ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಓರ್ವನ ಕೊಲೆ: ಸಿಸಿಟಿವಿಯಲ್ಲಿ ಸೆರೆ ಆಯ್ತು ಲೈವ್ ಮರ್ಡರ್​​​

| Updated By: ಗಂಗಾಧರ​ ಬ. ಸಾಬೋಜಿ

Updated on: Sep 28, 2022 | 10:04 AM

ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮದ್ಯೆ ಮಾರಾಮಾರಿ ನಡೆದಿದ್ದು, ಎರಡು ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ದಾಖಲು ಮಾಡಲಾಗಿದೆ.

ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಓರ್ವನ ಕೊಲೆ: ಸಿಸಿಟಿವಿಯಲ್ಲಿ ಸೆರೆ ಆಯ್ತು ಲೈವ್ ಮರ್ಡರ್​​​
ಅಕ್ಕಿ ಮಂಜು ಕೊಲೆಯಾದ ವ್ಯಕ್ತಿ
Follow us on

ಬಳ್ಳಾರಿ: ಮಧ್ಯರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಓರ್ವ ವ್ಯಕ್ತಿಯ ಕೊಲೆ ಮಾಡಿರುವಂತಹ ಘಟನೆ ರೇಡಿಯೋ ಪಾರ್ಕ್ ವೃತ್ತದಲ್ಲಿ ನಡೆದಿದೆ. ಅಕ್ಕಿ ವ್ಯಾಪಾರಿ, ಮಟ್ಕಾ ಬುಕ್ಕಿ ಅಕ್ಕಿ ಮಂಜು ಕೊಲೆಯಾದ ವ್ಯಕ್ತಿ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಯುವಕರಿಂದ ದಾಳಿ ಮಾಡಿದ್ದು, ಕ್ಷಣ ಮಾತ್ರದಲ್ಲೇ ಅಕ್ಕಿ ಮಂಜು ಸಾವನ್ನಪ್ಪಿದ್ದಾರೆ. ಆರೋಪಿಗಳು ಬೆನ್ನಟ್ಟಿ ಬಂದ ದೃಶ್ಯಗಳನ್ನ ನೋಡಿ ಸ್ಥಳೀಯರು ಓಡಿ ಹೋಗಿದ್ದಾರೆ. ಬಳ್ಳಾರಿಯ ಕೌಲಬಜಾರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ಮೃತದೇಹವನ್ನು ವಿಮ್ಸ್​ಗೆ ರವಾನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾದಿನಿ‌ ಕೈ ಕತ್ತರಿಸಿದವನಿಗೆ 7 ವರ್ಷ ಜೈಲು, 30 ಸಾವಿರ ರೂ ದಂಡ:

ತುಮಕೂರು: ನಾದಿನಿ‌ ಕೈ ಕತ್ತರಿಸಿದವನಿಗೆ ಮಧುಗಿರಿ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಹಾಗೂ 30 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಕಳೆದ 2020 ರ ಮಾರ್ಚ್ 15 ರಂದು ಮಧುಗಿರಿ ತಾಲೂಕಿನ ಡಿವಿ ಹಳ್ಳಿಯ ಪತ್ನಿ ಮನೆಗೆ ಬಂದಾಗ ಘಟನೆ ನಡೆದಿತ್ತು. ಹನುಮಂತ ಎಂಬ ವ್ಯಕ್ತಿ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸಿ ಮಚ್ಚಿನಿಂದ ಕೊಲೆಗೆ ಯತ್ನಿಸಿದ್ದಾಗ ಪತ್ನಿ ತಂಗಿ ಅಡ್ಡ ಬಂದಿದ್ದರಿಂದ ಎಡಗೈ ಕತ್ತರಿಸಿದ್ದ. ಮಧುಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾರೋಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾದೀಶ ಕೆ. ಯಾದವರಿಂದ ಶಿಕ್ಷೆ ಪ್ರಕಟ ಮಾಡಲಾಗಿದೆ. ದಂಡದಲ್ಲಿ ಐದು ಸಾವಿರ ಪತ್ನಿಗೆ ಹಾಗೂ 20 ಸಾವಿರ ಪತ್ನಿಯ ತಂಗಿಗೆ ಪರಿಹಾರ ನೀಡಲಾಗಿದೆ. ಸರ್ಕಾರದ ಪರವಾಗಿ ಬಿಎಮ್ ನಿರಂಜನಮೂರ್ತಿ ವಾದ ಮಂಡಿಸಿದರು. ಆಂದ್ರಪ್ರದೇಶದ ಮಡಕಶಿರಾ ಮಂಡಲ್​ನ ಹನುಮಂತ ಶಿಕ್ಷೆಗೆ ಒಳಗಾದವನು. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.

ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮದ್ಯೆ ಮಾರಾಮಾರಿ ಕೇಸ್!

ಯಾದಗಿರಿ: ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮದ್ಯೆ ಮಾರಾಮಾರಿ ನಡೆದಿದ್ದು, ಎರಡು ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಯಾದಗಿರಿ ತಾಲೂಕಿನ ಸಾವೂರು ಗ್ರಾಮದಲ್ಲಿ ಅಡಿಗಲ್ಲು ಸಮಾರಂಭದಲ್ಲಿ ಬ್ಯಾನರ್ ವಿಚಾರಕ್ಕೆ ಘಟನೆ ನಡೆದಿದೆ. ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಹಾಗೂ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್ ಸಮ್ಮುಖದಲ್ಲಿ ನಡೆದಿದ್ದ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಜೆಡಿಎಸ್​ನ ಬಂದಪ್ಪಗೌಡ ಹಾಗೂ ಬಿಜೆಪಿಯ ಶಿವರಾಜ್ ಸೇರಿ ಇತರರ ಮೇಲೆ ಕೇಸ್ ಹಾಕಲಾಗಿದೆ.

ಪೆಟ್ರೋಲ್ ಕದಿಯುತ್ತಿದ್ದ ಕಳ್ಳನಿಂದ ವೃದ್ಧನ ಮೇಲೆ ಹಲ್ಲೆ

ಚಿತ್ರದುರ್ಗ: ಪೆಟ್ರೋಲ್ ಕಳ್ಳತನ ಕಂಡು ಕೂಗಿದ ವೃದ್ಧನ ಮೇಲೆ ಕಳ್ಳನಿಂದ ಹಲ್ಲೆ ಮಾಡಿರುವಂತಹ ಘಟನೆ ತಾಲೂಕಿನ ಹಳೇರಂಗಾಪುರದಲ್ಲಿ ನಡೆದಿದೆ. ಓಬಣ್ಣ ಹಲ್ಲೆಗೊಳಗಾದ ವೃದ್ಧ. ದಾವಣಗೆರೆ ಜಿಲ್ಲೆ ಮಾಯಕೊಂಡ ಗ್ರಾಮದ ಆರೋಪಿ ವಸಂತ್ ನಾಯ್ಕ್ ಚಾಕು ಇರಿದಿದ್ದಾನೆ. ಆರೋಪಿಯನ್ನು ಥಳಿಸಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಓಬಣ್ಣ ಚಿತ್ರದುರ್ಗ ನಗರದಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.