ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಲೋಕಾಯುಕ್ತ ದಾಳಿ; 6 ಭ್ರಷ್ಟ ಅಧಿಕಾರಿಗಳು ಖೆಡ್ಡಾಕ್ಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 25, 2024 | 7:53 PM

ಬಳ್ಳಾರಿ(Ballari) ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಲೋಕಾಯುಕ್ತ(Lokayukta) ದಾಳಿ ನಡೆಸಿದ್ದು, ಲಕ್ಷ ಲಕ್ಷ ಹಣ ಲಂಚ ಸ್ವೀಕರಿಸುತ್ತಿದ್ದ 6 ಭ್ರಷ್ಟ ಅಧಿಕಾರಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಈ ಮೂಲಕ ಒಂದೇ ಪ್ರಕರಣದಲ್ಲಿ 6 ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಲೋಕಾಯುಕ್ತ ದಾಳಿ; 6 ಭ್ರಷ್ಟ ಅಧಿಕಾರಿಗಳು ಖೆಡ್ಡಾಕ್ಕೆ
ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Follow us on

ಬಳ್ಳಾರಿ, ಏ.25: ಬಳ್ಳಾರಿ(Ballari) ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಲೋಕಾಯುಕ್ತ(Lokayukta) ದಾಳಿ ನಡೆಸಿದ್ದು, ಲಕ್ಷ ಲಕ್ಷ ಹಣ ಲಂಚ ಸ್ವೀಕರಿಸುತ್ತಿದ್ದ 6 ಭ್ರಷ್ಟ ಅಧಿಕಾರಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ. ಕೇಸ್ ವರ್ಕರ್​ನಿಂದ ಹಿಡಿದು ಕಮೀಷನರ್​​ವರೆಗೂ ಲಂಚ ಪಡೆದಿದ್ದ ಬುಡ ಅಧಿಕಾರಿಗಳನ್ನ ಬಂಧಿಸಿದ್ದಾರೆ. ಈ ಮೂಲಕ ಒಂದೇ ಪ್ರಕರಣದಲ್ಲಿ ಬುಡಾ ಕಮಿಷನರ್ ರಮೇಶ್, ಬುಡ ಮ್ಯಾನೇಜರ್ ನಾರಾಯಣ, ಬುಡಾ ಟೌನ್ ಪ್ಲಾನಿಂಗ್ ಮೆಂಬರ್ ಕಲ್ಲಿನಾಥ್, ಅಸಿಸ್ಟೆಂಟ್ ಟೌನ್ ಪ್ಲಾನರ್ ಯಶಸ್ವಿನಿ,  ಕೇಸ್ ವರ್ಕರ್ ಶಂಕರ್ ಹಾಗೂ ಬುಡಾ ಜೂನಿಯರ್ ಇಂಜಿನಿಯರ್ ಕಾಜಾ ಹುಸೇನ್ ಸೇರಿ ಆರು ಜನರನ್ನು ಹೆಡೆಮುರಿ ಕಟ್ಟಿದ್ದಾರೆ.

ಪ್ರತಿಯೊಂದು ಅಧಿಕಾರಿ ಇಟ್ಟಿದ್ದರು ಲಂಚಕ್ಕೆ ಬೇಡಿಕೆ

ಇನ್ನು ಈರೇಶ್ ಎಂಬುವವರ 20 ಎಕರೆ ಭೂಮಿಗೆ ಬುಡಾ ಅಪ್ರೂವಲ್ ನೀಡಲು ಲಂಚ ಪಡೆಯುವ ವೇಳೆ ಹಿಡಿಯಲಾಗಿದೆ. ಹೌದು, ಬುಡ ಕಮಿಷನರ್ 5 ಲಕ್ಷ, ಟೌನ್ ಪ್ಲಾನಿಂಗ್ ಮೆಂಬರ್ 6 ಲಕ್ಷ, ಮ್ಯಾನೇಜರ್ 10 ಸಾವಿರ, ಅಸಿಸ್ಟೆಂಟ್ ಟೌನ್ ಪ್ಲಾನರ್ 3 ಲಕ್ಷ,  ತಲಾ 20 ಸಾವಿರದಂತೆ ಜೂನಿಯರ್ ಇಂಜಿನಿಯರ್ ಹಾಗೂ ಕೇಸ್ ವರ್ಕರ್ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ:ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ ಆಗುತ್ತಿದ್ದಂತೆಯೇ ಅಬಕಾರಿ ಡಿಸಿ ರೂಪಾ ನಾಪತ್ತೆ

ಕೋಲಾರ ಜಿಲ್ಲೆಯಲ್ಲಿ ಈವರೆಗೂ ಒಟ್ಟು 40 ಲಕ್ಷಕ್ಕೂ ಅಧಿಕ ಹಣ ಜಪ್ತಿ

ಕೋಲಾರ: ಚುನಾವಣೆ ಸಂಬಂಧ ಚೆಕ್​ ಪೋಸ್ಟ್​ ನಿರ್ಮಿಸಿ ಚುನಾವಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಕೋಲಾರ ಜಿಲ್ಲೆಯಲ್ಲಿ ಈವರೆಗೂ ಒಟ್ಟು 40 ಲಕ್ಷಕ್ಕೂ ಅಧಿಕ ಹಣ ಜಪ್ತಿಯಾಗಿದೆ. 2,81,75,787 ಮೌಲ್ಯದ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ. ಜೊತೆಗೆ 14,85,000 ಲಕ್ಷ ಮೌಲ್ಯದ 16.62 ಕೆಜಿ ಗಾಂಜಾ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3,14,440 ಲಕ್ಷ ಮೌಲ್ಯದ 57.6 ಗ್ರಾಂ ಬಂಗಾರ ಮತ್ತು 30,13,260 ಮೌಲ್ಯದ ವಿವಿಧ ರೀತಿಯ ಸೀರೆ, ಹಾಗೂ ಉಡುಗೋರೆಗಳು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Thu, 25 April 24