಲ್ಯಾಣಿಗಳು ಗೋಕಟ್ಟೆಗಳ ಅಭಿವೃದ್ಧಿ ಮಾಡುತ್ತೇವೆ. ಅಂತರ್ಜಲ ಹೆಚ್ಚು ಮಾಡಬೇಕು ಅಂತ ರವಿಶಂಕರ್ ಗುರೂಜಿ ಸಹಕಾರ ನೀಡುತ್ತಿದ್ದಾರೆ. ಅವರ ಮೂಲಕವೂ ಅಭಿವೃದ್ಧಿ ಮಾಡುತ್ತೇವೆ ಎಂದು ಈಶ್ವರಪ್ಪ ಭರವಸೆ ನೀಡಿದ್ದಾರೆ.
ಇನ್ನು ಜಾತಿ ಗಣತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ನಾನು ಸತ್ಯ ಹೇಳಿದರೆ ಸಿಟ್ಟು ಬರಬಹುದು. ಯಾವುದೇ ಕಾರಣಕ್ಕೂ ರಾಜಕಾರಣ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ. ನಾನು ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗ ಜಾತಿಗಣತಿ ವರದಿ ಯಾವಾಗ ಮಂಡಿಸ್ತೀರಿ ಎಂದು ಪ್ರಶ್ನೆ ಮಾಡಿದ್ದೆ. ಚುನಾವಣೆ ಬರುವುದರೊಳಗೆ ಜಾತಿ ಗಣತಿ ವರದಿ ಮಂಡಿಸ್ತೀನಿ ಅಂದಿದ್ದರು. ನಾವೂ ನಂಬಿದ್ದೆವು. ಈಗ ಅವರೇ ನಮ್ಮ ಸರ್ಕಾರ ಇದ್ದಾಗ ಕಾಂತರಾಜು ಅವರು ರಿಪೋರ್ಟ್ ಕೊಡಲಿಲ್ಲ ಅಂತ ಹೇಳುತ್ತಿದ್ದಾರೆ. ಇದನ್ನು ನಂಬಬೇಕೋ, ಬಿಡಬೇಕೋ ಗೊತ್ತಿಲ್ಲ ಎಂದು ಸಚಿವ ಈಶ್ವರಪ್ಪ ಅಭಿಪ್ರಾಯಪಟ್ಟರು.
ಮುಂದೆ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಬಂತು. ಸಿದ್ದರಾಮಯ್ಯ, ಚುನಾವಣೆ ಬರುವುದರೊಳಗೆ ವರದಿ ಮಂಡನೆ ಮಾಡುತ್ತೇವೆ ಅಂದಿದ್ದರು. ಆದರೆ ಈಗ ಸರಿಯಾದ ಸಮಯಕ್ಕೆ ಕಾಂತರಾಜ್ ರಿಪೋರ್ಟ್ ಕೊಡಲಿಲ್ಲ ಅಂತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿಯೂ ಬಿಡುಗಡೆ ಮಾಡಲಿಲ್ಲ. ಕೇಳಿದರೆ ಕುಮಾರಸ್ವಾಮಿ ಬೇಡ ಅಂದ್ರು ಅಂತಾರೆ. ಕುಮಾರಸ್ವಾಮಿನ ಕೇಳಿದರೆ ಸಿದ್ದರಾಮಯ್ಯ ನನ್ನನ್ನು ಕೇಳಿಯೇ ಇಲ್ಲ ಅಂತಾರೆ. ಕಾಂಗ್ರೆಸ್ಗೆ ವರದಿ ಮೇಲೆ ನಂಬಿಕೆ ಇದ್ದಿದ್ದರೆ ಅನ್ಯಾಯ ಮಾಡುತ್ತಿರಲಿಲ್ಲ ಎಂದು ಈಶ್ವರಪ್ಪ ಹೇಳಿದರು.
ಅಧಿಕಾರಕ್ಕಾಗಿ ಜಾತಿಗಳ ಹೆಸರು ಬಳಸುತ್ತಿದ್ದಾರೆ. ಆದರೆ ಸೋಲಿನ ಭೀತಿಯಿಂದ ವರದಿ ಬಿಡುಗಡೆ ಮಾಡಲಿಲ್ಲ. ಈಗ ಬಿಜೆಪಿ ದಲಿತ ವಿರೋಧಿ ಎನ್ನುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಯಾರು ಜಾತಿ ಗಣತಿ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ. ನಾವು ಹಿಂದೂ ವಾದಿಗಳು, ಆದರೆ ಯಾವ ಜಾತಿಗೂ ಅನ್ಯಾಯ ಮಾಡಲ್ಲ. 180 ಕೋಟಿ ವೆಚ್ಚ ಮಾಡಿದ್ದಾರೆ. ಆದರೆ ಈವರೆಗೂ ವರದಿ ಸಿದ್ಧವಾಗಿಲ್ಲ. ಅದಕ್ಕೆ ಸಿದ್ದರಾಮಯ್ಯ ಕಾರಣ. ವರದಿಯನ್ನು ಸಿದ್ದರಾಮಯ್ಯ ಸಾಯಿಸಿದ್ದಾರೆ, ಡಿ.ಕೆ.ಶಿವಕುಮಾರ್ ಹೂತಾಕಿದ್ದಾರೆ ಎಂದರು.
ಇದನ್ನೂ ಓದಿ
Gujarat Politics: ಗುಜರಾತ್ ಮುಂದಿನ ಸಿಎಂ ಆಯ್ಕೆಗೆ ಶಾಸಕಾಂಗ ಪಕ್ಷದ ಸಭೆ; ಹೆಚ್ಚಿದ ಕುತೂಹಲ
(KS Eshwarappa said that we Hindus are not doing injustice to any caste in bellary)