ತಮ್ಮನಿಗೋಸ್ಕರ ಜೈಲಿನಲ್ಲಿದ್ದೆ, ಆಗ ನನ್ನ ಋಣ ತೀರಿಸಲು ಆಗಲ್ಲ ಎಂದಿದ್ರು ನಾದಿನಿ ಅರುಣಾ: ಪಕ್ಷೇತರವಾಗಿಯಾದ್ರೂ ಕಣಕ್ಕಿಳಿಯುವೆ -ಸೋಮಶೇಖರ್​​​ ರೆಡ್ಡಿ ಘೋಷಣೆ

ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮೀ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಸದ್ಯ ಈ ಬಗ್ಗೆ ಜನಾರ್ದನ ರೆಡ್ಡಿ ಅವರ ಅಣ್ಣ ಬಿಜೆಪಿ ಶಾಸಕ ಸೋಮಶೇಖರ್​​​ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮನಿಗೋಸ್ಕರ ಜೈಲಿನಲ್ಲಿದ್ದೆ, ಆಗ ನನ್ನ ಋಣ ತೀರಿಸಲು ಆಗಲ್ಲ ಎಂದಿದ್ರು ನಾದಿನಿ ಅರುಣಾ: ಪಕ್ಷೇತರವಾಗಿಯಾದ್ರೂ ಕಣಕ್ಕಿಳಿಯುವೆ -ಸೋಮಶೇಖರ್​​​ ರೆಡ್ಡಿ ಘೋಷಣೆ
ಸೋಮಶೇಖರ್​​​ ರೆಡ್ಡಿ
Follow us
TV9 Web
| Updated By: ಆಯೇಷಾ ಬಾನು

Updated on:Feb 02, 2023 | 10:54 AM

ಬಳ್ಳಾರಿ: ಸ್ವತಃ ಪಕ್ಷ ಕಟ್ಟಿಕೊಂಡು ಚುನಾವಣೆಗೆ ಇಳಿದಿರುವ ಮಾಜಿ ಸಚಿವ ಜಿ ಜನಾರ್ದನ ರೆಡ್ಡಿ( Janardhan Reddy) ಅವರು ತಮ್ಮ ಅಣ್ಣನ ವಿರುದ್ಧವೇ ತಮ್ಮ ಪತ್ನಿಯನ್ನು ಸ್ಪರ್ಧಿಯಾಗಿ ಇಳಿಸಿದ್ದಾರೆ. ಇದು ಬಳ್ಳಾರಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರಿ ಸಂಚನ ಮೂಡಿಸಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾಗಿ ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಪತ್ನಿ ಅರುಣಾ ಲಕ್ಷ್ಮೀ(Aruna Lakshmi) ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಘೋಷಿಸಿದ್ದಾರೆ. ಸದ್ಯ ಈ ಬಗ್ಗೆ ಜನಾರ್ದನ ರೆಡ್ಡಿ ಅವರ ಅಣ್ಣ ಬಿಜೆಪಿ ಶಾಸಕ ಸೋಮಶೇಖರ್​​​ ರೆಡ್ಡಿ(Somashekar Reddy) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾದಿನಿ -ಭಾವನ ಮಧ್ಯೆ ಸ್ಪರ್ಧೆ ರಸವತ್ತಾಗಿರುತ್ತದೆ. ಒಳ್ಳೆಯ ಫೈಟ್ ಇದ್ದೇ ಇರುತ್ತದೆ. ನನ್ನ ಜೀವನದಲ್ಲಿ ತಟಸ್ಥ ಅನ್ನೋ ಪದವೇ ಇಲ್ಲ. ಜನಾರ್ದನ ರೆಡ್ಡಿಗೆ ನನ್ನ ಹಾಗೆಯೇ ತ್ಯಾಗದ ಮನೋಭಾವ ಇಲ್ಲ. ಬಳ್ಳಾರಿಯಲ್ಲಿ ನಾನು ನೂರಕ್ಕೆ ನೂರರಷ್ಟು ಬಿಜೆಪಿಯಿಂದ ಸ್ಪರ್ಧಿಸುವೆ. ಏಕೆಂದರೆ ನಗರದ ಅಭಿವೃದ್ಧಿ ನನ್ನ ಕನಸು. ಕೆಲ ಕಾರ್ಯಕರ್ತರು ಹಣದ ಆಸೆಗೆ ಹೊಸ ಪಕ್ಷಕ್ಕೆ ಹೋಗಬಹುದು. ನಮ್ಮ ಕಾರ್ಯಕರ್ತರು ನಮ್ಮ ಜೊತೆಗೆ ಇರುತ್ತಾರೆ. ಅರುಣಾ ಲಕ್ಷ್ಮೀ ಸ್ಪರ್ಧೆಯಿಂದ ನಮಗೆ ನಷ್ಟವಿಲ್ಲ, ಕಾಂಗ್ರೆಸ್​​​​ಗೆ ನಷ್ಟ. ಸಹೋದರನಿಗಾಗಿ 6 ತಿಂಗಳು ಜೈಲಿನಲ್ಲಿದ್ದೆ. ಆಗ ಅರುಣಾ ಲಕ್ಷ್ಮೀ ನನ್ನ ಋಣ ತೀರಿಸಲು ಆಗಲ್ಲ ಎಂದು ಹೇಳಿದ್ರು. ಅರುಣಾ ಲಕ್ಷ್ಮೀ ಸ್ಪರ್ಧೆ ತಪ್ಪು ಅನ್ನೋದು ಜನರೇ ಹೇಳುತ್ತಾರೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ಶಾಸಕ ಸೋಮಶೇಖರ್​​​ ರೆಡ್ಡಿ ಅಸಮಾಧಾನ ಹೊರ ಹಾಕಿದ್ದಾರೆ.

ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅನುಭವಿಸಿದ ಸಂಕಷ್ಟವನ್ನು, ಗಾಲಿ ರೆಡ್ಡಿಗಾರಿ ಅನುಭವಿಸಿದ್ದು, ಜಗನ್ ಮೋಹನ್ ವೈಎಸ್ ಆರ್ ಪಕ್ಷದಂತೆ ಇದೀಗ ಕೆಆರ್ ಪಿಪಿ ಪಕ್ಷವನ್ನು ರೆಡ್ಡಿ ಸ್ಥಾಪಿಸಿದ್ದಾರೆ. ಪ್ರಾದೇಶಿಕ ಪಕ್ಷ ಸ್ಥಾಪಿಸೋ ಮೂಲಕ ರಾಷ್ಟ್ರೀಯ ಪಕ್ಷಗಳ ವಿರುದ್ಧ ರಾಜಕೀಯ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅಂದು ಜಗನ್ ಮೋಹನ್ ರೆಡ್ಡಿಗೆ ಅವರ ತಾಯಿ ಹಾಗೂ ತಂಗಿ ತುಂಬಿದ ಧೈರ್ಯವನ್ನು ಇದೀಗ ಜನಾರ್ಧನರೆಡ್ಡಿಗೆ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಮಗಳು ಬ್ರಹ್ಮಿಣಿ ಧೈರ್ಯ ತುಂಬಿದ್ದು, ಈಗಾಗಲೇ ಪತ್ನಿಯನ್ನು ಸಹೋದರ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಬಳ್ಳಾರಿಯಲ್ಲಿ ಕಣ್ಣಕ್ಕೀಳಿಸಿ ತೊಡೆ ತಟ್ಟಿದ್ದಾರೆ.ಅಲ್ಲಿಗೆ ರಾಜಕೀಯದಲ್ಲಿ ತಾವೆಷ್ಟು ಸಿರಿಯಸ್ ಆಗಿದ್ದಿನಿ ಎನ್ನೋದನ್ನ ಹೇಳಿದ್ದಾರೆ. ಇದೀಗ ಪುತ್ರಿ ಬ್ರಹ್ಮಿಣಿಯನ್ನು ಕಣಕ್ಕೀಳಿಸಲು ಅಖಾಡ ಸಿದ್ದಗೊಳಿಸುತ್ತಿದ್ದಾರೆ. ಈಗಾಗಲೇ ಹೊಸಪೇಟೆ, ರಾಯಚೂರು, ಗದಗ, ವಿಜಯಪುರ ಸುತ್ತಮುತ್ತಲ ಹಲವು ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ವೇ ಕಾರ್ಯ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಗೆಲ್ಲುವ ಯಾವುದಾದರೂ ಒಂದು ಕ್ಷೇತ್ರದಲ್ಲಿ ಮಗಳನ್ನು ಅಖಾಡಕ್ಕೀಳಿಸುವ ಸಾಧ್ಯತೆಗಳಿದ್ದು, ಬ್ರಹ್ಮಿಣಿ ಕೂಡ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವವುದು ರೆಡ್ಡಿ ಆಪ್ತವಲಯದ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಒಟ್ಟಾರೆ 30 ರಿಂದ 40 ಸೀಟು ಗೆಲ್ಲುವ ನಿರೀಕ್ಷೆಯನ್ನು ಜನಾರ್ಧನರೆಡ್ಡಿ ಅವರು ಹೊಂದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:25 am, Thu, 2 February 23

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ