ಎಲ್ಲ ವಿಚಾರಕ್ಕೂ ಪ್ರತಿಕ್ರಿಯೆ ಕೊಡ್ತಾರೆ, ಈಗ ಯಾಕೆ ಮೌನವಾದ್ರು? ಡಿಕೆ ಶಿವಕುಮಾರ್ ವಿರುದ್ಧ ಕೆಎಸ್​ ಈಶ್ವರಪ್ಪ ವಾಗ್ದಾಳಿ

| Updated By: ಆಯೇಷಾ ಬಾನು

Updated on: Feb 01, 2023 | 2:01 PM

ಎಲ್ಲ ವಿಚಾರಗಳಿಗೂ ಬೇಗನೆ ರಿಯಾಕ್ಷನ್ ನೀಡುವ ಡಿಕೆ ಶಿವಕುಮಾರ್ ಈಗ ಯಾಕೆ ಮೌನವಾದ್ರು? ಡಿಕೆಶಿ ಕಾಂಗ್ರೆಸ್ ನ ಎಲ್ಲಾ ನಾಯಕರ ಬಾಯಿ ಮುಚ್ಚಿಸಿದ್ದಾರೆ.

ಎಲ್ಲ ವಿಚಾರಕ್ಕೂ ಪ್ರತಿಕ್ರಿಯೆ ಕೊಡ್ತಾರೆ, ಈಗ ಯಾಕೆ ಮೌನವಾದ್ರು? ಡಿಕೆ ಶಿವಕುಮಾರ್ ವಿರುದ್ಧ ಕೆಎಸ್​ ಈಶ್ವರಪ್ಪ ವಾಗ್ದಾಳಿ
ಕೆಎಸ್ ಈಶ್ವರಪ್ಪ
Follow us on

ಬಳ್ಳಾರಿ: ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಆಡಿಯೋ ಬಾಂಬ್ ವಿಚಾರಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್​​ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. ಎಲ್ಲ ವಿಚಾರಕ್ಕೂ ಪ್ರಿತಿಕ್ರಿಯೆ ಕೊಡ್ತಾರೆ, ಈಗ ಯಾಕೆ ಮೌನವಾದ್ರು? ಡಿ.ಕೆ.ಶಿವಕುಮಾರ್ ಕಾಂಗ್ರೆಸ್​​​ ನಾಯಕರ ಬಾಯಿ ಮುಚ್ಚಿಸಿದ್ದಾರೆ ಎಂದು ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.

ಎಲ್ಲ ವಿಚಾರಗಳಿಗೂ ಬೇಗನೆ ರಿಯಾಕ್ಷನ್ ನೀಡುವ ಡಿಕೆ ಶಿವಕುಮಾರ್ ಈಗ ಯಾಕೆ ಮೌನವಾದ್ರು? ಡಿಕೆಶಿ ಕಾಂಗ್ರೆಸ್ ನ ಎಲ್ಲಾ ನಾಯಕರ ಬಾಯಿ ಮುಚ್ಚಿಸಿದ್ದಾರೆ. ಸಿಬಿಐ ತನಿಖೆ ಆಗಬೇಕು ಅಂತಾ ಜಾರಕಿಹೊಳಿ ಅಪೇಕ್ಷೆ ಇದೆ, ಇದನ್ನೆಲ್ಲಾ ಕೇಂದ್ರದ ನಾಯಕರು ಗಮನಿಸುತ್ತಿದ್ದಾರೆ. ನೂರು ರೂಪಾಯಿ ತೆಗೆದುಕೊಂಡು ಬ್ಲೂ ಫಿಲ್ಮ್ ತೋರಿಸ್ತಾ ಇದ್ದ ವ್ಯಕ್ತಿ ಇವತ್ತು ಸಾವಿರಾರು ಕೋಟಿ ಒಡೆಯ ಆಗಿದ್ದಾರೆ ಅಂತಾ ಜಾರಕಿಹೊಳಿ ಹೇಳಿದ್ದಾರೆ. ಆ ಆಸ್ತಿ ಎಲ್ಲಿಂದ ಬಂತು? ಬೇರೆ ಅವರ ಬಗ್ಗೆ ಟೀಕೆ ಮಾಡ್ತಿದ್ದ ಡಿಕೆಶಿ ಯಾಕೆ ಈಗ ಬಾಯಿ ಬಿಡ್ತಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ. ಹಾಗೂ ಡಿಕೆ ಶಿವಕುಮಾರ್ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಪರ ಮತ ಬೇಟೆಗಿಳಿದ ಕಾಂಗ್ರೆಸ್ ನಾಯಕರು, ಮೊದಲು ಒಕ್ಕಲಿಗ ಸಮುದಾಯಕ್ಕೆ ಗಾಳ

ಕಾಂಗ್ರೆಸ್ ಪಕ್ಷದ ಮರ್ಯಾದೆ ಹೋಗ್ತಾ ಇದೆ, ಸಿದ್ದರಾಮಯ್ಯ ಹಾಗೂ ಡಿಕೆಶಿ ಕಟ್ಟಿದ ಪಾರ್ಟಿ ಅಲ್ಲ ಕಾಂಗ್ರೆಸ್. ಸ್ವಾತಂತ್ರ್ಯಕ್ಕಾಗಿ ಹೊರಾಟ ಮಾಡಿದ ಮಹಾಪುರುಷರು ಕಟ್ಟಿದ ಪಾರ್ಟಿ ಕಾಂಗ್ರೆಸ್. ಆ ಕಾಂಗ್ರೆಸ್ ಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಆಕಸ್ಮಿಕವಾಗಿ ನಾಯಕರಾಗಿದ್ದಾರೆ ಅಷ್ಟೇ. ಆ ಕಾಂಗ್ರೆಸ್ ಪಕ್ಷದ ಮರ್ಯಾದೆ ಉಳಿಯಬೇಕಾದ್ರೆ ಡಿಕೆಶಿ ಬಾಯಿ ಬಿಡಬೇಕು ಈಗ. ಈ ಬಗ್ಗೆ ಸ್ಪಷ್ಟನೆ ಕೊಟ್ಟು ತನಿಖೆ ಆಗಲಿ ಅಂತಾ ಹೇಳಿಕೆ ಕೊಡಬೇಕು ಇಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದರು.

ಸಿದ್ದರಾಮಯ್ಯ ವಿರುದ್ಧವೂ ಕೆ.ಎಸ್. ಈಶ್ವರಪ್ಪ ಗರಂ

ಸಿದ್ದರಾಮಯ್ಯ ಕಣ್ ಸನ್ನೆ ಮಾಡಿದ್ರೆ ನಾನು ಕೆಲಸ ಮಾಡಿ ಕೊಟ್ಟಿದ್ದೇನೆ, ನಾನು ಕಣ್ ಸನ್ನೆ ಮಡಿದ್ರೆ ಅವರು ಕೆಲಸ ಮಾಡಿಕೊಡ್ತಾರೆ. ನರೇಂದ್ರ ಮೋದಿಗೆ ಏನಾದ್ರು ಬೈದ್ರೆ ತಡ್ಕೊಳಲ್ಲ ನಮ್ ಬ್ಲಡ್. ರಾಜ್ಯಾಧ್ಯಕ್ಷ ಕಟೀಲ್ ಗೆ ಯಡಿಯೂರಪ್ಪನವರಿಗೆ ಏಕೆ ವಚನ ಬಳಿಸಿದ್ರೆ ನಾವ್ ಸುಮ್ನೆ ಇರಲ್ಲ. ಬಫೂನ್ ಎನ್ನುವ ನೂರು ಪದಗಳು ನಮಗೆ ಬರುತ್ತವೆ. ಹಿಂಗೆ ಮುಂದುವರೆದ್ರೆ ಕಾಂಗ್ರೆಸ್ ಸಂಸ್ಕೃತಿಯೂ ನಮಗೆ ಗೊತ್ತು ಎಂದು ಬಳ್ಳಾರಿಯಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ